Amruthadhaare: ಹೀಗೆ ಮಾಡಿದ್ರೆ ಮಲ್ಲಿ ಕಾಲಿಗೆ ಬಿದ್ದು ಡಿವೋರ್ಸ್​ ಕೊಡ್ತಾನೆ ನೋಡಿ: ಗೌತಮ್​ಗೆ ಫ್ಯಾನ್ಸ್​ ಟಿಪ್ಸ್​

Published : Mar 03, 2026, 04:19 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಮಲ್ಲಿಗೆ ಡಿವೋರ್ಸ್ ಕೊಡಲು ಜೈದೇವ ಆಸ್ತಿಯ ಬೇಡಿಕೆ ಇಟ್ಟಿದ್ದಾನೆ. ಆದರೆ, ಡಿವೋರ್ಸ್ ಕೊಡದೆ ಮೋಸ ಮಾಡುವ ಪ್ಲಾನ್‌ನಲ್ಲಿದ್ದಾನೆ. ಈ ನಡುವೆ, ಬಹುಪತ್ನಿತ್ವದ ಅಡಿಯಲ್ಲಿ ಜೈದೇವನ ವಿರುದ್ಧವೇ ಕೇಸ್ ಹಾಕುವಂತೆ ವೀಕ್ಷಕರು ಗೌತಮ್‌ಗೆ ಐಡಿಯಾ ನೀಡಿದ್ದಾರೆ.

PREV
16
ಡಿವೋರ್ಸ್​ ಗಲಾಟೆ

ಅಮೃತಧಾರೆ (Amruthadhaare Serial)ನಲ್ಲಿ, ಇದೀಗ ಮಲ್ಲಿಗೆ ಡಿವೋರ್ಸ್​ ಕೊಡದೇ ಸತಾಯಿಸುತ್ತಿದ್ದಾನೆ ಜೈದೇವ. ಮಲ್ಲಿಯ ಮದುವೆಗೆ ಜೈದೇವನ ಡಿವೋರ್ಸ್​ ಬೇಕು ಎಂದು ಆನಂದ್​ ಬಂದು ಕೇಳಿದಾಗ, ಜೈದೇವ್​ ಅದಕ್ಕೆ ಷರತ್ತು ವಿಧಿಸಿದ್ದ.

26
ಅಪ್ಪನ ಸಮಾಧಿ

ನನಗೆ ಎಲ್ಲಾ ಆಸ್ತಿ ಕೊಟ್ಟಾಗಿದೆ. ಅಪ್ಪನ ಸಮಾಧಿಯ ಬಳಿಯ ಆಸ್ತಿಯೂ ನನ್ನ ಹೆಸರಿಗೆ ಬೇಕು. ಹಾಗೆ ಮಾಡಿದ್ರೆ ಡಿವೋರ್ಸ್​ ಕೊಡುವುದಾಗಿ ಹೇಳಿದ್ದಾನೆ. ಅಷ್ಟಕ್ಕೂ, ಅಪ್ಪನ ತಿಥಿಯ ದಿವಸ ಅದೇ ಜಾಗದಲ್ಲಿ ಗೌತಮ್​, ಜೈದೇವನ ಅಧಿಕ ಪ್ರಸಂಗದಿಂದ ಕಪಾಳ ಮೋಕ್ಷ ಮಾಡಿದ್ದ ಕಾರಣದಿಂದ ಸೇಡು ತೀರಿಸಿಕೊಳ್ಳಲು ಜೈದೇವ ಕಾಯುತ್ತಿದ್ದಾನೆ.

36
ಸುನಿಲ್​ನಿಂದ ತಂತ್ರ

ಹಾಗೆಂದು ಒಂದು ವೇಳೆ ಗೌತಮ್​ ಆ ಆಸ್ತಿಯನ್ನು ಬರೆದುಕೊಟ್ಟರೂ ಡಿವೋರ್ಸ್​ ಪೇಪರ್​ಗೆ ಖಂಡಿತ ಸಹಿ ಹಾಕುವುದಿಲ್ಲ ಎನ್ನುವುದೂ ಸತ್ಯ. ಏಕೆಂದರೆ ಇದೇ ಕಾರಣಕ್ಕೆ ಆತ ಸುನಿಲ್​ನನ್ನು ಛೂ ಬಿಟ್ಟಿದ್ದಾನೆ.

46
ವೀಕ್ಷಕರ ಐಡಿಯಾ

ಇವೆಲ್ಲವುಗಳ ನಡುವೆ, ಇದೀಗ ನೆಟ್ಟಿಗರು ಪ್ರೊಮೋ ನೋಡಿ ನಿರ್ದೇಶಕರಿಗೆ ಮತ್ತು ಗೌತಮ್​ಗೆ ಐಡಿಯಾ ಕೊಟ್ಟಿದ್ದಾರೆ.

56
ಅಷ್ಟೂ ಗೊತ್ತಾಗಲ್ವಾ?

ಅದೇನೆಂದರೆ, ಜೈದೇವ್​ ಕೂಡ ಡಿವೋರ್ಸ್​ ಆಗದೇ ಮದುವೆಯಾಗಿದ್ದಾನೆ. ಈಗೊಂದು ವೇಳೆ ಮಲ್ಲಿ ಆತನ ವಿರುದ್ಧ ಕೇಸ್​ ದಾಖಲು ಮಾಡಿದರೆ ಹಿಂದೂ ವೈವಾಹಿಕ ಕಾಯ್ದೆಯ ಅಡಿ ಬಹುಪತ್ನಿತ್ವದ ಆಧಾರದ ಮೇಲೆ ಜೈದೇವ ಜೈಲಿಗೆ ಹೋಗ್ತಾನೆ.

66
ಕೇಸ್​ ಹಾಕಿ

ಒಂದು ವೇಳೆ ಡಿವೋರ್ಸ್​ ಕೊಟ್ಟಿಲ್ಲ ಎಂದರೆ ಕೇಸ್​ ಹಾಕಿಸ್ತೀನಿ ಎಂದು ಗೌತಮ್​ ಒಂದು ಮಾತು ಹೇಳಿದ್ದರೆ ಜೈದೇವ ಥರ ಥರ ನಡುಗಿ ಹೋಗ್ತಾನೆ. ಇಷ್ಟೂ ಮಾಡಲು ಗೊತ್ತಾಗಲ್ವಾ ಎಂದು ಗೌತಮ್​ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬಹುಶಃ ಗೌತಮ್​ ಹಾಗೆ ಮಾಡಲೂಬಹುದು ಎನ್ನುವ ಊಹೆಯೂ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories