ಮಂಗಳವಾರ ಸಂಚಿಕೆಯಲ್ಲಿ ನಿತ್ಯಾ ಮದುವೆಯಾಗುತ್ತಿರುವ ಹುಡುಗ ಕಾಣೆಯಾಗಿದ್ದಾನೆ. ಮನೆಯ ಸದಸ್ಯರೆಲ್ಲರೂ ಎಲ್ಲೆಡೆ ಹುಡುಕಿದರೂ ಪತ್ತೆಯಿಲ್ಲ. ಕೊನೆಗೆ ನಿತ್ಯಾಳೇ ಹುಡುಗನ ಮನೆಯ ಹತ್ತಿರ ಹೋದಾಗ ಅವರು ಮನೆ ಕ್ಲೋಸ್ ಮಾಡಿಕೊಂಡು ಹೋಗಿರುವುದು ಗೊತ್ತಾಗುತ್ತದೆ. ಇಂದಿನ ಸಂಚಿಕೆಯಲ್ಲಿ ಕರ್ಣನ ಅಜ್ಜಿ ನಿತ್ಯಾಳನ್ನು ಕರ್ಣ ಮದ್ವೆಯಾಗ್ತಾನೆ ಎಂದು ಘೋಷಿಸಿದ್ದಾಳೆ. ಇದರಿಂದ ನಿತ್ಯಾ, ನಿಧಿ, ಕರ್ಣ ಮೂರು ಜನರ ಹೃದಯ ಒಡೆದುಹೋಗಿದೆ. ಇಷ್ಟೆಲ್ಲಾ ಆದ್ರೂ ಇಂತಿಪ್ಪ ನಮ್ಮ ನಿರ್ದೇಶಕರು ಅದೇ ಮದುವೆಯ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ, "ಮೊಮ್ಮಕ್ಕಳ ಮದುವೆ ಅಂತ ಅಜ್ಜಿಯರು ಫುಲ್ ಖುಷ್, ಕರ್ಣ ತಾಳಿ ಯಾರಿಗೆ ಕಟ್ತಾನೆ ಅನ್ನೋದೇ ಫುಲ್ ಸಸ್ಪೆನ್ಸ್!" ಅಂದಿದ್ದಾರೆ. ಇದನ್ನ ಕೇಳಿದ ವೀಕ್ಷಕರಿಗೆ ಏನಪ್ಪಾ ಇದು ಹೊಸ ವರಸೆ ಅಂತೆನಿಸಿದೆ.