ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ಅವರು ತಮ್ಮ ಹಾಟ್ ಫೋಟೋಗಳಿಗೆ ಬರುವ ಕೆಟ್ಟ ಕಮೆಂಟ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಸಲಿ ಪ್ರೊಫೈಲ್‌ನಿಂದಲೇ ನಿಂದಿಸುವವರ ವಿರುದ್ಧ ಗರಂ ಆಗಿರುವ ಅವರು, ತಮ್ಮ ನಟನಾ ಮತ್ತು ನಿರ್ಮಾಣದ ಯಶಸ್ಸಿನ ಬಗ್ಗೆಯೂ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ (Bigg Boss Tanisha Kuppanda) ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಬಿಗ್ಬಾಸ್ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದರು.
26
ಹಾಟ್ ಅವತಾರದಲ್ಲಿ
ಹೀಗೆ ಸಕತ್ ಬಿಜಿಯಾಗಿರೋ ತನಿಷಾ ಅವರು, ಸಕತ್ ಹಾಟ್ ಅವತಾರದಲ್ಲಿ ಹಲವು ಬಾರಿ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಲಿಟ್ ಡ್ರೆಸ್ ಸೇರಿದಂತೆ ಮಿನಿ ಡ್ರೆಸ್ಗಳಲ್ಲಿ ಕಂಗೊಳಿಸುತ್ತಾರೆ. ಈ ಮೂಲಕ ಪಡ್ಡೆಗಳ ನಶೆ ಏರಿಸುತ್ತಾರೆ. ಇವರ ಈ ಡ್ರೆಸ್ ಸೆನ್ಸ್ಗೆ ಸಾಕಷ್ಟು ಹೊಗಳಿಕೆಗಳು ಬಂದರೂ ಅಷ್ಟೇ ರೀತಿಯಲ್ಲಿ ಕೆಟ್ಟ ಕಮೆಂಟ್ಸ್ಗಳೂ ಬರುತ್ತವೆ.
36
ನೊಂದು ನುಡಿದ ನಟಿ
ಕೆಟ್ಟ ಕಮೆಂಟ್ಸ್ ಬಗ್ಗೆ ತನಿಷಾ ನೊಂದು ನುಡಿದಿದ್ದಾರೆ. ಸುದ್ದಿಮನೆ ಕನ್ನಡಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನೋಡಬಾರದು ಎನ್ನಿಸಿದರೂ ಕೆಲವೊಮ್ಮೆ ನೋಡಿ ಹೋಗ್ತದೆ. ಹಲವರು ಫೇಕ್ ಪ್ರೊಫೈಲ್ನಿಂದ ಕೆಟ್ಟ ಕಮೆಂಟ್ಸ್ ಹಾಕಿದ್ರೆ ಮತ್ತೆ ಕೆಲವರು ಒರಿಜಿನಲ್ ಪ್ರೊಫೈಲ್ ಇಟ್ಟುಕೊಂಡೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಒಬ್ಬಾತ ಅಸಲಿ ಪ್ರೊಫೈಲ್ನಿಂದ ಒಂದು ಮೆಸೇಜ್ ಹಾಕಿದ್ದ. ಇವ್ಳು ಊರ ಡ್ಯಾಶ್ ಡ್ಯಾಶ್ ಅಂತ ಕಮೆಂಟ್ಸ್ ಹಾಕಿದ್ದ. ಆ ಪ್ರೊಫೈಲ್ನಲ್ಲಿ ಅವನ ಅಮ್ಮ, ಪತ್ನಿ ಎಲ್ಲಾ ಇದ್ದಾರೆ. ಅವರಿಗೂ ಯಾರಾದ್ರೂ ಹೀಗೆ ಹಾಕಿದ್ರೆ ಏನಾಗುತ್ತೆ ಎನ್ನುವ ಸೆನ್ಸ್ ಬೇಡ್ವಾ ಎಂದು ಗರಂ ಆಗಿದ್ದಾರೆ ನಟಿ. ಇನ್ನು ಕೆಲವರು ಡಿಎಂನಲ್ಲಿಯೇ ಬಂದು ಏನೋ ಹೇಳ್ತಾರೆ. ಬಾರೋ ಹೇಳ್ತೇನೆ ಅಂದ್ರೆ ಸಾರಿ, ನೀವು ನೋಡಲ್ಲ ಅಂತ ಮೆಸೇಜ್ ಮಾಡಿದೆ ಅಂತಾರೆ. ನೋಡಲ್ಲ ಅಂದ್ಮೇಲೆ ಮೆಸೇಜ್ ಏಕೆ ಹಾಕಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ತನಿಷಾ ಕುಪ್ಪಂಡ.
56
ಕಿರುತೆರೆ-ಹಿರಿತೆರೆಗಳಲ್ಲಿ ಸಕ್ಸಸ್
ಅಂದಹಾಗೆ ತನಿಷಾ, ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್ ಆಗಿದ್ದಾರೆ. ಅದರಲ್ಲಿಯೂ ಬಿಗ್ಬಾಸ್ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಪೆನ್ಡ್ರೈವ್ ಸಿನಿಮಾದಲ್ಲಿಯೂ ಸಕತ್ ನಟನೆ ಮಾಡಿದ್ದಾರೆ. ಇಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
66
ನಿರ್ಮಾಪಕಿಯಾಗಿ ಯಶಸ್ಸು
ಇದೀಗ ನಿರ್ಮಾಣ ಹಂತಕ್ಕೂ ಇಳಿದು ಸಕ್ಸಸ್ ಕಂಡಿದ್ದಾರೆ. ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕ ಪಾಲ್, ರವಿಕಿರಣ್ .ಎನ್ ಅವರು ‘ಕೋಣ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಸಂಗೀತ ನಿರ್ದೇಶನವಿದೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಉಮೇಶ್ ಆರ್. ಬಿ. ಅವರ ಸಂಕಲನವಿದ್ದು, ಸಾಹಸ ನಿರ್ದೇಶಕರಾಗಿ ವಿನೋದ್‌ಕುಮಾರ್ ಹಾಗೂ ನೃತ್ಯ ನಿರ್ದೇಶನವನ್ನು ಮುರುಗನ್ ಮಾಡಿದ್ದಾರೆ. ತನಿಷಾ ಕುಪ್ಪಂಡ ಈಚೆಗೆ ಪೈರಸಿ ವಿರುದ್ಧ ಜಗ್ಗೇಶ್ ಅವರ ಕೈಜೋಡಿಸಿದ್ದರು. ಅದರಲ್ಲಿ ಯಶಸ್ಸನ್ನೂ ಕಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.