ಮೊದಲ ಬಾರಿಗೆ ಮುದ್ದಿನ ಮಗಳನ್ನು ಪರಿಚಯಿಸಿದ ‘ಗಿಣಿರಾಮ’ ನಾಯಕ ರಿತ್ವಿಕ್ ಮಠದ್

Published : May 01, 2026, 04:58 PM IST

ಗಿಣಿರಾಮ, ನಿನಗಾಗಿ ಧಾರಾವಾಹಿ ಹಾಗೂ ಮಾರ್ನಮಿ ಸಿನಿಮಾ ನಟ ರಿತ್ವಿಕ್ ಮಠದ್ ಕೆಲವು ತಿಂಗಳ ಹಿಂದಾಷ್ಟೇ ಹೆಣ್ಣು ಮಗುವಿಗೆ ಅಪ್ಪನಾಗಿ ಭಡ್ತಿ ಪಡೆದಿದ್ದು, ಇತ್ತೀಚೆಗೆ ನಾಮಕರಣ ಸಮಾರಂಭ ಮಾಡಿದ್ದು, ಮೊದಲ ಬಾರಿಗೆ ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. 

PREV
17
ರಿತ್ವಿಕ್ ಮಠದ್

ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರಾವಾಹಿಗಳಲ್ಲಿ ನಟಿಸಿ, ‘ಗಿಣಿರಾಮ’ ಧಾರಾವಾಹಿಯಲ್ಲಿ ಶಿವರಾಮನಾಗಿ ಜನಪ್ರಿಯತೆ ಗಳಿಸಿ, ನಿನಗಾಗಿ ಧಾರಾವಾಹಿ ಮೂಲಕ ಜನಮನ ಗೆದ್ದ ನಟ ರಿತ್ವಿಕ್ ಮಠದ್, ಕೆಲವು ತಿಂಗಳ ಹಿಂದೆ ಹೆಣ್ಣುಮಗುವಿಗೆ ತಂದೆಯಾಗಿದ್ದರು. ಇದೀಗ ಮೊದಲ ಬಾರಿಗೆ ಮಗಳನ್ನು ಪರಿಚಯಿಸಿದ್ದಾರೆ.

27
ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಮಗು ಜನನ

ರಿತ್ವಿಕ್ ಮಠದ್ ಮತ್ತು ಸುಮನ್ ದಂಪತಿಗಳು ಸ್ವಾತಂತ್ರ್ಯ ದಿನಾಚರಣೆ- ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಮುಹೂರ್ತದಂದು ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಸುಮನ್ ಅವರು ರಿತ್ವಿಕ್ ಮಗುವನ್ನು ಹಿಡಿದಿರುವ ಫೋಟೊವನ್ನು ಹಂಚಿಕೊಂಡಿದ್ದು, ತಮ್ಮ ಹೆಣ್ಣುಮಗು ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

37
Daddy’s little princess

ಮಗು ಹುಟ್ಟಿದ ಸಂದರ್ಭದಲ್ಲಿ ರಿತ್ವಿಕ್ ಪತ್ನಿ ಸುಮನ್, ರಿತ್ವಿಕ್ ಮಗುವನ್ನು ಕೈಯಲ್ಲಿ ಹಿಡಿದು ನಗುತ್ತಿರುವ ಫೋಟೊವನ್ನು ಶೇರ್ ಮಾಡಿದ್ದರು, ಫೋಟೊ ಕ್ಲಿಕ್ ಮಾಡಿರುವ ಸುಮನ್ Daddy’s little princess is here ಎಂದು ಬರೆದುಕೊಂಡಿದ್ದರು. ಇದೀಗ ಮಗುವಿನ ನಾಮಕರಣ ಸಮಾರಂಭದ ಫೋಟೊವನ್ನು ಹಂಚಿಕೊಂಡಿದ್ದಾರೆ.

47
ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ ರಿತ್ವಿಕ್

ರಿತ್ವಿಕ್ ಮಠದ್ ನಾಮಕರಣ ಸಮಾರಂಭದ ಮುದ್ದಾದ ಫೋಟೊಗಳನ್ನು ಶೇರ್ ಮಾಡುವ ಮೂಲಕ, ಮೊದಲ ಬಾರಿಗೆ ತಮ್ಮ ಅಭಿಮಾನಿಗಳಿಗೆ ಮಗಳನ್ನು ಪರಿಚಯಿಸಿದ್ದಾರೆ. ಚಂದದ ಲಂಗ ರವಿಕೆ ಧರಿಸಿ, ಮಗಳು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಫೋಟೊಗಳ ಜೊತೆಗೆ ರಿತ್ವಿಕ್ ಮಗಳ ಹೆಸರು ರಿವೀಲ್ ಮಾಡಿದ್ದಾರೆ.

57
ಮಗಳ ಹೆಸರು ರಿವೀಲ್ ಮಾಡಿದ ನಟ

ರಿತ್ವಿಕ್ ಮಠದ್ ತಮ್ಮ ಮಗಳಿಗೆ ಇಟ್ಟಂತಹ ಹೆಸರನ್ನು ಸಹ ರಿವೀಲ್ ಮಾಡಿದ್ದಾರೆ. “Introducing our little story… Lipi Mathad. ‘Lipi’ ಅಂದರೆ ಬರಹ — ನಮ್ಮ ಜೀವನದ ಅತ್ಯಂತ ಸುಂದರ ಕಥೆ ಎಂದು ನಟ ತಿಳಿಸಿದ್ದಾರೆ.

67
ಶುಭಕೋರಿದ ಸೀರಿಯಲ್ ತಾರೆಯರು

ರಿತ್ವಿಕ್ ಹಂಚಿಕೊಂಡಿರುವ ಫೋಟೋಗಳನ್ನು ನೋಡಿ ಕನ್ನಡ ಕಿರುತೆರೆ ತಾರೆಯರು ಶುಭಾಶಯ ತಿಳಿಸಿದ್ದಾರೆ. ನಿನಗಾಗಿ ಸಹನಟರಾದ ದಿವ್ಯಾ ಉರುಡುಗ, ಅಕ್ಷಯ ರಾಘವನ್, ಸೋನಿಯಾ ಪೊನ್ನಮ್ಮ, ಸಿನಿಮಾ ತಾರೆ ಚೈತ್ರಾ ಆಚಾರ್, ಸುಜಾತ ಅಕ್ಷಯ ಸೇರಿ ಹಲವರು ಶುಭಾಶಯ ತಿಳಿಸಿದ್ದಾರೆ.

77
ಸಿನಿಮಾಗಳಲ್ಲೂ ರಿತ್ವಿಕ್ ಮಿಂಚಿಂಗ್

ರಿತ್ವಿಕ್ ಮಠದ್ ಸೀರಿಯಲ್ ಗಳಲ್ಲಿ ಮಾತ್ರವಲ್ಲ, ಸಿನಿಮಾಗಳಲ್ಲೂ ಸಹ ಮಿಂಚುತ್ತಿದ್ದಾರೆ. ಇತ್ತೀಚೆಗೆ ಕರಾವಳಿಯ ಕಥೆಯನ್ನು ಹೊಂದಿರುವ ‘ಮಾರ್ನಮಿ’ ಸಿನಿಮಾ ರಿಲೀಸ್ ಆಗಿತ್ತು, ಈ ಸಿನಿಮಾದಲ್ಲಿ ರಿತ್ವಿಕ್ ಗೆ ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories