Amruthadhaare: ಪೊಲೀಸ್​ ಮಲ್ಲಿಯ ಭರ್ಜರಿ ಎಂಟ್ರಿ- ಜೈದೇವ್​, ಶಕುಂತಲಾಗೆ ಮುಹೂರ್ತ ಫಿಕ್ಸ್​

Published : Jul 26, 2026, 12:46 PM IST

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಕ್ಯಾನ್ಸರ್​ ಬಂದಿದ್ದು, ಆಕೆಯ ಬದುಕು ಹೋರಾಟಮಯವಾಗಿದೆ. ಇನ್ನೊಂದೆಡೆ, ಇನ್ಸ್​ಪೆಕ್ಟರ್​ ಆಗಿ ಎಂಟ್ರಿ ಕೊಟ್ಟಿರುವ ಮಲ್ಲಿ, ಜೈದೇವ್ ಮತ್ತು ಶಕುಂತಲಾ ಕುತಂತ್ರವನ್ನು ಬಯಲಿಗೆಳೆಯುವ ಸೂಚನೆ ನೀಡಿದ್ದಾಳೆ.

PREV
17
ಭೂಮಿಕಾ ಮತ್ತು ಗೌತಮ್​ ಬಾಳಿನಲ್ಲಿ ಬಿರುಗಾಳಿ

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಭೂಮಿಕಾ ಮತ್ತು ಗೌತಮ್​ ಬಾಳಿನಲ್ಲಿ ಬಿರುಗಾಳಿ ಬಂದಿದೆ. ಭೂಮಿಕಾಗೆ ಬ್ರೆಸ್ಟ್​ ಕ್ಯಾನ್ಸರ್​ ಬಂದಿದ್ದು, ವೈದ್ಯರು ಟ್ರೀಟ್​ಮೆಂಟ್​ ಶುರು ಮಾಡುವಂತೆ ಹೇಳಿದ್ದಾರೆ. ಕ್ಯಾನ್ಸರ್ ಎಂದಾಕ್ಷಣ ಕಿಮೋಥೆರಪಿಗೆ ಎಲ್ಲದ್ದಕ್ಕೂ ಮದ್ದು ಎನ್ನುವ ಅಂಶವನ್ನು ಈ ಸೀರಿಯಲ್​ನಲ್ಲಿಯೂ ಹೇಳಲಾಗಿದ್ದು, ಅದರಂತೆ ಭೂಮಿಕಾಗೆ ಕಿಮೋಥೆರಪಿಗೆ ಡಾಕ್ಟರ್​ ಶಿಫಾರಸು ಮಾಡಿದ್ದಾರೆ.

27
ಮಲ್ಲಿ ಭರ್ಜರಿ ಎಂಟ್ರಿ

ಅದೇ ಇನ್ನೊಂದೆಡೆ, ಮಲ್ಲಿ ಪೊಲೀಸ್​ ಇಲಾಖೆಗೆ ಜಾಯಿನ್​ ಆಗಿದ್ದಾಳೆ. ಓಡಿಹೋಗುತ್ತಿರುವ ಕಳ್ಳನೊಬ್ಬನನ್ನು ಹಿಡಿಯುವ ಮೂಲಕ ಮಲ್ಲಿ ಗ್ರ್ಯಾಂಡ್​ ಎಂಟ್ರಿ ನೀಡಿದ್ದಾಳೆ.

37
ಜೈದೇವ್​, ಶಕುಂತಲಾ ಕುತಂತ್ರ

ಅದೇ ಇನ್ನೊಂದೆಡೆ, ಜೈದೇವ್​ ಮತ್ತು ಶಕುಂತಲಾ ಗೌತಮ್​ ಫ್ಯಾಮಿಲಿಯನ್ನು ಬೀದಿಗೆ ತರುವ ಹುನ್ನಾರ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರಿಬ್ಬರೂ ಹೇಗೋ ತಪ್ಪಿಸಿಕೊಂಡಿದ್ದರು. ಅದರಲ್ಲಿಯೂ ಜೈದೇವ ದಿಯಾಳ ಕೊಲೆ ಮಾಡಿದ್ದು, ಇನ್ನೂ ಯಾರಿಗೂ ಗೊತ್ತಿಲ್ಲ.

