Amruthadhaare latest update: ಈ ಹಿಂದೆ ಭೂಮಿಕಾ ಲಿಪ್‌ಸ್ಟಿಕ್ ಬಗ್ಗೆ ಕಾಮೆಂಟ್ ಮಾಡಲಾಗಿತ್ತು. "ನೀವು ಹೀಗೆ ಡಾರ್ಕ್ ಶೇಡ್ ಹಾಕ್ಬೇಡಿ" ಎಂದು ಪ್ರೀತಿಯಿಂದಲೇ ಭೂಮಿಕಾಗೆ ಹೇಳಿದ್ದರು ವೀಕ್ಷಕರು. ಅದಾದ ನಂತರ ಹೇರ್‌ಸ್ಟೈಲ್ ಬಗ್ಗೆನೂ ಕಾಮೆಂಟ್ ಮಾಡಲಾಗಿತ್ತು. ಇತ್ತೀಚೆಗೆ…
'ಅಮೃತಧಾರೆ' ಧಾರಾವಾಹಿಗೆ ವಿಶೇಷ ಅಭಿಮಾನಿ ಬಳಗವಿದೆ. ಧಾರಾವಾಹಿಯಲ್ಲಿ ಬರುವ ಪಾತ್ರಧಾರಿಗಳನ್ನ ತೆರೆಯ ಮೇಲೆ ಮಾತ್ರವಲ್ಲದೆ, ತೆರೆಯ ಹಿಂದೆಯೂ ಪ್ರೀತಿಸುವವರು ಇದ್ದಾರೆ. ಹಾಗಾಗಿ ಸೀರಿಯಲ್‌ನಲ್ಲಿ ತಮ್ಮ ನೆಚ್ಚಿನ ಹೀರೋ-ಹೀರೋಯಿನ್ ಹಾವಭಾವ, ಡ್ರೆಸ್ ಸೆನ್ಸ್ ಯಾವುದೇ ಬದಲಾದ್ರೂ ವೀಕ್ಷಕರು ಅದನ್ನ ತಕ್ಷಣ ನೋಟಿಸ್ ಮಾಡಿ ಕಾಮೆಂಟ್ ಮಾಡ್ತಾರೆ.
26
ಈ ಹಿಂದೆನೂ ಬಂದಿತ್ತು ಕಾಮೆಂಟ್ಸ್
ಈ ಹಿಂದೆ ಭೂಮಿಕಾ ಲಿಪ್‌ಸ್ಟಿಕ್ ಬಗ್ಗೆ ಕಾಮೆಂಟ್ ಮಾಡಲಾಗಿತ್ತು. "ನೀವು ಹೀಗೆ ಡಾರ್ಕ್ ಶೇಡ್ ಹಾಕ್ಬೇಡಿ" ಎಂದು ಪ್ರೀತಿಯಿಂದಲೇ ಭೂಮಿಕಾಗೆ ಹೇಳಿದ್ದರು ವೀಕ್ಷಕರು. ಅದಾದ ನಂತರ ಹೇರ್‌ಸ್ಟೈಲ್ ಬಗ್ಗೆನೂ ಕಾಮೆಂಟ್ ಮಾಡಲಾಗಿತ್ತು. ಇತ್ತೀಚೆಗೆ ಅಂದರೆ ಗೌತಮ್- ಭೂಮಿಕಾ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಂಚಿಕೆಯಲ್ಲಿ ಭೂಮಿಕಾ ಚೆನ್ನಾಗಿ ಡ್ರೆಸ್ ಮಾಡಿ ಕಾಣಿಸಿಕೊಂಡಾಗ ಎಲ್ಲರೂ "ನೀವು ಹೀಗೆ ಇರಿ" ಎಂದಿದ್ದರು.
36
ಗಮನಕ್ಕೆ ಬಂದ ಭೂಮಿಕಾ ಸೀರೆ
ಅಂದರೆ ಭೂಮಿಕಾ ಕಾಸ್ಟ್ಯೂಮ್ ಅನ್ನ ಜನರು ಬಹಳ ಹತ್ತಿರದಿಂದ ಗಮನಿಸುತ್ತಾರೆ ಅಂತಾಯ್ತು. ಆದರೆ ಈ ಬಾರಿ ಅವರು ಗಮನಿಸಿರುವುದು ಭೂಮಿಕಾ ಸೀರೆಯನ್ನ. ಹೌದು. ಪ್ರೊಮೊ ನೋಡಿದ ಪ್ರತಿಯೊಬ್ಬರು ಭೂಮಿಕಾ ಸೀರೆಯನ್ನ ಗಮನಿಸಿದ್ದಾರೆ. "ಯಾಕೆ ಭೂಮಿಕ ಸೀರೆ ಚೆನ್ನಾಗಿಯೇ ಇರುತ್ತೆ ಅಲ್ವಾ", "ಚೆನ್ನಾಗಿಯೇ ಉಡುತ್ತಾರೆ" ಅಲ್ವಾ? ಅದರಲ್ಲೇನಿದೆ ವಿಶೇಷ ಅಂತೀರಾ.
