Roshan proposes Anushree: ಇತ್ತೀಚೆಗಷ್ಟೇ ಮಹಾನಟಿ ರಿಯಾಲಿಟಿ ಶೋನಲ್ಲಿ ಅನುಶ್ರೀ, ಗಂಡ ರೋಷನ್ ನಾಚಿಕೆ ಸ್ವಭಾವದವರು. ಒಮ್ಮೆ ನಾನು ಅವರನ್ನು ವೇದಿಕೆ ಮೇಲೆ ಕರೆದುಕೊಂಡು ಬರುತ್ತೇನೆ ಅಂದಿದ್ದರು. ಅಂತೆಯೇ ವೇದಿಕೆ ಮೇಲೆ ಬಂದು ಹೆಂಡ್ತಿಗೇ ಸರ್‌ಪ್ರೈಸ್ ನೀಡಿದ್ದಾರೆ ರೋಷನ್.
ಕಿರುತೆರೆ ವೀಕ್ಷಕರಿಗೆ ಅನುಶ್ರೀ ಯಾವಾಗ್ಲೂ ಮನೆ ಮಗಳೇ. ಅನುಶ್ರೀ ಇರದಿದ್ದರೆ ಆ ರಿಯಾಲಿಟಿ ಶೋ ನೋಡಲೇ ಬೇಜಾರು ಎನ್ನುವವರು ಇದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗಷ್ಟೇ ‘ಜೀ ಕುಟುಂಬ ಅವಾರ್ಡ್ಸ್’ ಸಮಾರಂಭ ನಡೆಯಿತು. ಈ ಸಮಾರಂಭಕ್ಕೆ ಅನುಶ್ರೀ ಪತಿ ರೋಷನ್ ಬಂದಿರುವುದು ಎಲ್ಲರ ಗಮನಸೆಳೆದಿದೆ.
26
ಹೆಂಡ್ತಿಗೇ ಸರ್‌ಪ್ರೈಸ್ ನೀಡಿದ್ದಾರೆ ರೋಷನ್
ಹೌದು, ಇತ್ತೀಚೆಗಷ್ಟೇ ಮಹಾನಟಿ ರಿಯಾಲಿಟಿ ಶೋನಲ್ಲಿ ಅನುಶ್ರೀ, ಗಂಡ ರೋಷನ್ ನಾಚಿಕೆ ಸ್ವಭಾವದವರು. ಒಮ್ಮೆ ನಾನು ಅವರನ್ನು ವೇದಿಕೆ ಮೇಲೆ ಕರೆದುಕೊಂಡು ಬರುತ್ತೇನೆ ಅಂದಿದ್ದರು. ಅಂತೆಯೇ ವೇದಿಕೆ ಮೇಲೆ ಬಂದು ಹೆಂಡ್ತಿಗೇ ಸರ್‌ಪ್ರೈಸ್ ನೀಡಿದ್ದಾರೆ ರೋಷನ್.
36
ಅಭಿಮಾನಿಗಳಂತೂ ಫುಲ್ ಖುಷ್
ಅಷ್ಟೇ ಅಲ್ಲ, ರೋಷನ್ ಅನುಶ್ರೀಗೆ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಿಕೊಂಡಿರುವುದು ಎಲ್ಲರ ಮನಗೆದ್ದಿದೆ. ಇದರಿಂದ ಅನುಶ್ರೀ ಅಭಿಮಾನಿಗಳಂತೂ ಫುಲ್ ಖುಷ್ ಆಗಿರುವುದನ್ನ ನೋಡಬಹುದು. ಹಾಗೆಯೇ ಜೀ಼ ಕುಟುಂಬದ ಪರವಾಗಿ ಅಭಿಮಾನದಿಂದ ಶಿವಣ್ಣ ಹರಸಿ ಹಾರೈಸಿರುವುದು ಎಲ್ಲರ ಮನ ಗೆದ್ದಿದೆ.
ಮೊದಲಿನಿಂದರೂ ಡಾ.ರಾಜ್ ಫ್ಯಾಮಿಲಿ ಎಂದರೆ ಅನುಶ್ರೀಗೆ ಅಪಾರ ಗೌರವ. ಪ್ರತಿ ಸಾರಿ ವೇದಿಕೆಗೆ ಬಂದಾಗ ಅಣ್ಣಾವ್ರ ಕುಟುಂಬದ ಬಗ್ಗೆ ಅನುಶ್ರೀ ಮೆಚ್ಚುಗೆ ಮಾತುಗಳನ್ನ ನೀವು ಕೇಳಿರಬಹುದು. ಇನ್ನು ಶಿವಣ್ಣ ಫ್ಯಾಮಿಲಿ ಅನುಶ್ರೀ ಮದುವೆಗೆ ತೆರಳಿ, ದಂಪತಿಗೆ ವಿಶ್ ಮಾಡಿ ಬಂದಿದ್ರು. ಅಷ್ಟೇ ಅಲ್ಲ, ಶಿವಣ್ಣ-ಗೀತಕ್ಕ ತಮ್ಮ ತಂಗಿ ಮದುವೆಯಾದಷ್ಟೇ ಖುಷಿಪಟ್ಟಿದ್ದರು.
56
ಸಿಹಿ ಕ್ಷಣದ ವಿಡಿಯೋ
ಇದೀಗ ‘ಜೀ ಕುಟುಂಬ ಅವಾರ್ಡ್ಸ್’ ಫಂಕ್ಷನ್‌ಗೆ ಬಂದಿರುವ ಶಿವಣ್ಣ ಅನುಶ್ರೀಗಾಗಿ ಮನಸಾರೆ ಮುತ್ತಣ್ಣನ ಸಿನಿಮಾದ ಗೀತೆಯನ್ನ ಹಾಡಿದ್ದು, ಆಶೀರ್ವಾದ ಮಾಡಿದ್ದಾರೆ. ಪತಿ ರೋಷನ್ ಮಂಡಿಯೂರಿ ಪ್ರಪೋಸ್ ಮಾಡಿರುವುದು, ಶಿವಣ್ಣನ ಗೀತೆ ಈ ಎರಡೂ ಸಿಹಿ ಕ್ಷಣದ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹೇಳ್ತಿರೋದೇನು ನೋಡೋಣ ಬನ್ನಿ..
66
"ಭಾವ ಅಂತು ಬಂದರು.."
*ನಮ್ ರೋಷನ್ ಭಾವ ಬಂದಿದ್ದು ಯಾರಿಗೆಲ್ಲಾ ಖುಷಿ ಆಯ್ತು!?. *ಯಾರೆಲ್ಲಾ ಪ್ರೋಮೋ ನಾ 2ಸಲಕಿಂತ ಜಾಸ್ತಿ ಸಲ ನೋಡಿದ್ರಿ!? *ಶ್ರೀಮತಿ ಅನುಶ್ರೀ ಅಂತ ಕೇಳೋದೆ ಚಂದ. *ನಮ್ ಅನು ಅಕ್ಕಾ, ರೋಷನ್ ಭಾವ ಜೋಡಿ ಅಂದ್ರೆ ಯಾರಿಗೆಲ್ಲಾ ಇಷ್ಟ!?. *ನಮ್ ಶಿವಣ್ಣ, ಹಾರೈಸಿದ್ದು ಯಾರಿಗೆಲ್ಲಾ ಖುಷಿ ಆಯ್ತು!? *ಬಂದರೊ ಬಂದರೊ ನಮ್ಮ ಭಾವ ಅಂತು ಬಂದರು. ನಮ್ಮ ಅನು ಅಕ್ಕ ಖುಷಿ ಚಂದ