ಅಮೃತಧಾರೆ ಧಾರಾವಾಹಿಯಲ್ಲಿ ಕೇಕ್ನಲ್ಲಿ ಬಾಂಬ್ ಇಟ್ಟ ಆರೋಪದ ಮೇಲೆ ಜೈದೇವನನ್ನು ಶಕುಂತಲಾ ಪೊಲೀಸರಿಗೆ ಒಪ್ಪಿಸಿದ್ದಾಳೆ. ಆದರೆ, ಇದೀಗ ಬಿಡುಗಡೆಯಾಗಿರುವ ಪ್ರೊಮೋ ಪ್ರಕಾರ, ಜೈದೇವ ನಿರಪರಾಧಿಯಾಗಿದ್ದು, ಇದು ಶಕುಂತಲಾಳೇ ಆಡಿದ ಹೊಸ ನಾಟಕವೇ ಎಂಬ ಅನುಮಾನ ಮೂಡಿದೆ.
ಅಮೃತಧಾರೆ ಸೀರಿಯಲ್ (Amruthadhaare Serial) ಇನ್ನೇನು ಮುಗಿಯತ್ತೆ ಎಂದುಕೊಳ್ಳುತ್ತಿರುವಾಗಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಸೀರಿಯಲ್ ಇನ್ನಷ್ಟು ಎಳೆಯಲಾಗುತ್ತಿದೆ. ಇದೀಗ ಇನ್ನೊಂದು ಟ್ವಿಸ್ಟ್ ಬಂದಿದ್ದು, ಬಹುಶಃ ಈಗಲೂ ಸೀರಿಯಲ್ ಮುಗಿಯುವ ಹಾಗೆ ಕಾಣುತ್ತಿಲ್ಲ.
26
ಮುಖವಾಡದಲ್ಲಿ ಜೈದೇವ
ಮಿಂಚು ಗೌತಮ್ ಮತ್ತು ಭೂಮಿಕಾರ ಸ್ವಂತ ಮಗು ಎಂದು ತಿಳಿದು ಆಗಿದೆ. ಅಲ್ಲಿಗೆ ಬಹುತೇಕ ಸೀರಿಯಲ್ ಮುಗಿದಂತೆ ಅಂದುಕೊಂಡಾಗಿತ್ತು. ಅಷ್ಟೇ ಅಲ್ಲದೇ ಮಕ್ಕಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೈದೇವ ಮುಖವಾಡ ಧರಿಸಿ ಅಲ್ಲಿಗೆ ಬಂದು ಮಕ್ಕಳಿಗೆ ಗಿಫ್ಟ್ ಕೊಟ್ಟಿದ್ದಾನೆ.
36
ಕೇಕ್ನಲ್ಲಿ ಬಾಂಬ್
ಅದೇ ವೇಳೆ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ ಕೇಕ್ನಲ್ಲಿ ಬಾಂಬ್ ಇಟ್ಟಿರುವುದು ತಿಳಿದಿದೆ. ಪೊಲೀಸರು ಬರುತ್ತಲೇ ಇನ್ನು ಇಲ್ಲಿ ಇರೋದು ಸೇಫ್ ಅಲ್ಲ ಎಂದು ಜೈದೇವ ಹೊರಟು ಹೋಗಿದ್ದಾನೆ.
ಬಳಿಕ ಬಾಂಬ್ ಇಟ್ಟಿರುವುದು ಎಲ್ಲರಿಗೂ ತಿಳಿದಿದೆ. ಅಲ್ಲಿ ಪೊಲೀಸರು ಬಂದಿದ್ದಾರೆ. ಶಕುಂತಲಾನೇ ಖುದ್ದು ಜೈದೇವನ ಬಳಿಗೆ ಹೋಗಿ ಬಾಂಬ್ ಇಟ್ಟಿದ್ದು ನೀನೇ ಎನ್ನುವುದು ತಿಳಿದಿದೆ ಎಂದು ಹೇಳಿ ಅವನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.
56
ಶಕುಂತಲಾ ಮಾಡಿದ್ದಾಳಾ?
ಆದರೆ ಬಿಡುಗಡೆಯಾಗಿರುವ ಪ್ರೊಮೋ ನೋಡಿದಾಗ, ಜೈದೇವ ಈ ಕೆಲಸ ಮಾಡಿದನಾ, ಇಲ್ಲವಾ ಎನ್ನುವ ಸಂದೇಹ ಬರುವಂತಿದೆ. ಇದನ್ನು ಶಕುಂತಲಾನೇ ಏಕೆ ಮಾಡಿಸಿರಬಾರದು ಎನ್ನುವ ಸಂದೇಹವೂ ಜೊತೆಗಿದೆ.
66
ಹುಟ್ಟುಗುಣ ಸುಟ್ಟರೂ ಹೋಗಲ್ಲ
ಅಷ್ಟಕ್ಕೂ ಹುಟ್ಟುಗುಣ ಸುಟ್ಟರೂ ಹೋಗಲ್ಲ ಎನ್ನುವ ಮಾತಿನಂತೆ, ಶಕುಂತಲಾ ಬದಲಾದಂತೆ ತೋರುತ್ತಿದ್ದರೂ, ಇನ್ನೂ ಅವಳ ಮೇಲೆ ಹಲವು ವೀಕ್ಷಕರಿಗೆ ಡೌಟ್ ಇದ್ದೇ ಇದೆ. ಈಗ ಹೇಗಿದ್ದರೂ ಡೌಟ್ ಜೈದೇವನ ಮೇಲೆ ಬರುವುದು ತಿಳಿದು ಈ ಕಿತಾಪತಿಯನ್ನೂ ಅವಳೇ ಏಕೆ ಮಾಡಿರಬಾರದು? ಅಷ್ಟಕ್ಕೂ ಸೀರಿಯಲ್ ಟಿಆರ್ಪಿ ಚೆನ್ನಾಗಿ ಇರುವಾಗ ಅದನ್ನು ಅಷ್ಟು ಬೇಗ ಮುಗಿಸುವುದಿಲ್ಲ. ಆದ್ದರಿಂದ ಇದೀಗ ಶಕುಂತಲಾಳ ಟ್ವಿಸ್ಟ್ ಕೊಟ್ಟು ಇನ್ನಷ್ಟು ದಿನ ಸೀರಿಯಲ್ ಮುಂದುವರೆಯುವ ಸಾಧ್ಯತೆಯೂ ಇದ್ದೇ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.