Amruthadhaare ಟ್ವಿಸ್ಟ್​- ಡಾಕ್ಟರ್​ vs ಕೊರವಂಜಿ; ಗೆಲ್ಲೋರು ಯಾರು? ಮಂಜುನಾಥನ ಸನ್ನಿಧಿಯಲ್ಲಿ ಪವಾಡ

Published : Jul 18, 2026, 05:30 PM IST

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಕ್ಯಾನ್ಸರ್ ಇರುವುದು ವೀಕ್ಷಕರಲ್ಲಿ ಆತಂಕ ಮೂಡಿಸಿದೆ. ಆದರೆ, ಇದೀಗ ದೇವಸ್ಥಾನದಲ್ಲಿ ಕೊರವಂಜಿಯೊಬ್ಬಳು ಭೂಮಿಕಾ ದೀರ್ಘ ಸುಮಂಗಲಿಯಾಗಿ ಬಾಳುತ್ತಾಳೆ ಎಂದು ಭವಿಷ್ಯ ನುಡಿದಿದ್ದಾಳೆ. ಇದು ಭೂಮಿಕಾಳ ಪಾತ್ರಕ್ಕೆ ಏನೂ ಆಗುವುದಿಲ್ಲ ಎಂಬ ಭರವಸೆಯನ್ನು ಮೂಡಿಸಿದೆ.

PREV
16
ಭೂಮಿಕಾ-ಕ್ಯಾನ್ಸರ್​

ಅಮೃತಧಾರೆ ಸೀರಿಯಲ್​ ವಿರುದ್ಧ ಸದ್ಯ ವೀಕ್ಷಕರ ಆಕ್ರೋಶ ಹೆಚ್ಚಾಗಿದೆ. ಒಂದೆಡೆ ಭೂಮಿಕಾಗೆ ಬ್ರೆಸ್ಟ್​ ಕ್ಯಾನ್ಸರ್​ ಇದೆ ಎಂದು ವೈದ್ಯರು ಹೇಳಿರುವುದು, ಅವಳು ಇನ್ನು ಕೆಲವೇ ತಿಂಗಳು ಬದುಕುವುದು ಎಂದು ಹೇಳುವ ಮೂಲಕ, ಕ್ಯಾನ್ಸರ್​ ಬಂದವರಿಗೆಲ್ಲ ಸಾವೇ ದಾರಿ ಎನ್ನುವ ರೀತಿಯಲ್ಲಿ ವೈದ್ಯರು ಮಾತನಾಡಿದ್ದಕ್ಕೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ.

26
ವೀಕ್ಷಕರು ಏನಂದ್ರು?

ಅದೇ ಇನ್ನೊಂದೆಡೆ, ಭೂಮಿಕಾಗೆ ಏನೂ ಆಗಬಾರದು. ಜೀವನ ಪೂರ್ತಿ ಇವರದ್ದು ಗೋಳು ತೋರಿಸೋದು ಸರಿಯಲ್ಲ. ಎಷ್ಟೋ ವರ್ಷಗಳ ಬಳಿಕ ಇಬ್ಬರೂ ಒಂದಾಗಿದ್ದಾರೆ. ಹ್ಯಾಪ್ಪಿ ಎಂಡಿಂಗ್​ ಮಾಡಿ, ಹೀಗೆಲ್ಲಾ ಬೇಡ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಇದು ಶಕುಂತಲಾ ಕುತಂತ್ರ ಎಂದೂ ಹೇಳುತ್ತಿದ್ದಾರೆ.

36
ಕಣಿ ಶಾಸ್ತ್ರ

ಇವೆಲ್ಲವುಗಳ ನಡುವೆಯೇ ಇದೀಗ ವೀಕ್ಷಕರಿಗೆ ಭರ್ಜರಿ ಗುಡ್​ನ್ಯೂಸ್​ ಒಂದು ಸಿಕ್ಕಿದೆ. ಅದೇನೆಂದರೆ, ಗೌತಮ್​ ಮತ್ತು ಭೂಮಿಕಾ ದೇವಾಲಯವೊಂದಕ್ಕೆ ಹೋಗಿದ್ದಾರೆ. ಅದು ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯ. ಅಲ್ಲಿ ಕಣಿ ಹೇಳುವವಳು ಇವರಿಬ್ಬರ ಕೈ ನೋಡಿದ್ದಾಳೆ.

