‘ಸೀತಾ ರಾಮ’ ಧಾರಾವಾಹಿಯ ನಂತರ ಮದುವೆಯಾಗಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ವೈಷ್ಣವಿ ಗೌಡ ಸದ್ಯದಲ್ಲೆ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆಯಾದ ಬಳಿಕ ನಟನೆಯಿಂದ ದೂರಾನೆ ಉಳಿಯುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿತ್ತು. ಆದರೆ ಇದೀಗ ನಟಿ ಕಿರುತೆರೆಗೆ ಕಂ ಬ್ಯಾಕ್ ಮಾಡುವ ವಿಷ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
26
ಮತ್ತೆ ಸೀರಿಯಲ್ ನಲ್ಲಿ ನಟಿಸ್ತಾರ ವೈಷ್ಣವಿ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ಸೀತಾ ರಾಮ’ ಬಳಿಕ ವೈಷ್ಣವಿ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಹೊಸ ಸೀರಿಯಲ್ ನಲ್ಲಿ ನಟಿಸುವುದಾಗಿ ಸುದ್ದಿ ಬಂದಿದೆ.
36
ಯಾವ ಸೀರಿಯಲ್?
ಜೈ ಮಾತಾ ಕಂಬೈನ್ಸ್ ಲಿ ಬರುತ್ತಿರುವ ಹೊಚ್ಚ ಹೊಸ ಧಾರಾವಾಹಿ ಮೂಲಕ ವೈಷ್ಣವಿ ಗೌಡ, ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಸದ್ಯ ಕನ್ನಡದ ಎಲ್ಲಾ ಚಾನೆಲ್ ಗಳಲ್ಲಿ ಹೊಚ್ಚ ಹೊಸ ಸೀರಿಯಲ್ ಗಳು ಬರುತ್ತಿವೆ. ಆದರೆ ವೈಷ್ಣವಿ ಯಾವ ಚಾನೆಲ್ ನಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾ ಮಾಹಿತಿಯ ಪ್ರಕಾರ ಉದಯ ಟಿವಿ ಅಥವಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಧಾರಾವಾಹಿ ಎನ್ನಲಾಗುತ್ತಿದೆ.
56
ಬಿಗ್ ಬಾಸ್ ಬಳಿಕ ಸೀರಿಯಲ್ ಶುರು
ಸದ್ಯ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ನಡೆಯುತ್ತಿದೆ. ಈ ರಿಯಾಲಿಟಿ ಶೋ ವರ್ಷದ ಕೊನೆಯವರೆಗೂ ನಡೆಯುವ ಸಾಧ್ಯತೆ ಇದೆ. ಬಿಗ್ ಬಾಸ್ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್’ಗಳು ಶುರುವಾಗಲಿದೆ. ಹಾಗಾಗಿ ವೈಷ್ಣವಿ ಕೂಡ ಕಲರ್ಸ್ ಸೀರಿಯಲ್ ನಲ್ಲಿ ನಟಿಸಲಿದ್ದಾರೆ ಎನ್ನುವ ಊಹಾಪೋಹ ಕೂಡ ಇದೆ.
66
ಸೀತಾರಾಮ ಸೀರಿಯಲ್ ಕೊನೆ
‘ಅಗ್ನಿ ಸಾಕ್ಷಿ’ ಮೂಲಕ ಜನಪ್ರಿಯತೆ ಪಡೆದ ವೈಷ್ಣವಿ ಗೌಡ ಅವರು ಕೊನೆಯದಾಗಿ ‘ಸೀತಾರಾಮʼ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಒಂದು ಮೈಕ್ರೋ ಸಿರೀಸ್‌ನಲ್ಲಿ ನಟ ಸ್ಕಂದ ಅಶೋಕ್ ಜೊತೆ ನಟಿಸಿದ್ದರು. ಈ ಸೀರೀಸ್ ಸದ್ಯ ಪ್ರಸಾರವಾಗುತ್ತಿದೆ. ವೈಷ್ಣವಿ ಗೌಡ ಮತ್ತೆ ಕಂ ಬ್ಯಾಕ್ ಮಾಡ್ತಾರ ಕಾದು ನೋಡಬೇಕು.