Amruthadhaare: ಬೇಬಿ ಬೆನ್ನು ಬಿಡದ ಬೇತಾಳ ಜೈದೇವ: ದಿಯಾಗೆ ಮುಹೂರ್ತ ಫಿಕ್ಸ್​! ಏನಾಯ್ತು ನೋಡಿ

Published : May 11, 2026, 10:51 PM IST

ಶಕುನಿ ಮಾಮನ ಸಹಾಯದಿಂದ ಜೈಲಿನಿಂದ ಹೊರಬಂದಿರುವ ಜೈದೇವ, ಎಲ್ಲರನ್ನೂ ಮುಗಿಸುವ ಪಣ ತೊಟ್ಟಿದ್ದಾನೆ. ನೇರವಾಗಿ ದಿಯಾ ಮನೆಗೆ ಬಂದು ಅವಳನ್ನು ಬೆದರಿಸಿದ್ದು, ಜೈದೇವನ ಮೊದಲ ಗುರಿ ದಿಯಾಳೇ ಎಂಬ ಅನುಮಾನ ಮೂಡಿದೆ.

PREV
16
ಜೈಲಿನಿಂದ ಬಂದಾಯ್ತು

ಸದ್ಯ ಜೈದೇವನ ಸ್ಥಿತಿ ಆ ದೇವರಿಗೇ ಪ್ರೀತಿಯಾಗಿದೆ. ಶಕುನಿ ಮಾಮಾ ಜೈದೇವನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಾಗಿದೆ. ಅವನಿಗೆ ಹೀಗೆ ಮಾಡಲು ಹೇಳಿದ್ದು ಯಾರು ಎನ್ನುವುದು ಸದ್ಯಕ್ಕಿರುವ ಕುತೂಹಲ.

26
ಎಲ್ಲರನ್ನೂ ಮುಗಿಸೋ ಪ್ಲ್ಯಾನ್​

ಆದರೆ, ಹುಟ್ಟು ಗುಣ ಹೋಗಬೇಕಲ್ಲ. ಜೈಲಿನಿಂದ ಹೊರಕ್ಕೆ ಬಂದ ಮೇಲೆಯೂ ಯಾರನ್ನೂ ಬಿಡುವುದಿಲ್ಲ ಎನ್ನುವ ಪಣ ತೊಟ್ಟಿದ್ದಾನೆ ಜೈದೇವ. ಎಲ್ಲರನ್ನೂ ಮುಗಿಸುವ ಪ್ಲ್ಯಾನ್​ ಅವನದ್ದು.

36
ನೇರವಾಗಿ ದಿಯಾ ಮನೆಗೆ

ಆದರೆ, ಜೈಲಿನಿಂದ ನೇರವಾಗಿ ಹೆಂಡತಿ ದಿಯಾ ಮನೆಗೆ ಬಂದಿದ್ದಾನೆ ಜೈದೇವ. ಆಕೆಯನ್ನು ಹೊರಕ್ಕೆ ಕರೆದಿದ್ದಾನೆ. ಇವನ ಕೂಗಾಟ ಕೇಳಿ ದಿಯಾ ಗಾಬರಿಯಾಗಿ ಹೋಗಿದ್ದಾಳೆ.

46
ಗಾಬರಿ ಬಿದ್ದ ಬೇಬಿ

ಇಷ್ಟು ದಿನ ಪ್ರೀತಿಯ ನಾಟಕ ಆಡಿ, ಹಾಡಿ ಹೊಗಳಿ ಹಗ್​ ಎಲ್ಲಾ ಮಾಡಿದ್ದು ನೀನೇನಾ, ನಿನ್ನ ಜನ್ಮಕ್ಕೆ ಇಷ್ಟು. ಥೂ ಎಂದು ಉಗುಳಿದ್ದಾನೆ ಜೈದೇವ. ಮೇಲಿನಿಂದಲೇ ಎಲ್ಲವನ್ನೂ ನೋಡುತ್ತಾ ಗಾಬರಿ ಬಿದ್ದಿದ್ದಾಳೆ ದಿಯಾ.

56
ದಿಯಾಳೇ ಮೊದಲ ಗುರಿ

ಒಟ್ಟಿನಲ್ಲಿ ಕೋಪದಲ್ಲಿ ಕುದಿಯುತ್ತಿರುವ ಜೈದೇವನ ಮೊದಲಿನ ಗುರಿ ದಿಯಾಳೇ ಎನ್ನುವ ಅನುಮಾನ ಕಾಡುತ್ತಿದೆ. ಅಷ್ಟಕ್ಕೂ ದಿಯಾ ಪಾತ್ರಧಾರಿಯಾಗಿರುವ ಶ್ವೇತಾ ಅವರ ಮದುವೆ ಕೂಡ ಫಿಕ್ಸ್​ ಆಗಿದ್ದು, ಶೂಟಿಂಗ್​ ಮುಗಿಸಿ ಹೋಗಬಹುದು ಎನ್ನಲಾಗುತ್ತಿದೆ.

66
ಜೈದೇವ್​ ರಿಯಲ್​ ಮದುವೆ

ಅದೇ ಇನ್ನೊಂದೆಡೆ, ಜೈದೇವ ಪಾತ್ರಧಾರಿ ರಾಣವ್​ ಗೌಡ ಅವರ ಮದುವೆ ಭಾರ್ಗವಿ ಎಲ್​ಎಲ್​ಬಿ ನಾಯಕಿ ರಾಧಾ ಭಗವತಿ ಅವರ ಜೊತೆ ಫಿಕ್ಸ್​ ಆಗಿದೆ. ಇಬ್ಬರ ಮದುವೆಯೂ ಇರುವ ಕಾರಣ, ಸೀರಿಯಲ್​ನಲ್ಲಿ ಸ್ವಲ್ಪ ಕುತೂಹಲ ಹೆಚ್ಚಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories