Bigg Boss Kannada 12 Gilli Kavya : ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಲ್ಲ ಉಲ್ಟಾ ಆಗಿದೆ. ಇಷ್ಟು ದಿನ ಕಾವ್ಯ ಹಿಂದೆ ಗಿಲ್ಲಿ ಹೋಗ್ತಿದ್ರು. ಈಗ ಗಿಲ್ಲಿ ಹಿಂದೆ ಕಾವ್ಯಾ ಹೋಗ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಜೋಡಿಯಾಗಿ ಬಂದ ಗಿಲ್ಲಿ ಹಾಗೂ ಕಾವ್ಯ ಬಿಗ್ ಬಾಸ್ ಮನೆಯ ಸೂಪರ್ ಜೋಡಿ. ಈಗ ಇಬ್ಬರೂ ಒಂಟಿಯಾಗಿ ಆಟ ಆಡ್ತಿದ್ರೂ ಗಿಲ್ಲಿ ಮಾತ್ರ ಕಾವ್ಯರನ್ನು ಬಿಟ್ಟುಕೊಡೋದಿಲ್ಲ. ಕಾವ್ಯ ನನ್ನ ಗರ್ಲ್ ಫ್ರೆಂಡ್ ಅಂತಾನೇ ಗಿಲ್ಲಿ ಕಾವ್ಯಾರನ್ನು ಸದಾ ಕಾಲೆಳೆಯುತ್ತಾರೆ. ಕಾವ್ಯಾ ಅದೆಷ್ಟು ಬಾರಿ ಗಿಲ್ಲಿಯಿಂದ ದೂರವಾಗುವ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗಿಲ್ಲ. ಒಂದಷ್ಟು ದಿನ ಗಿಲ್ಲಿಯಿಂದ ದೂರ ಇರೋ ಪ್ರಯತ್ನ ಮಾಡಿದ್ದ ಕಾವ್ಯ ಈಗ ಮತ್ತೆ ಗಿಲ್ಲಿ ಜೊತೆ ಓಡಾಡ್ತಿದ್ದಾರೆ.
25
ಗಿಲ್ಲಿ ಅರ್ಥ ಮಾಡ್ಕೊಂಡಿರುವ ಕಾವ್ಯ
ಗಿಲ್ಲಿ ಹಾಗೂ ಕಾವ್ಯ ಮಧ್ಯೆ ಬಾಂಡಿಂಗ್ ಚೆನ್ನಾಗಿದೆ. ಗಿಲ್ಲಿ ಏನು ನಿರ್ಧಾರ ತೆಗೆದುಕೊಳ್ತಾರೆ, ಗಿಲ್ಲಿ ಸ್ವಭಾವ ಏನು ಅನ್ನೋದನ್ನು ಕಾವ್ಯ ಚನ್ನಾಗಿ ತಿಳಿದುಕೊಂಡಿದ್ದಾರೆ. ನಾಮಿನೇಷನ್ ಟಾಸ್ಕ್ ಒಂದರಲ್ಲಿ ಈ ವಿಷ್ಯ ವೀಕ್ಷಕರಿಗೂ ಸ್ಪಷ್ಟವಾಗಿತ್ತು. ಗಿಲ್ಲಿ, ಕಾವ್ಯರಿಗಾಗಿ ತಾವೇ ನಾಮಿನೇಟ್ ಆಗಿದ್ರು. ಆದ್ರೆ ಗಿಲ್ಲಿ ಅತಿಯಾಗಿ ಆಡ್ತಾರೆ ಎನ್ನುವ ಆರೋಪ ಒಂದನ್ನು ಕಾವ್ಯ ಮಾಡ್ತಾನೆ ಇರ್ತಾರೆ. ಆಗಾಗ ಕಾವ್ಯಾ, ಗಿಲ್ಲಿಗೆ ಬುದ್ಧಿ ಹೇಳುವ ಪ್ರಯತ್ನ ಕೂಡ ಮಾಡಿದ್ದಾರೆ. ಕಾವ್ಯ ಏನೇ ಹೇಳಿದ್ರೂ ತಲೆಯಾಡಿಸುವ ಗಿಲ್ಲಿ, ಕೊನೆಯಲ್ಲಿ ತಾವು ಹೇಳಿದ್ದನ್ನೇ ಮಾಡೋದು. ಗಿಲ್ಲಿ ಈ ಸ್ವಭಾವ ಬಹುತೇಕ ಎಲ್ಲ ವೀಕ್ಷಕರಿಗೂ ಗೊತ್ತಾಗಿದೆ. ಆದ್ರೆ ಗಿಲ್ಲಿ, ಕಾವು ಕಾವು ಅಂತ ಕಾವ್ಯ ಹಿಂದೆ ಹೋಗೋದು ಫ್ಯಾನ್ಸ್ ಗೆ ಇಷ್ಟ.