47
ಜೈದೇವ್​ಗೆ ಮುಹೂರ್ತ ಫಿಕ್ಸ್​

ಇದೀಗ ಮಲ್ಲಿ ಇನ್ಸ್​ಪೆಕ್ಟರ್​ ಆಗಿರುವ ಹಿನ್ನೆಲೆಯಲ್ಲಿ, ಜೈದೇವ್​ಗೆ ಮುಹೂರ್ತ ಫಿಕ್ಸ್​ ಮಾಡೋದು ಗ್ಯಾರೆಂಟಿ. ದಿಯಾಳ ಕಣ್ಮರೆ ಕೇಸನ್ನು ತೆಗೆದುಕೊಂಡು ಜೈದೇವ್​ ನನ್ನು ಜೈಲಿಗೆ ತಳ್ಳುವಲ್ಲಿ ಎರಡು ಮಾತಿಲ್ಲ.

57
ಕೆಟ್ಟ ದಿನ ಶುರು

ಅದೇ ರೀತಿ, ಶಕುಂತಲಾ ಕುತಂತ್ರ ಕೂಡ ಬಯಲು ಮಾಡಿ ಆಕೆಗೂ ಮಗನ ಜೊತೆಗೇ ಜೈಲೂಟ ಹಾಕಿಸುತ್ತಾಳೆ. ಅಲ್ಲಿಗೆ ಜೈದೇವ್​ ಮತ್ತು ಶಕುಂತಲಾರ ಕೆಟ್ಟ ದಿನ ಶುರುವಾದಂತಿದೆ.

67
ಭೂಮಿಕಾ ಹೋರಾಟದ ಬದುಕು

ಇದು ಖುಷಿಯ ವಿಷಯವೇ ಆಗಿದ್ದರೂ, ಅದೇ ಇನ್ನೊಂದೆಡೆ, ಗೌತಮ್​ ಮತ್ತು ಭೂಮಿಕಾ ಹೋರಾಟ ಬದುಕು ನಡೆಸುತ್ತಿದ್ದಾರೆ. ವೈದ್ಯೆ ಉಳಿಯುವ ಭರವಸೆಯನ್ನೂ ನೀಡಿರುವ ಹಿನ್ನೆಲೆಯಲ್ಲಿ ಪತ್ನಿಯನ್ನು ಉಳಿಸಿಕೊಳ್ಳಲು ಗೌತಮ್​ ಸಾಹಸ ಮಾಡೇ ಮಾಡುತ್ತಾನೆ.

77
ಹ್ಯಾಪ್ಪಿ ಎಂಡಿಂಗ್​

ಕೊನೆಗೂ ಗೆಲುವು ಗೌತಮ್​ ಮತ್ತು ಭೂಮಿಕಾರದ್ದು ಆಗಿಯೇ ಆಗುತ್ತದೆ ಎನ್ನುವುದು ನಿಜನೇ. ಸೀರಿಯಲ್​ ಹ್ಯಾಪ್ಪಿ ಎಂಡಿಂಗ್​ ಆಗುತ್ತದೆ. ಆದರೆ, ಇದರ ನಡುವೆಯೇ ಕ್ಯಾನ್ಸರ್​ ರೋಗಿಗಳ ಬಾಳಿನಲ್ಲಿ ಆಶಾದಾಯಕ ಮಾತುಗಳನ್ನು ವೈದ್ಯರ ಬಾಯಿಯಿಂದ ಹೇಳಿಸಿ ಎನ್ನುವ ಕಮೆಂಟ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories