ಮೊದಲ ಬಾರಿಗೆ ಮಗನ ಜೊತೆ ಇನ್​ಸ್ಟಾದಲ್ಲಿ ಕಾಣಿಸಿಕೊಂಡ Sushma K. Rao: ಫ್ಯಾನ್ಸ್​ ಖುಷ್​

Published : Mar 03, 2026, 01:46 PM IST

ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ಪಾತ್ರದ ಮೂಲಕ ಮನೆಮಾತಾಗಿರುವ ನಟಿ ಸುಷ್ಮಾ ಕೆ. ರಾವ್, ಇತ್ತೀಚೆಗೆ ತಮ್ಮ ಪತಿ ಮತ್ತು ಮಗನನ್ನು ಪರಿಚಯಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಮೊದಲ ಬಾರಿಗೆ ತಮ್ಮ ಮಗನ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV
16
ಮಹಿಳೆಯರಿಗೆ ಪ್ರೇರಕ ಭಾಗ್ಯ

ಸುಷ್ಮಾ ಕೆ. ರಾವ್ (Sushma K. Rao) ಅಂದರೆ ಕೆಲವರಿಗೆ ತಿಳಿಯದೇ ಹೋಗಬಹುದು. ಆದರೆ ಕಲರ್ಸ್​ ಕನ್ನಡದ ಭಾಗ್ಯ ಎಂದರೆ ಅಸಂಖ್ಯ ವೀಕ್ಷಕರು ಅದರಲ್ಲಿಯೂ ಮಹಿಳೆಯರಂತೂ ತುಂಬಾ ಖುಷಿಪಟ್ಟುಕೊಳ್ಳುವುದು ಉಂಟು. ಜೀವನದಲ್ಲಿ ಎಂಥದ್ದೇ ಕಷ್ಟ ಬಂದರೂ ಅದನ್ನು ಮೆಟ್ಟಿನಿಲ್ಲುವ ಛಾತಿ ಇರುವ ಹೆಣ್ಣಾಗಿ ಭಾಗ್ಯ ಕಾಣಿಸಿಕೊಳ್ಳುತ್ತಾಳೆ. ಸೀರಿಯಲ್​ನಲ್ಲಿ ಏನು ಬಿಡಿ, ಏನು ಬೇಕಾದ್ರೂ ಆಗತ್ತೆ ಎಂದುಕೊಂಡರೂ, ಧಾರಾವಾಹಿಗಳು ಇಂದು ಲಕ್ಷಾಂತರ ಜನರ ಜೀವನಾಡಿಯೇ ಆಗಿರುವ ಕಾರಣ, ಅದರಲ್ಲಿ ಇರುವ ಕೆಡುಕಿನಂತೆಯೇ, ಒಳ್ಳೆಯತನವನ್ನೂ ರೂಢಿಸಿಕೊಳ್ಳುವ ಬಗ್ಗೆ ಇದಾಗಲೇ ಹಲವಾರು ಉದಾಹರಣೆಗಳು ಕಾಣುವುದು ಉಂಟು.

26
ಅವಾರ್ಡ್​ ಫಂಕ್ಷನ್​ ಸದ್ದು

ಅದೇ ರೀತಿ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಪ್ರೇರೇಪಿತರಾಗಿರುವ ಮಹಿಳೆಯರು ಹಲವರು. ಇನ್ನು ಈ ಪಾತ್ರಕ್ಕೆ ಜೀವ ತುಂಬುತ್ತಿರುವವರು ಸುಷ್ಮಾ ಕೆ. ರಾವ್. ಆದರೆ ಅವರು ತುಂಬಾ ಸದ್ದು ಮಾಡಿದ್ದು, ಈಚೆಗೆ ನಡೆದ ಅವಾರ್ಡ್​ ಫಂಕ್ಷನ್​ನಲ್ಲಿ ಪತಿ ಮತ್ತು ಮಗನನ್ನು ಪರಿಚಯ ಮಾಡಿಸಿದಾಗ.

36
ಪತಿ-ಮಗನ ಬಗ್ಗೆ

ಮೊದಲ ಪತಿಯಿಂದ ಡಿವೋರ್ಸ್​ ಪಡೆದ ಬಳಿಕ, ನಟಿ ಎಲ್ಲಿಯೂ ಎರಡನೆಯ ಮದುವೆ ಮತ್ತು ಮಗನ ಬಗ್ಗೆ ಹೇಳಿಕೊಂಡಿದ್ದಿಲ್ಲ. ಅದು ಅವರ ವೈಯಕ್ತಿಕ ವಿಷಯ. ತಮ್ಮ ಪತಿ ಮತ್ತು ಮಗನಿಗೆ ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳೆಲ್ಲಾ ಇಷ್ಟ ಆಗುವುದಿಲ್ಲ ಎಂದಿದ್ದರು. ಅದೇ ಕಾರಣಕ್ಕೆ ಅವರಿಗೆ ಮಗ ಇರುವ ವಿಷಯ ಅವರ ಆಪ್ತರಿಗೆ ಬಿಟ್ಟು ಬೇರೆಯವರಿಗೆ ತಿಳಿದಿರಲಿಲ್ಲ.

46
ದೊಡ್ಡ ಮಟ್ಟಿನ ಸುದ್ದಿ

ಅವರು ಪತಿ ಮತ್ತು ಮಗನನ್ನು ಪರಿಚಯಿಸಿದಾಗ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಸೆಲೆಬ್ರಿಟಿಗಳ ಲೈಫ್​ ಅಂದ್ರೆ ಹಾಗೇ ಅಲ್ವಾ? ಅವರ ವೈಯಕ್ತಿಕ ಜೀವನ ತಮಗೂ ತಿಳಿಯಬೇಕು ಎಂದು ಬಯಸುವವರೇ ಹೆಚ್ಚು. ಅದರಲ್ಲಿಯೂ ಮಗ ಇರುವ ಸುದ್ದಿ ಕೂಡ ತಿಳಿದಿರಲಿಲ್ಲ ಎಂದರೆ ಅದು ತುಂಬಾ ಅಚ್ಚರಿ ಉಂಟು ಮಾಡಿತ್ತು.

56
ಮುದ್ದಾದ ಮಗ

ಇದೀಗ ಮೊದಲ ಬಾರಿಗೆ ಸುಷ್ಮಾ ಅವರು ತಮ್ಮ ಮುದ್ದಾದ ಮಗನ ಫೋಟೋ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಅಮ್ಮನಂತೆಯೇ ಮಗ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

66
ಅಭಿಮಾನಿಗಳ ಹಾರೈಕೆ

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಕಾಲೇಜಿಗೆ ಹೋಗುವ ಮಗಳು ತನ್ವಿ ಮತ್ತು ಮಗ ಗುಂಡಣ್ಣ ಜೊತೆ ಹಲವಾರು ಬಾರಿ ರೀಲ್ಸ್​ ಮಾಡುವ ಸುಷ್ಮಾ ಅವರು ರಿಯಲ್​ ಮಗನ ಜೊತೆಯೂ ಆಗಾಗ್ಗೆ ರೀಲ್ಸ್​ ಮಾಡುತ್ತಿರಲಿ ಎನ್ನುವುದು ಅವರ ಅಭಿಮಾನಿಗಳ ಆಶಯ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories