ಅಮೃತಧಾರೆ ಧಾರಾವಾಹಿಯಲ್ಲಿ, ದಿಯಾ ಮತ್ತು ಅನು ಅವರ ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ 'ಆಪರೇಷನ್ ಮಧುರ ವ್ಯೂಹ' ಯೋಜನೆಯನ್ನು ರೂಪಿಸಿದ್ದಾರೆ. ಈ ಯೋಜನೆಗಾಗಿ, ಪೊಲೀಸ್ ಅಧಿಕಾರಿ ಮಧುರಾಳನ್ನು ಬಳಸಿಕೊಂಡು ಜೈದೇವನ ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.
ಅಮೃತಧಾರೆ ಸೀರಿಯಲ್ (Amruthadhaare Serial) ನಲ್ಲಿ ಜೈದೇವನನ್ನು ಹಳ್ಳಕ್ಕೆ ಬೀಳಿಸಲು ಆಪರೇಷನ್ ಮಧುರ ವ್ಯೂಹವನ್ನು ಭೂಮಿಕಾ ಮತ್ತು ಮಲ್ಲಿ ಸೇರಿ ರಚಿಸಿದ್ದಾರೆ.
26
ದಿಯಾ, ಅನು ಕಾಣೆ
ಜೈದೇವನ ಬಾಯಿಯಿಂದ ದಿಯಾ ಮತ್ತು ಅನು ಅವರ ಕಾಣೆಯಾಗಿರುವ ವಿಷಯವನ್ನು ಹೊರಕ್ಕೆ ತರುವ ಸಲುವಾಗಿ ಜೈದೇವನ ವೀಕ್ನೆಸ್ ಆಗಿರುವ ಹುಡುಗಿಯನ್ನೇ ಬಿಡಲಾಗಿದೆ. ಪೊಲೀಸ್ ಸಿಬ್ಬಂದಿಯಾಗಿರುವ ಆಕೆಯ ಹೆಸರು ಮಧುರಾ.
36
ಮಾಡರ್ನ್ ಡ್ರೆಸ್
ಮಧುರಾಳಿಗೆ ಮಾಡರ್ನ್ ಡ್ರೆಸ್ ತೊಡಿಸಿ ಜೈದೇವನ ಬಳಿ ಬಿಡಲಾಗಿದೆ. ಪಬ್ನಲ್ಲಿ ಜೈದೇವ್ ಡ್ರಿಂಕ್ಸ್ ಮಾಡುತ್ತಿರುವಾಗ ಮಲ್ಲಿಯ ಆದೇಶದ ಮೇರೆಗೆ ಮಧುರಾ ಜೈದೇವನಿಗೆ ಡ್ಯಾಷ್ ಹೊಡೆದಿದ್ದಾಳೆ.
ಆರಂಭದಲ್ಲಿ ಜೈದೇವ ಏನೂ ತಲೆ ಕೆಡಿಸಿಕೊಳ್ಳಲಿಲ್ಲ. ಆ ಬಳಿಕ ಮಧುರಾ, ಜೈದೇವಇರುವ ಖುರ್ಚಿಯ ಎದುರು ಹೋಗಿ ಕುಳಿತು ಮಲ್ಲಿ ಹೇಳಿದಂತೆ ಸ್ಮೈಲ್ ಮಾಡಿದ್ದಾಳೆ.
56
ಸುಲಭದಲ್ಲಿ ಬೀಳಲ್ಲ
ಜೈದೇವನ ವೀಕ್ನೆಸ್ ಹೆಣ್ಣು ಆದರೂ ಅಷ್ಟು ಸುಲಭದಲ್ಲಿ ಆತ ಬೀಳುವಂತೆ ಕಾಣುತ್ತಿಲ್ಲ. ಇದರ ಹೊರತಾಗಿಯೂ ಮಧುರಾ ತನ್ನ ಬಲೆಯನ್ನು ಬೀಸುತ್ತಿದ್ದಾಳೆ.
66
ಕಾದು ನೋಡಬೇಕಿದೆ
ಅಲ್ಲಿಗೆ ಜೈದೇವ ಹಳ್ಳಕ್ಕೆ ಬೀಳುವುದು ಗ್ಯಾರೆಂಟಿ ಎಂದಾಗಿದೆ. ಅಲ್ಲಿಯೇ ಇದ್ದ ಭೂಮಿಕಾ ಮತ್ತು ಮಲ್ಲಿಯನ್ನು ಜೈದೇವ್ ನೋಡಿದ್ರೆ ಮಾತ್ರ ಕಥೆ ಮುಗಿದಂತೆ ಸರಿ. ಆದ್ದರಿಂದ ಇನ್ನೇನಾಗುತ್ತದೆ ಎನ್ನೋದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.