35
ಗಿಲ್ಲಿ ಹಿಂದೆ ಹೊರಟ ಕಾವ್ಯ
ಇಷ್ಟು ದಿನ ಕಾವು ಕಾವು ಅಂತ ಗಿಲ್ಲಿ ಕಾವ್ಯಾ ಹಿಂದೆ ಹೋಗ್ತಿದ್ರು. ಕ್ಯಾಪ್ಟನ್ ಆದ್ಮೇಲೆ ಕಾವ್ಯ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಗಿಲ್ಲಿ ಕಾವ್ಯ ಹಿಂದೆ ಹೋಗೋ ಬದಲು ಕಾವ್ಯಾ ಗಿಲ್ಲಿ ಹಿಂದೆ ಹೋಗ್ತಿದ್ದಾರೆ. ಎಲ್ಲ ಕಡೆ ಗಿಲ್ಲಿ ಪಕ್ಕದಲ್ಲಿ ಬಂದು ಕುಳಿತುಕೊಳ್ತಿದ್ದಾರೆ. ಸಾಮಾನ್ಯವಾಗಿ ಗಿಲ್ಲಿ, ಕಾವ್ಯಗೆ ಜಾಗ ಹಿಡಿದುಕೊಳ್ತಿದ್ದರು. ಗಿಲ್ಲಿ ಹಾಗೂ ಮಾಳು ಮಧ್ಯದಲ್ಲಿ ರಕ್ಷಿತಾಗೆ ಸದಾ ಜಾಗ ಮೀಸಲಿರ್ತಿತ್ತು. ಗಿಲ್ಲಿ ಪಕ್ಕದಲ್ಲಿ ರಕ್ಷಿತಾ ಬಂದು ಕುಳಿತುಕೊಳ್ಳೋದು ಕೂಡ ಕಾಮನ್. ಆದ್ರೆ ಈ ಬಾರಿ ರಕ್ಷಿತಾ ಹಾಗೂ ಗಿಲ್ಲಿ ಮಧ್ಯಕ್ಕೆ ಕಾವ್ಯಾ ಬಂದಿದ್ದಾರೆ. ಗಿಲ್ಲಿ ಎಲ್ಲಿರ್ತಾರೋ ಅಲ್ಲಿಗೆ ಬರುವ ಕಾವ್ಯ, ಅವರ ಪಕ್ಕದಲ್ಲಿ ಬಂದು ಕುಳಿತುಕೊಳ್ತಿದ್ದಾರೆ. ಇದು ನೋಡುಗರಿಗೆ ಮಜ ನೀಡ್ತಿದೆ. ಕಾವ್ಯ ಕೂಡ ಬದಲಾಗಿದ್ದಾರಾ ಇಲ್ಲ ಗಿಲ್ಲಿಗೆ ಕಾಟ ಕೊಡ್ತಿದ್ದಾರಾ ಗೊತ್ತಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಕಾವ್ಯ ಹಾಗೂ ಗಿಲ್ಲಿ ವಿಡಿಯೋ ಫೋಸ್ಟ್ ಮಾಡಿ ವೈರಲ್ ಮಾಡಲಾಗ್ತಿದೆ. ಕಾವ್ಯ ಗಿಲ್ಲಿ ಒಳ್ಳೆ ಫ್ರೆಂಡ್ಸ್, ಇಬ್ಬರು ಒಟ್ಟಿಗಿದ್ರೆ ನೋಡೋಕೆ ಚೆಂದ ಎನ್ನುವ ಕಮೆಂಟ್ ಗಳು ಬಂದಿವೆ. ಇನ್ನು ಕೆಲವರು, ಗಿಲ್ಲಿ ಹಿಂದೆ ಮೂರು ಹುಡುಗಿಯರು ಬಿದ್ದಿದ್ದಾರೆ. ಗಿಲ್ಲಿ ಮಾತ್ರ ಒಂದೇ ಹುಡುಗಿ ಹಿಂದೆ ಬಿದ್ದಿದ್ದಾರೆ. ರಕ್ಷಿತಾರನ್ನು ತಂಗಿಯಂತೆ, ಸ್ಪಂದನಾ ಅವರನ್ನು ಗೆಳತಿಯಂತೆ ನೋಡ್ತಿದ್ದಾರೆ ಅಂತ ಅಲ್ಲೇ ಗಿಲ್ಲಿ ಫ್ಯಾನ್ಸ್ ಚರ್ಚೆ ಶುರು ಮಾಡಿದ್ದಾರೆ.
55
ಕಾವ್ಯ ಕುಟುಂಬ ಬಂದ್ರೆ ಏನಾಗುತ್ತೆ?
ಸದ್ಯ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಈಗಾಗಲೇ ರಾಶಿಕಾ, ಸೂರಜ್, ಧನುಷ್ ಮನೆಯವರು ಬಂದಾಗಿದೆ. ಕಾವ್ಯಗೆ ತಮ್ಮ ಮನೆಯವರು ಬಂದ್ರೆ ಗಿಲ್ಲಿ ಜೊತೆ ಏನು ಮಾಡ್ತಾರೆ ಎನ್ನುವ ಪ್ರಶ್ನೆ ಕಾಡ್ತಿದೆ. ಗಿಲ್ಲಿಗೆ ಕೂಡ ತಮ್ಮ ಮನೆಗಿಂತ ಕಾವ್ಯ ಮನೆಯವರು ಬಂದ್ರೆ ಹೇಗೆ ರಿಯಾಕ್ಟ್ ಮಾಡ್ಬೇಕು ಎನ್ನುವ ಟೆನ್ಷನ್ ಕಾಡ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.