46
ಭೂಮಿಕಾಳ ಕೈ ನೋಡಿದ ಕೊರವಂಜಿ

ಹಿಂದಿನ ಪ್ರೊಮೋದಲ್ಲಿ ಗೌತಮ್​ ಕೈ ನೋಡಿ ಕೊರವಂಜಿ ಎಲ್ಲಾ ಒಳ್ಳೆಯದಾಗುತ್ತದೆ ಎಂದಿದ್ದಳು. ಇದೀಗ ಭೂಮಿಕಾ ಕೈ ನೋಡಿ ಏನು ಹೇಳಿದಳು ಎನ್ನುವುದನ್ನೂ ತೋರಿಸಲಾಗಿದೆ. ಅದರಲ್ಲಿ ಕೊರವಂಜಿ ನಿಮ್ಮಿಬ್ಬರ ಸಂಸಾರ ನೂರ್ಕಾಲ ಚೆನ್ನಾಗಿ ಇರುತ್ತದೆ. ಮುತ್ತೈದೆಯಾಗಿಯೇ ಕೊನೆಯವರೆಗೂ ಇರುವೆ. ನಿಮ್ಮ ಸಂಸಾರ ತುಂಬಾ ಚೆನ್ನಾಗಿ ಸದಾಕಾಲ ಇರುತ್ತದೆ ಎಂದಿದ್ದಾಳೆ.

56
ಭೂಮಿಕಾಗೆ ಏನೂ ಆಗಲ್ಲ

ಅಲ್ಲಿಗೆ ದೇವರ ಸನ್ನಿಧಿಯಲ್ಲಿ ಹೇಳಿದ ಮಾತಿನಿಂದ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ಕನ್​ಫರ್ಮ್​ ಆಗಿದೆ. ಒಂದಿಷ್ಟು ಗೋಳಾಟದ ನಡುವೆ, ಗೌತಮ್​ ಹೇಗಾದರೂ ಮಾಡಿ ಭೂಮಿಕಾಳನ್ನು ಉಳಿಸಿಕೊಳ್ಳುತ್ತಾನೆ ಎಂದು ವೀಕ್ಷಕರು ಖುಷಿಪಟ್ಟುಕೊಳ್ಳುತ್ತಿದ್ದಾರೆ.

66
ವೈದ್ಯರು vs ಕೊರವಂಜಿ

ಅಲ್ಲಿಗೆ ಕ್ಯಾನ್ಸರ್​ ರೋಗಿಗಳ ಬಾಳಿನಲ್ಲಿ ಒಂದೊಳ್ಳೆ ಆಶಾಕಿರಣವನ್ನು ಸೀರಿಯಲ್​ ತೋರಿಸಲಿ, ಸಾವೇ ಕೊನೆಯಲ್ಲ ಎನ್ನುವುದನ್ನು ಮುಂದೆಯಾದರೂ ಧಾರಾವಾಹಿ ಮೂಲಕ ಸಾರಲಿ ಎನ್ನುವುದು ವೀಕ್ಷಕರ ಆಸೆ. ಅಲ್ಲಿಗೆ ವೈದ್ಯರು ಹೇಳಿದಂತೆ ಭೂಮಿಕಾ ಸಾಯ್ತಾಳಾ ಅಥವಾ ಕೊರವಂಜಿ ಹೇಳಿದಂತೆ ಕ್ಯಾನ್ಸರ್​ ರೋಗಿಗಳೂ ಗುಣಮುಖ ಆಗಬಹುದು ಎಂದು ತೋರಿಸ್ತಾರಾ ಎನ್ನುವುದನ್ನು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories