ಅಮೃತಧಾರೆ ಧಾರಾವಾಹಿಯಲ್ಲಿ, ಖಳನಾಯಕ ಜೈದೇವ್‌ನ ರಹಸ್ಯಗಳನ್ನು ಬಯಲಿಗೆಳೆಯಲು ಮಲ್ಲಿ, ಜೀವ ಮತ್ತು ಭೂಮಿಕಾ ಹೊಸ ಯೋಜನೆ ರೂಪಿಸಿದ್ದಾರೆ. ಜೈದೇವ್‌ನ ಹೆಣ್ಣಿನ ವೀಕ್‌ನೆಸ್ ಬಳಸಿಕೊಂಡು, ಅವನ ಬಾಯಿಂದಲೇ ಸತ್ಯ ಹೊರತರಲು 'ಮಧುರ ವ್ಯೂಹ' ರಚಿಸಿದ್ದಾರೆ.
ಕೆಡಿ ಜೈದೇವ್ ರಹಸ್ಯ ತಿಳಿಯಲು ಮಲ್ಲಿ, ಜೀವ ಮತ್ತು ಭೂಮಿಕಾ ಹೊಸ ವ್ಯೂಹವೊಂದನ್ನು ರಚಿಸಿದ್ದಾರೆ. ಆರಂಭದಲ್ಲಿ ಈ ಪ್ಲಾನ್‌ಗೆ ಭೂಮಿಕಾ ವಿರೋಧ ವ್ಯಕ್ತಪಡಿಸಿದ್ರೂ ನಂತರ ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾಳೆ. ಜೈದೇವ್ ವಿರುದ್ಧ ಮಲ್ಲಿ ಮಾಡಿರುವ ಪ್ಲಾನ್ ಹೆಸರು 'ಮಧುರ' ವ್ಯೂಹ.
25
ಬಾಯಿ ಬಿಡದ ಜೈದೇವ್
ಹೌದು, ಮಲ್ಲಿ ಬಿಟ್ಟ ಬಳಿಕ ಜೈದೇವ್ ಜೀವನದಲ್ಲಿ ದಿಯಾ ಮತ್ತು ಅನು ಎಂಬ ಇಬ್ಬರು ಯುವತಿಯರು ಬಂದಿದ್ದರು. ಇದೀಗ ಇಬ್ಬರು ಕಾಣೆಯಾಗಿರೋದರಿಂದ ಮಲ್ಲಿ ಅವರಿಬ್ಬರ ಹುಡುಕಾಟಕ್ಕೆ ಮಲ್ಲಿ ಮುಂದಾಗಿದ್ದಾಳೆ. ಆರಂಭದಲ್ಲಿ ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಭೂಮಿಕಾ ಕಳುಹಿಸಿದ್ದಳು. ಆದ್ರೆ ಮದ್ಯ ಕುಡಿದ್ರೂ ಜೈದೇವ್ ಅಲರ್ಟ್ ಆಗಿದ್ದರಿಂದ ಯಾವುದೇ ವಿಷಯ ಬಿಟ್ಟುಕೊಟ್ಟಿರಲಿಲ್ಲ.
35
ಜಾಣೆಯಾದ ಭೂಮಿಕಾ
ಮಾಹಿತಿ ಸಂಗ್ರಹಿಸಲು ಲಕ್ಷ್ಮೀಕಾಂತ್ ಫೇಲ್ ಆಗಿದ್ದರಿಂದ. ಮತ್ತೊಂದು ಪ್ಲಾನ್ ಮಾಡಲು ಹೋಟೆಲ್‌ನಲ್ಲಿ ಭೂಮಿಕಾ, ಮಲ್ಲಿ ಮತ್ತು ಜೀವ ಸೇರಿದ್ದಾರೆ. ಮನೆಯಲ್ಲಿ ಮಾತನಾಡಿದ್ರೆ ವಿಷಯ ಲೀಕ್ ಆಗಬಹುದು ಎಂದ ಅಂದಾಜಿಸಿ ಭೂಮಿಕಾ ಎಲ್ಲರನ್ನೂ ಹೋಟೆಲ್‌ಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾಳೆ. ಇತ್ತ ಮನೆಯಲ್ಲಿ ಭೂಮಿಕಾ ಇಲ್ಲದಿರೋದನ್ನು ಕಂಡು ಶಕುಂತಲಾ ವಿಲವಿಲ ಒದ್ದಾಡುತ್ತಿದ್ದಾಳೆ. ಅಂತೂ ಜಾಣೆಯಾಗಿ ಭೂಮಿಕಾ, ಮೀಟಿಂಗ್‌ನಲ್ಲಿ ಹೋಟೆಲ್‌ನಲ್ಲಿ ನಡೆಸಿದ್ದಾಳೆ.
ಕೆಡಿ ಜೈದೇವ್‌ಗೆ ಎರಡು ವೀಕ್‌ನೆಸ್, ಒಂದು ಎಣ್ಣೆ ಮತ್ತೊಂದು ಹೆಣ್ಣು. ಮೊದಲಿಗೆ ಎಣ್ಣೆ ಕುಡಿಸುತ್ತಾ ಬಾಯಿ ಬಿಡಿಸಲು ಲಕ್ಷ್ಮೀಕಾಂತ್ ಮೂಲಕ ಪ್ರಯತ್ನಿಸಲಾಗಿತ್ತು. ಆದ್ರೆ ನಶೆಯಲ್ಲಿದ್ರೂ ಜೈದೇವ್ ಅಲರ್ಟ್ ಆಗಿದ್ರಿಂದ ಯಾವುದೇ ವಿಷಯ ಗೊತ್ತಾಗಿರಲಿಲ್ಲ. ಹಾಗಾಗಿ ಇದೀಗ ಎರಡನೇ ವೀಕ್‌ನೆಸ್ ಮುಂದಿಟ್ಟುಕೊಂಡು ರಹಸ್ಯ ಬೇಧಿಸಲು ಮಲ್ಲಿ ಮುಂದಾಗಿದ್ದಾಳೆ.
55
ಮಧುರ ವ್ಯೂಹ
ಇದಕ್ಕಾಗಿ ಮಲ್ಲಿ ತನ್ನ ಸಹೋದ್ಯೋಗಿ ಮಧುರಾ ಎಂಬಾಕೆಯನ್ನು ಕರೆಸಿಕೊಂಡಿದ್ದಾಳೆ. ಜೈದೇವ್ ಎಷ್ಟು ದುಷ್ಟ ಎಂಬುದನ್ನು ವಿವರಿಸಿ, ಆತನ ಸ್ನೇಹ ಬೆಳೆಸಿ ನಂಬಿಕೆ ಗಳಿಸಬೇಕು. ನಂತರ ಆತನ ಬಾಯಿಂದಲೇ ದಿಯಾ ಮತ್ತು ಅನು ಎಲ್ಲಿ ಹೋದ್ರು ಎಂಬುದನ್ನ ಹೇಳಿಸಬೇಕು ಎಂಬ ಟಾಸ್ಕ್ ನೀಡಿದ್ದಾಳೆ. ಈ ವ್ಯೂಹದಲ್ಲಿ ಜೈದೇವ್ ಸಿಲುಕ್ತಾನಾ ಅಥವಾ ಪರಾರಿಯಾಗ್ತಾನಾ ಎಂಬುದನ್ನು ಸಂಚಿಕೆಯಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.