ಗಿಲ್ಲಿ ನಟನ ಡಬಲ್ ಗೇಮ್ ಮುಖವಾಡ ಕಳಚಿದ ಅಭಿಷೇಕ್? ಯಾರಿಗೂ ಕಾಣದ್ದು ಅಭಿಗೆ ಕಾಣಿಸ್ತಾ?

Published : Nov 19, 2025, 01:08 PM IST

ಬಿಗ್‌ಬಾಸ್ ಮನೆಯಲ್ಲಿ ನಡೆದ ಟಾಸ್ಕ್‌ನಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಾಯಕರಾಗಿದ್ದರು. ತನ್ನ 'ವಂಶದ ಕುಡಿ' ಎಂದು ಕರೆದಿದ್ದ ರಕ್ಷಿತಾ ಶೆಟ್ಟಿಯನ್ನು ಗಿಲ್ಲಿ ನಟ ತನ್ನ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಅಂತಿಮವಾಗಿ ರಕ್ಷಿತಾ, ಅಶ್ವಿನಿ ತಂಡದ ಪರ ಆಡಿ ಗೆಲುವಿಗೆ ಕಾರಣರಾದರು.

PREV
15
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಮಾತುಗಳು ಹೆಚ್ಚಾಗಿ ಸದ್ದು ಮಾಡುತ್ತಿವೆ. ಈ ವಾರದ ಟಾಸ್ಕ್‌ಗಳನ್ನು ಆಡಲು ಇಬ್ಬರು ನಾಯಕರನ್ನು ಮಾಡಲಾಗಿದೆ. ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ತಂಡದ ನಾಯಕರಾಗಿದ್ದು, ಟಾಸ್ಕ್‌ಗಳಿಗನುಸಾರವಾಗಿ ಆಟಗಾರರು ಬದಲಾಗುತ್ತಿರುತ್ತಾರೆ.

25
ವಂಶದ ಕುಡಿ

ಡ್ರಮ್‌ನಲ್ಲಿ ನೀರು ತುಂಬಿಸುವ ಟಾಸ್ಕ್‌ ಘೋಷಣೆಯಾಗುತ್ತಿದ್ದಂತೆ ಇಬ್ಬರು ನಾಯಕರು ತಮ್ಮ ಪರವಾಗಿ ಆಡುವಂತೆ ಸ್ಪರ್ಧಿಗಳ ಮನವೊಲಿಸಲು ಮುಂದಾದರು. ಕಳೆದ ವಾರ ರಕ್ಷಿತಾ ಶೆಟ್ಟಿಯನ್ನು ತನ್ನ ವಂಶದ ಕುಡಿ ಎಂದು ಗಿಲ್ಲಿ ನಟ ಕರೆದುಕೊಂಡಿದ್ದರು. ಆದ್ರೆ ಆಟಕ್ಕೆ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ವಂಶದ ಕುಡಿಯನ್ನೇ ಗಿಲ್ಲಿ ನಟ ಮರೆತರು ಎಂದು ಅಭಿಷೇಕ್ ಹೇಳಿದ್ದಾರೆ.

