ರಕ್ಷಿತಾ ಆಟದ ಹಿಂದಿನ ರಹಸ್ಯ! ವೀಕೆಂಡ್‌ನಲ್ಲಿ ಬಯಲಾಗುವುದೇ ಸತ್ಯ? ಸುದೀಪ್ ಕೊಟ್ಟ ಸುಳಿವು ಏನು?

Published : Nov 15, 2025, 03:02 PM IST

ಕ್ಯಾಪ್ಟನ್ ಮಾಳು ಆಯ್ಕೆಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಕ್ಷಿತಾ ಶೆಟ್ಟಿ ತೆಗೆದುಕೊಂಡ ನಿರ್ಧಾರವು ಚರ್ಚೆಗೆ ಕಾರಣವಾಗಿದೆ. ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಈ ವಿಷಯವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದ್ದು, ಜಾನ್ವಿ ಮತ್ತು ಧ್ರುವಂತ್ ಅವರ ಹೇಳಿಕೆಗಳು ಕೂಡ ಕುತೂಹಲ ಮೂಡಿಸಿವೆ. 

PREV
15
ರಕ್ಷಿತಾ ಶೆಟ್ಟಿ

ಕ್ಯಾಪ್ಟನ್ ಮಾಳು ಆಯ್ಕೆ ಮೇರೆಗೆ ಈ ವಾರ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ರಕ್ಷಿತಾ ಶೆಟ್ಟಿ ನಾಮಿನೇಷನ್ ಟೀಂ ಸೇರಿದ್ರೆ, ಗಿಲ್ಲಿ ನಟ ಸೇಫ್ ಟೀಂನಲ್ಲಿದ್ದಾರೆ. ಟಾಸ್ಕ್‌ ಪ್ರಕಾರ, ಕ್ಯಾಪ್ಟನ್ ಆಗಿರುವ ರಘು ಸಹ ನಾಮಿನೇಟ್‌ ಆಗಿದ್ದಾರೆ. ಇಡೀ ತಂಡ ಒಂದು ನಿರ್ಧಾರಕ್ಕೆ ಬದ್ಧವಾಗಿದ್ರೆ ರಕ್ಷಿತಾ ಮಾತ್ರ ತನ್ನ ತೀರ್ಮಾನವೇ ಅಂತಿಮವಾಗುವಂತೆ ಮಾಡಿಕೊಂಡಿದ್ದರು.

25
ಗಿಲ್ಲಿ ನಟ ಕಾರಣ ?

ತನ್ನ ತಂಡದಿಂದ ಒಬ್ಬರನ್ನು ಸೇವ್ ಮಾಡಿ, ಈಗಾಗಲೇ ಸೇಫ್ ಆಗಿರುವ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ದೀರ್ಘ ಸಮಯದ ಚರ್ಚೆ ಬಳಿಕ ರಕ್ಷಿತಾ ಹೇಳಿದಂತೆ ಸುಧಿ ಸೇಫ್ ಆದ್ರೆ, ರಘು ನಾಮಿನೇಟ್ ಆದರು. ನೋಡುಗರ ಕಣ್ಣಿಗೆ ತಂಡದ ವಿರುದ್ಧವೇ ರಕ್ಷಿತಾ ನಿಂತುಕೊಂಡಿದ್ದರು. ರಕ್ಷಿತಾ ಶೆಟ್ಟಿ ಈ ರೀತಿಯ ಆಟಕ್ಕೆ ಗಿಲ್ಲಿ ನಟ ಕಾರಣ ಅನ್ನೋದು ಕೆಲವರ ವಾದವಾಗಿತ್ತು.

35
ಇಂದು ವೀಕೆಂಡ್ ಸಂಚಿಕೆ

ಇಂದು ವೀಕೆಂಡ್ ಸಂಚಿಕೆಯಾಗಿದ್ದು, ಸುದೀಪ್ ಯಾವ ವಿಷಯದ ಕುರಿತಾಗಿ ಚರ್ಚೆ ನಡೆಸುತ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ತಂಡದ ವಿರುದ್ಧ ನಿಂತ ರಕ್ಷಿತಾ ಶೆಟ್ಟಿ ಬಗ್ಗೆ ಇಂದಿನ ಸಂಚಿಕೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಇದರ ಜೊತೆಯಲ್ಲಿ ಜಾನ್ವಿ ಹೇಳಿಕೆಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಪಂದನಾ ಸೋಮಣ್ಣ ಅವರ ಕಲರ್ಸ್ ಕನ್ನಡ ವಾಹಿನಿ ನಟಿ ಎಂಬ ಕಾರಣಕ್ಕೆ ಸೇವ್ ಆಗುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

45
ಅವಕಾಶ ನನಗೆ ಸಿಗುತ್ತಿಲ್ಲ

ಮತ್ತೊಂದೆಡೆ ವೀಕೆಂಡ್ ಸಂಚಿಕೆಯಲ್ಲಿ ಮಾತನಾಡಲು ತಮಗೆ ಸ್ಪೇಸ್ ಸಿಗುತ್ತಿಲ್ಲ ಎಂದು ಧ್ರುವಂತ್ ಬೇಸರ ಹೊರ ಹಾಕಿದ್ದಾರೆ. ರಕ್ಷಿತಾ ಶೆಟ್ಟಿಗೆ ಸಿಗುವ ಅವಕಾಶ ನನಗೆ ಸಿಗುತ್ತಿಲ್ಲ ಎಂದು ಧ್ರುವಂತ್ ಹೇಳಿದ್ದಾರೆ. ಹಾಗಾಗಿ ಶನಿವಾರ ಮತ್ತು ಭಾನುವಾರದ ಸಂಚಿಕೆಯಲ್ಲಿ ಯಾವೆಲ್ಲಾ ಚರ್ಚೆಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಗಿಲ್ಲಿ ನಟ ರೋಸ್ಟ್

55
ವೀಕ್ಷಕರ ಕಮೆಂಟ್

ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ವೀಕ್ಷಕರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೊಕ್ರೋ ಸುದೀಪ್ ಬಗ್ಗೆನೂ ತೋರಿಸಿ ಅವನು ಅಶ್ವಿನಿಗೆ ಬಕೆಟ್ ಹಿಡಿದಿರೋದನ್ನು ಸ್ವಲ್ಪ ತೋರ್ಸಿ ಗೆ ಬಗ್ಗೆ ತಿಳಿಯದು ಅಂತ ಸ್ವಲ್ಪ ತೋರಿಸಿ. ಮನೆ ಮಂದಿಗೆಲ್ಲಾ ಗಿಲ್ಲಿ ನಟ ಮತ್ತು ರಕ್ಷಿತಾ ಸರಳವಾಗಿ ಟಾರ್ಗೆಟ್ ಆಗ್ತಾರೆ. ಬಕೆಟ್ ಅಶ್ವಿನಿ ಗ್ಯಾಂಗ್ ಗೆ ಏನು ಹೇಳೊಲ್ಲ ಇವತ್ತು ಇದೆ ಆಗೋದು ಗಿಲ್ಲಿ ರಕ್ಷಿತಾ ನಾ ಟಾರ್ಗೆಟ್ ಮಾಡ್ತಾರೆ ಯಾಕೆಂದ್ರೆ ಅವರು ಬಡವರ ಮನೆ ಮಕ್ಕಳಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: BBK 12: ಹೊರಗೆ ಬನ್ನಿ ಎಲ್ಲರೂ ಸಿಗೋಣ: ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟನ ವಿದಾಯದ ಭಾಷಣ

Read more Photos on
click me!

Recommended Stories