ಹೂಂ..ನಿಮಗೆ ಹಾಗನಿಸಿದರೆ ಹೊಸ ಪ್ರೊಮೊವನ್ನ ನೀಟಾಗಿ ನೋಡಿ. ಪ್ರೊಮೊದಲ್ಲಿ ತೋರಿಸಿರುವ ಪ್ರಕಾರ, "ಅಪ್ಪು ಕೋಣೆಯೊಳಗೆ ಏನನ್ನೋ ಹುಡುಕಲು ಹೋಗಿ ಸೂಟ್‌ಕೇಸ್ ಬೀಳಿಸುತ್ತಾನೆ" ಆ ಸೌಂಡ್ ಕೇಳಿ ಭೂಮಿಕಾ ಒಳಗಿನಿಂದ ಕೂಗುತ್ತಾಳೆ. ಆಗ ಅವಳು ಉಟ್ಟಿರುವ ಸೀರೆ ಗಮನಿಸಿದರೆ ಅದು ಹಳದಿ ಕಲರ್ ಇದೆ.
56
ಹಸಿರು ಕಲರ್
ಅಪ್ಪುಗೆ ಸೂಟ್‌ಕೇಸ್ ಎತ್ತಿಡುವಾಗ ಭೂಮಿಕಾ-ಗೌತಮ್ ಮದುವೆಯಾಗಿರುವ ಫೋಟೋ ಸಿಗುತ್ತದೆ. ಆಗ ಗೌತಮ್ ತನ್ನಪ್ಪ ಎಂಬುದು ಅಪ್ಪುಗೆ ತಿಳಿಯುತ್ತದೆ. ಹಿಂದಿನದನ್ನೆಲ್ಲಾ ನೆನಪು ಮಾಡಿಕೊಂಡು ಅಪ್ಪು ಗೌತಮ್ ಬಳಿ ಬಂದು ತಬ್ಬಿಕೊಳ್ತಾನೆ. ಆಗ ಒಳಗಿನಿಂದ ಭೂಮಿಕಾ ಬರ್ತಾಳೆ. ಆಗ ಅವಳ ಸೀರೆಯ ಕಲರ್ ಹಸಿರು. ಇದನ್ನೇ ಗಮನಿಸಿದ ವೀಕ್ಷಕರು ಸೀರೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
66
ಹೀಗಿದೆ ವೀಕ್ಷಕರ ಕಾಮೆಂಟ್ಸ್
ವೀಕ್ಷಕರು ಪ್ರೊಮೊ ನೋಡಿ "Inside home yellow saree, Out side seen green saree", "ಮನೆ ಒಳಗೆ ಒಂದು ಸೀರೆ ಹೊರಗೆ ಬಂದಾಗ ಬೇರೆ ಸೀರೆ" ಅಂತೆಲ್ಲಾ ಕಾಮೆಂಟ್ ಮಾಡಿದರೆ, ಇದಕ್ಕೆ ಕೆಲವರು ಪಾಪ ಎಡಿಟರ್ ಮಿಸ್ಟೇಕ್ ಅಂದಿದ್ದಾರೆ. ಈ ಕಾಮೆಂಟ್ಸ್‌ಗೆ ಸಾಕಷ್ಟು ಲೈಕ್ಸ್ ಕೂಡ ಸಿಕ್ಕಿರುವುದನ್ನ ನೀವಿಲ್ಲಿ ನೋಡಬಹುದು. ಒಟ್ಟಾರೆ 'ಅಮೃತಧಾರೆ' ಧಾರಾವಾಹಿ ಪಾತ್ರಧಾರಿಗಳು ಏನೇ ಮಾಡಿದ್ರೂ ಯಾವ ಲೆವೆಲ್‌ಗೆ ವೈರಲ್ ಆಗ್ತವೆ ಎಂಬುದಕ್ಕೆ ಈ ಪ್ರೊಮೊಗೆ ಬಂದಿರುವ ಕಾಮೆಂಟ್ಸ್‌ಗಳೇ ಸಾಕ್ಷಿ.