ಜಗದ್ಧಾತ್ರಿ ಸೀರಿಯಲ್​ ಆರಂಭ: ಯಾವ ಧಾರಾವಾಹಿ ಆಗಲಿದೆ ಮುಕ್ತಾಯ? ರೋಚಕ ಪ್ರೋಮೊ

Published : Jun 24, 2026, 01:07 PM IST

ಜೀ ಕನ್ನಡದಲ್ಲಿ 'ಜಗದ್ಧಾತ್ರಿ' ಎಂಬ ಹೊಸ ಧಾರಾವಾಹಿ ಶೀಘ್ರದಲ್ಲೇ ಆರಂಭವಾಗಲಿದೆ. ಮೋಕ್ಷಿತಾ ಪೈ ನಾಯಕಿಯಾಗಿ ನಟಿಸುತ್ತಿದ್ದು, ಇದು ಸ್ಪೈ ಏಜೆಂಟ್ ಕಥೆಯಾಗಿದೆ. ಈ ಹೊಸ ಸೀರಿಯಲ್​ನ ಆಗಮನದಿಂದ 'ಅಮೃತಧಾರೆ' ಅಥವಾ 'ಬ್ರಹ್ಮಗಂಟು' ಧಾರಾವಾಹಿಗಳಲ್ಲಿ ಒಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.

PREV
16
ಜಗದ್ಧಾತ್ರಿ ಸೀರಿಯಲ್​

ಜೀ ಕನ್ನಡದಲ್ಲಿ ಈಗ ಜಗದ್ಧಾತ್ರಿ ಸೀರಿಯಲ್​ ಪ್ರೊಮೋ ಬಿಡುಗಡೆಯಾಗುತ್ತಿದೆ. ಇದರ ರೋಚಕ ಪ್ರೊಮೋ ಇದಾಗಲೇ ವಾಹಿನಿ ಶೇರ್​ ಮಾಡಿಕೊಳ್ಳುತ್ತಿದೆ. ಇದರಲ್ಲಿ ನಾಯಕಿ ಮೋಕ್ಷಿತಾ ಪೈ ಎನ್ನುವುದು ಇದಾಗಲೇ ಬಿಡುಗಡೆಯಾಗಿರುವ ಪ್ರೊಮೋದಿಂದ ತಿಳಿದುಬಂದಿದೆ. ಇದರ ನಡುವೆಯೇ, ಕವಿತಾ ಗೌಡ ಮತ್ತೆ ಕಿರುತೆರೆಗೆ ಜಗದ್ಧಾತ್ರಿ ಧಾರಾವಾಹಿ ಮೂಲಕ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದ ಸದ್ಯ ಇಬ್ಬರು ನಾಯಕಿಯರಾ ಅಥವಾ ಇನ್ನೇನು ಟ್ವಿಸ್ಟ್​ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

26
ಹೊಸ ಪ್ರೊಮೋ

ಜಗದ್ಧಾತ್ರಿಯ ಹೊಸ ಪ್ರೊಮೋ ಒಂದು ಈಗ ಬಿಡುಗಡೆ ಮಾಡಲಾಗಿದ್ದು, ಈಗಲೂ ಸೀರಿಯಲ್​ ಅತಿ ಶೀಘ್ರದಲ್ಲಿ ಎಂದು ತೋರಿಸಲಾಗಿದೆ. ಸಾಮಾನ್ಯವಾಗಿ ಒಂದು ತಿಂಗಳು ಮುಂಚೆ ಈ ರೀತಿಯ ಪ್ರೊಮೋ ಬಿಡುವುದು ವಾಡಿಕೆ. ಹಾಗಿದ್ದರೆ ಶೀಘ್ರದಲ್ಲಿ ಯಾವ ಸೀರಿಯಲ್​​ ಮುಗಿಯತ್ತೆ ಎನ್ನುವ ಕುತೂಹಲ ವೀಕ್ಷಕರದ್ದಾಗಿದೆ.

36
ಏನಿದು ಸ್ಟೋರಿ?

ಈ ಧಾರಾವಾಹಿಯ ಮೂಲ ಮರಾಠಿ ಧಾರಾವಾಹಿ ಇದು ಹೌಸ್ ವೈಫ್ ಆಗಿ ಗುರುತಿಸಿಕೊಂಡಿರುವ ಸ್ಪೈ ಏಜೆಂಟ್ ಕಥೆಯಾಗಿದೆ. Mokshita Pai ಅವರು ಕ್ರೈಂ ಬ್ರ್ಯಾಂಚ್​ ಆಫೀಸರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ನಾಯಕನಾಗಿ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನಮ್ಮನೆ ಯುವರಾಣಿ’ ನಾಯಕ ಹಾಗೂ ವೀಕ್ಷಕರ ಮೆಚ್ಚಿನ ಅನಿಕೇತ್ ಖ್ಯಾತಿಯ ದೀಪಕ್ ಗೌಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

46
ಎರಡು ಸೀರಿಯಲ್​ ಮುಗಿಯಲಿವೆ!

