Kavya Shaiva: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ನಟಿಸುತ್ತಿರುವ ಹೊಸ ಸಿನಿಮಾಕ್ಕೆ ನಾಯಕಿ ಕಾವ್ಯಾ ಶೈವ ಎಂದು ಅಭಿಮಾನಿಗಳು ಎಲ್ಲೆಡೆ ಗುಲ್ಲೆಬ್ಬಿಸುತ್ತಿದ್ದರೆ, ನಟಿ ಮಾತ್ರ ನನಗೂ ಅದಕ್ಕೂ ಸಂಬಂಧನೇ ಇಲ್ಲ ಎನ್ನುವಂತೆ, ಕೋಲು ಹಿಡಿದು ಬೆಟ್ಟ ಹತ್ತಿ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡ್ತಿದ್ದಾರೆ.
ಬಿಗ್ ಬಾಸ್ ಸೀಸನ್ 12ರಲ್ಲಿ ತಮ್ಮ ನೇರವಾದ ಮಾತುಗಳ ಮೂಲಕ ಹಾಗೂ ಆಟದ ಮೂಲಕ ಜೊತೆಗೆ ಗಿಲ್ಲಿ ನಟನ ಜೊತೆ ಜಂಟಿಯಾಗುವ ಮೂಲಕ ಎಂಟ್ರಿ ಕೊಟ್ಟು, ಜನಮನ ಗೆದ್ದ ನಟಿ ಅಂದ್ರೆ ಅದು ಕಾವ್ಯಾ ಶೈವ. ಆದರೆ ಈಗ ಏನು ಮಾಡ್ತಿದ್ದಾರೆ ನಟಿ.
26
ಬಿಗ್ ಬಾಸ್ ಬಳಿಕ ಕಾವ್ಯಾ ಏನು ಮಾಡ್ತಿದ್ದಾರೆ?
ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಹೆಚ್ಚಿನ ಸ್ಪರ್ಧಿಗಳು ಎಲ್ಲರೂ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋ, ಸೀರಿಯಲ್, ಸಿನಿಮಾ ಎಂದು ನಟಿಸುತ್ತಿದ್ದಾರೆ. ಆದರೆ ಕಾವ್ಯಾ ಶೈವ ಮಾತ್ರ ಸಿನಿಮಾ ಹಾಗೂ ಸೀರಿಯಲ್ ಯಾವುದರ ಕುರಿತು ಕೂಡ ಮಾಹಿತಿ ನೀಡಿಲ್ಲ.
36
ಗಿಲ್ಲಿ ಜೊತೆ ನಟಿಸ್ತಾರ?
ಇತ್ತೀಚೆಗೆ ಗಿಲ್ಲಿ ನಟನ ಹುಟ್ಟುಹಬ್ಬದ ಸಮಯದಲ್ಲಿ ಗಿಲ್ಲಿ ಮೊದಲ ಬಾರಿ ನಾಯಕನಾಗಿ ಪದಾರ್ಪಣೆ ಮಾಡಲಿರುವ ‘ಪಳಾರ್’ ಸಿನಿಮಾದ ಮುಹೂರ್ತ ನೆರವೇರಿತ್ತು. ಈ ಸಿನಿಮಾಗೆ ನಾಯಕಿ ಇನ್ನೂ ಫಿಕ್ಸ್ ಆಗಿಲ್ಲ, ಆದರೆ ಅಭಿಮಾನಿಗಳು ಮಾತ್ರ ಕಾವ್ಯಾ ಶೈವಾನೆ ಸಿನಿಮಾ ನಾಯಕಿ ಎನ್ನುತ್ತಿದ್ದಾರೆ.
ಅಭಿಮಾನಿಗಳು ಕಾವ್ಯಾನೆ ಗಿಲ್ಲಿಗೆ ನಾಯಕಿ ಎಂದು ಗುಲ್ಲೆಬ್ಬಿಸುತ್ತಿದರೆ, ನಟಿ ಮಾತ್ರ ಎಲ್ಲವನ್ನೂ ಬಿಟ್ಟು, ಸೈಲೆಂಟ್ ಆಗಿ, ಕೈಯಲ್ಲೊಂದು ಕೋಲು ಹಿಡಿದುಕೊಂಡು, ಬೆಟ್ಟ, ಕಾಡು ಮೇಡುಗಳನ್ನು ಅಲೆದು, ಪ್ರಕೃತಿ ಸೌಂದರ್ಯದ ನಡುವೆ ಎಂಜಾಯ್ ಮಾಡುತ್ತಿದ್ದಾರೆ.
56
ಟ್ರೆಕ್ಕಿಂಗ್ ಮಾಡಿದ ನಟಿ
ಹೌದು, ಕಾವ್ಯಾ ಶೈವ ಸುಂದರವಾದ ಬೆಟ್ಟವೊಂದಕ್ಕೆ ಟ್ರೆಕ್ಕಿಂಗ್ ಮಾಡಿದ್ದು, ಅಲ್ಲಿ ಪ್ರಕೃತಿ ಸೌಂದರ್ಯದ ನಡುವೆ ಕಳೆದು ಹೋಗಿರುವ ಫೋಟೊ ಹಾಗೂ ವಿಡಿಯೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಬ್ಯುಸಿ ದಿನಗಳು, ಟ್ರಾಫಿಕ್ ಕಿರಿಕಿರಿ ಎಲ್ಲದರಿಂದ ದೂರ ಉಳಿದು ನಟಿ ಕಾಡು ಮೇಡು ಅಲೆದು ಏಕಾಂತದಲ್ಲಿ ಸಂತಸ ಕಂಡಿದ್ದಾರೆ.
66
ಸೀರಿಯಲ್ ಮೂಲಕ ನಟನೆ ಆರಂಭಿಸಿದ ಕಾವ್ಯಾ
ಕಾವ್ಯಾ ಶೈವಾ ಕಲರ್ಸ್ ಕನ್ನಡ ವಾಹಿನಿಯ ‘ಕೆಂಡಸಂಪಿಗೆ’ ಧಾರಾವಾಹಿ ಮೂಲಕ ತಮ್ಮ ನಟನಾ ಜರ್ನಿ ಆರಂಭಿಸಿದರು. ಬಳಿಕ ಡಿಕೆಡಿಕೆಯಲ್ಲಿ ಭಾಗವಹಿಸಿ ವಿನ್ನರ್ ಕೂಡ ಆದರು. ನಂತರ ಬಿಗ್ ಬಾಸ್ ಸೀಸನ್ 12ರ ಮೂಲಕ ಜನಪ್ರಿಯತೆಯನ್ನು ಪಡೆದರು. ಇತ್ತೀಚೆಗೆ ಚಿತ್ತಾರ ಸ್ಟಾರ್ ಅವಾರ್ಡ್ಸ್ 2026ರಲ್ಲಿ ‘ಚಿತ್ತಾರ ಬೆಸ್ಟ್ ಪ್ರಾಮಿಸಿಂಗ್ ಸ್ಟಾರ್ ಫೀಮೇಲ್’ ಪ್ರಶಸ್ತಿಯನ್ನು ಪಡೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.