35
ರಕ್ಷಿತಾ ಶೆಟ್ಟಿ

ಗಿಲ್ಲಿ ನಟ ಪರವಾಗಿ ರಘು, ಸೂರಜ್, ಕಾವ್ಯಾ, ಸ್ಪಂದನಾ, ರಾಶಿಕಾ ಆಟವಾಡಿದ್ದರು. ಇತ್ತ ಅಶ್ವಿನಿ ಗೌಡ ಪರವಾಗಿ ಅಭಿಷೇಕ್, ಧನುಷ್, ಜಾನ್ವಿ, ರಿಷಾ ಮತ್ತು ರಕ್ಷಿತಾ ಆಟವಾಡಿದ್ದರು. ಅಂತಿಮವಾಗಿ ಗಿಲ್ಲಿ ನಟ ತಂಡದ ಡ್ರಮ್‌ ಕೆಳಗೆ ಬೀಳಿಸುವ ಮೂಲಕ ಅಶ್ವಿನಿ ಗೌಡ ಟೀಂ ಆಟವನ್ನು ಗೆದ್ದುಕೊಂಡಿದೆ. ಗುರಾಣಿ ಹಿಡಿದು ನಿಂತುಕೊಂಡಿದ್ದ ರಕ್ಷಿತಾ ಶೆಟ್ಟಿ, ಎದುರಾಳಿಗಳ ಬಕೆಟ್ ಒಡೆದು ಹಾಕಿದ್ದರು. ಮತ್ತೊಂದೆಡೆ ಜಾನ್ವಿ ಮತ್ತು ರಿಷಾ ನಿಧಾನವಾಗಿ ಡ್ರಮ್‌ಗೆ ನೀರು ತುಂಬಿಸಿ ಭಾರ ಹೆಚ್ಚಾಗುವಂತೆ ಮಾಡಿದ್ದರು.

45
ಸ್ಪಂದನಾ ಮತ್ತು ಅಭಿಷೇಕ್

ಈ ಟಾಸ್ಕ್ ಮುಗಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಸ್ಪಂದನಾ ಮತ್ತು ಅಭಿಷೇಕ್ ಮಾತನಾಡುತ್ತಿರುತ್ತಾರೆ. ಗಿಲ್ಲಿಗೆ ತನ್ನ ತಂಡದಲ್ಲಿ ರಕ್ಷಿತಾ ಆಟವಾಡೋದು ಬೇಕಿರಲಿಲ್ಲ. ವಂಶದ ಕುಡಿ ಅಂತ ಕರೀತಾನೆ, ಆದ್ರೆ ಆಟಕ್ಕೆ ರಕ್ಷಿತಾ ಬೇಡ. ಎಲ್ಲವೂ ಇಲ್ಲಿ ಬದಲಾಗುತ್ತಿರುತ್ತದೆ. ರಕ್ಷಿತಾ ಅವರನ್ನು ಆಟಕ್ಕೆ ಗಿಲ್ಲಿ ಕರದೇ ಇರಲಿಲ್ಲ. ಅಂತಿಮವಾಗಿ ಅಶ್ವಿನಿ ಅವರೇ ಕರೆದರು ಎಂದು ಅಭಿಷೇಕ್ ಹೇಳಿದ್ದಾರೆ. ಇವರಿಬ್ಬರ ಸಂಭಾಷಣೆಯ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇದನ್ನು ಓದಿ: Bigg Boss Kannada 12: ಕರ್ಮ ರಿಟರ್ನ್ ಎಂದ ಗಿಲ್ಲಿಗೆ ಇದು ನನಗೆ ಆಗಬೇಕಿತ್ತು ಎಂದ ರಕ್ಷಿತಾ ಶೆಟ್ಟಿ

55
ಕಮೆಂಟ್

ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ರಕ್ಷಿತಾ ಅವರಿಂದ ಗಿಲ್ಲಿ ನಟ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಆದ್ರೆ ಆಟಕ್ಕೆ ಅಂತ ಬಂದಾಗ ಅಶ್ವಿನಿ ಗೌಡ ಪರವಾಗಿಯೇ ರಕ್ಷಿತಾ ಆಟವಾಡುತ್ತಾರೆ. ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಅದೃಷ್ಟ ಎಂದು ಕರೆದಿದ್ದಾರೆ. ಟಾಸ್ಕ್ ವೇಳೆ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಜಗಳ ನಡೆದಿತ್ತು.

ಇದನ್ನೂ ಓದಿ: BBK 12: ಇದು ಕಿಚ್ಚು ಅಲ್ಲಾ, ಜ್ವಾಲೆ; ಕಾಮನ್‌ಸೆನ್ಸ್‌ ಅನ್ನೋದನ್ನು ಮರೆತ್ರಾ ಬಿಗ್‌ಬಾಸ್ ಸ್ಪರ್ಧಿಗಳು

Read more Photos on
click me!

Recommended Stories