ಅಮೃತಧಾರೆ ಧಾರಾವಾಹಿಯಲ್ಲಿ, ದಿಯಾ ಮತ್ತು ಅನು ಎಂಬ ಯುವತಿಯರ ಕಣ್ಮರೆಗೆ ಕಾರಣನಾದ ಜೈದೇವ್‌ನನ್ನು ಹಿಡಿಯಲು ಭೂಮಿಕಾ ಮತ್ತು ಮಲ್ಲಿ ಸಂಚು ರೂಪಿಸಿದ್ದಾರೆ. ಜೈದೇವ್‌ನ ವೀಕ್ನೆಸ್ ಬಳಸಿ ಸತ್ಯ ಹೊರತರಲು ಹನಿಟ್ರ್ಯಾಪ್ ಮಾಡಲು ನಿರ್ಧರಿಸಿದ್ದು, ಆ ಸುಂದರಿ ಯಾರು ಎಂಬ ಕುತೂಹಲ ಮೂಡಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಜೈದೇವನನ್ನು ಖೆಡ್ಡಾಕ್ಕೆ ಉರುಳಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ ಭೂಮಿಕಾ ಮತ್ತು ಮಲ್ಲಿ. ದಿಯಾ ಮತ್ತು ಅನು ಎನ್ನುವ ಯುವತಿಯರ ಕಾಣೆಯ ಹಿಂದೆ ಇರುವ ಕೈವಾಡ ಯಾರದ್ದು ಎಂದು ನೋಡಲು ಇನ್ನೋರ್ವ ಹುಡುಗಿಯನ್ನು ಕಳುಹಿಸುವ ಪ್ಲ್ಯಾನ್ ಸಿದ್ಧವಾಗುತ್ತಿದೆ.
26
ತಪ್ಪಿಸಿಕೊಂಡಿರೋ ಜೈದೇವ್
ಅಷ್ಟಕ್ಕೂ ಜೈದೇವ್ ದಿಯಾಳನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದಾನೆ. ಇನ್ನೋರ್ವ ಯುವತಿ ಅನು ಎಂಬಾಕೆ ಕಾಣೆಯಾಗಿದ್ದಾಳೆ. ಈ ಇಬ್ಬರ ಕಾಣೆಯ ಹಿಂದೆ ಜೈದೇವನ ಕೈವಾಡ ಇದೆ ಎನ್ನುವುದು ಭೂಮಿಕಾ ಮತ್ತು ಮಲ್ಲಿಗೆ ತಿಳಿದಿದೆ ಜೀವ ಕೂಡ ಇದಕ್ಕೆ ಸಾಥ್ ಕೊಟ್ಟಿದ್ದಾನೆ.
36
ಲಕ್ಷ್ಮೀಕಾಂತ ವಿಫಲ
ಲಕ್ಷ್ಮೀಕಾಂತನನ್ನು ಜೈದೇವ್ ಬಳಿ ಭೂಮಿಕಾ ವಿಷಯ ಕೆದುಕಲು ಬಿಟ್ಟಿದ್ದಳು. ಆದ್ರೆ ಜೈದೇವನಿಗೆ ಡೌಟ್ ಬಂದು ಏನೂ ಹೇಳಲಿಲ್ಲ. ಆದರೆ ದಿಯಾ ಮತ್ತು ಅನು ಹೆಸರು ಕೇಳುತ್ತಿದ್ದಂತೆಯೇ ಅವನಲ್ಲಿ ಆದ ಬದಲಾವಣೆ ಬಗ್ಗೆ ಲಕ್ಷ್ಮೀಕಾಂತ ತಿಳಿಸಿದ್ದರಿಂದ ಎಲ್ಲರ ಅನುಮಾನ ಬಲವಾಗಿದೆ.
ಈಗ ಜೈದೇವನನ್ನು ಅವನ ವೀಕ್ನೆಸ್ ಬಳಸಿ ಸತ್ಯ ಕುಕ್ಕುವಂತೆಮಾಡಬೇಕು ಎನ್ನುವ ಪ್ಲ್ಯಾನ್ ಜೀವ ಕೊಟ್ಟಿದ್ದಾನೆ. ಆದರೆ ಇದಾಗಲೇ ಇಬ್ಬರು ಹುಡುಗಿಯರು ನಾಪತ್ತೆಯಾಗಿರುವ ಕಾರಣದಿಂದ, ಈ ಪ್ಲ್ಯಾನ್ ಬೇಡ ಎಂದಿದ್ದಾಳೆ ಭೂಮಿಕಾ.
56
ಹನಿಟ್ರ್ಯಾಪ್ ಪ್ಲ್ಯಾನ್
ಆದರೆ, ಮಲ್ಲಿ ಇದೇ ಪ್ಲ್ಯಾನ್ ಸರಿ ಇದೆ. ನಾವೇ ಒಬ್ಬಳನ್ನು ಕಳಿಸಿ ಟ್ರ್ಯಾಪ್ ಮಾಡಬೇಕು. ಅವಳಿಗೆ ಏನೂ ಹಾನಿಯಾಗದಂತೆ ನೋಡಬೇಕು. ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಎಂದಿದ್ದಾಳೆ.
66
ಆ ಸುಂದರಿ ಯಾರು?
ಹಾಗಿದ್ದರೆ, ಆ ಸುಂದರಿ ಯಾರು ಎನ್ನುವ ಕುತೂಹಲ ಈಗ ವೀಕ್ಷಕರನ್ನು ಕಾಡುತ್ತಿದೆ. ಮಲ್ಲಿಯೇ ವೇಷ ಬದಲಿಸಿ ಹೋಗ್ತಾಳಾ (ಸೀರಿಯಲ್ಗಳಲ್ಲಿ ಇವೆಲ್ಲಾ ಕಾಮನ್. ಮೇಕಪ್ ಬದಲಾಯಿಸಿದ ತಕ್ಷಣ ಸೀರಿಯಲ್ನಲ್ಲಿ ಇರುವ ನಟ-ನಟಿಯರಿಗೆ ಇವರೇ ಅವರು ಎನ್ನೋದು ಗೊತ್ತಾಗಲ್ಲ. ಉದಾ: ಬ್ರಹ್ಮಗಂಟು ಸೀರಿಯಲ್ ದೀಪಾ!). ಅಥವಾ ಬೇರೆ ಯರಾದರೂ ಸುಂದರಿ ಬರುತ್ತಾಳೋ ಎಂದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.