ಸದ್ಯ ಇರುವ ಸ್ಥಿತಿ ನೋಡಿದರೆ ಎರಡು ಸೀರಿಯಲ್​ಗಳು ಮುಗಿಯುವ ಹಂತದಲ್ಲಿದೆ. ಅದು ಅಮೃತಧಾರೆ (Amruthadhaare) ಮತ್ತು ಬ್ರಹ್ಮಗಂಟು (Brahmagantu).

56
ಮತ್ತೆ ಜೈಲಿಗೆ ಹೋದ ಜೈದೇವ

ಅಮೃತಧಾರೆಯಲ್ಲಿ ಇದಾಗಲೇ ಜೈದೇವನ ಅಟ್ಟಹಾಸ ಮಿತಿಮೀರಿತ್ತು. ಮಿಂಚು ಮತ್ತು ಆಕಾಶ್​ ಹುಟ್ಟುಹಬ್ಬದಂದು ಬಾಂಬ್ ಇಡುವ ಮಟ್ಟಿಗೆ ಆತ ಬಂದಿದ್ದ. ಶಕುಂತಲಾ ಖುದ್ದಾಗಿ ಆತನನ್ನು ಪೊಲೀಸರಿಗೆ ಹಿಡಿಸಿಕೊಟ್ಟಿದ್ದಾಳೆ. ಅಲ್ಲಿಗೆ ಎಲ್ಲವೂ ಒಂದು ಹಂತದಲ್ಲಿ ಮುಕ್ತಾಯ ಆದಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಸೀರಿಯಲ್​ ಎಳೆಯಲು ಇನ್ನೇನೂ ಕಾಣುತ್ತಿಲ್ಲ. ಆದರೂ ಟಿಆರ್​ಪಿ ಉಳಿಸಿಕೊಂಡಿರುವ ಅಮೃತಧಾರೆಗೆ ಮತ್ತೊಂದಿಷ್ಟು ಉಪ ಕಥೆಗಳನ್ನು ತುರುಕಿದರೂ ಅಚ್ಚರಿ ಏನಿಲ್ಲ.

66
ಮುಗಿಯೋ ಹಂತದಲ್ಲಿ ಬ್ರಹ್ಮಗಂಟು

ಇನ್ನು ಬ್ರಹ್ಮಗಂಟು ಸೀರಿಯಲ್​. ಇದರಲ್ಲಿಯೂ ಸೌಂದರ್ಯಳ ಅಸಲಿ ಮುಖ ಚಿರುಗೆ ಗೊತ್ತಾಗುವ ಹಂತ ಬಂದಿದೆ. ದೀಪಾ ಮತ್ತು ದಿಶಾ ಒಬ್ಬರೇ ಎಂದು ತಿಳಿಯುವುದೂ ಹೆಚ್ಚು ಹೊತ್ತು ಬೇಕಾಗಲ್ಲ. ಅರ್ಚನಾ ಜೀವನದಲ್ಲಿ ಇನ್ನೊಬ್ಬನ ಎಂಟ್ರಿ ಕೊಡಿಸಲಾಗಿದ್ದು, ಅವಳ ಲೈಫೂ ಸೆಟ್ಲ್​ ಆದರೆ ಅಲ್ಲಿಗೆ ಸೀರಿಯಲ್​ ಮುಗಿಯುತ್ತೆ. ಇವೆರಡು ಸೀರಿಯಲ್​ಗಳಲ್ಲಿ ಒಂದು ಪಕ್ಕಾ ಮುಕ್ತಾಯವಾಗಲಿದ್ದು, ಆ ಜಾಗಕ್ಕೆ ಜಗದ್ಧಾತ್ರಿ ಬರಲಿದೆ ಎಂದೇ ಹೇಳಲಾಗುತ್ತಿದೆ. ಆದರೂ ಇನ್ನೂ ಯಾವುದೂ ಸ್ಪಷ್ಟವಾಗಿಲ್ಲ. ಶೀಘ್ರದಲ್ಲಿಯೇ ಇದಕ್ಕೆ ಉತ್ತರ ಸಿಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories