ದೆಹಲಿಯ ಜಂತರ್ ಮಂತರ್‌ನಿಂದ ಆರಂಭವಾದ ವಿದ್ಯಾರ್ಥಿ ಹೋರಾಟ ಮುಂಬೈಗೆ ತಲುಪಿದ್ದು, ಇದರಲ್ಲಿ ನಟಿ ಮತ್ತು ಮಾಡೆಲ್ ರಿಯಾ ಅಹಿರ್ ಭಾಗವಹಿಸಿದ್ದರು. ಪೊಲೀಸರು ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳನ್ನು ಬಿಡಿಸಲು ಮಳೆಯಲ್ಲಿಯೇ ಪೊಲೀಸ್ ವ್ಯಾನ್‌ಗೆ ಅಡ್ಡ ನಿಂತು ದಿಟ್ಟತನ ಮೆರೆದಿದ್ದರು.
ಜಂತರ್ ಮಂತರ್ ಹೋರಾಟದ ಕಾವು ಮುಂಬೈಗೆ: ಶಿವಾಜಿ ಪಾರ್ಕ್‌ನಲ್ಲಿ ಧರಣಿ
ದೆಹಲಿಯ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಆರಂಭಿಸಿದ್ದ ವಿದ್ಯಾರ್ಥಿ ಹೋರಾಟಕ್ಕೆ ಕೊನೆಗೂ ಅಭೂತಪೂರ್ವ ಯಶಸ್ಸು ಸಿಕ್ಕಿದೆ.ಶನಿವಾರದ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪೇಪರ್ ಲೀಕ್ ಪ್ರತಿಭಟನೆ ಬರೀ ದೆಹಲಿಗೆ ಸೀಮಿತವಾಗಿರಲಿಲ್ಲ. ಇದರ ಬಿಸಿ ಮುಂಬೈ, ಬೆಂಗಳೂರಿಗೂ ತಟ್ಟಿತ್ತು. ಸಿಜೆಪಿ ಹೋರಾಟದಲ್ಲಿ ನಟಿ ಹಾಗೂ ಮಾಡೆಲ್ ರಿಯಾ ಅಹಿರ್ ಪಾಲ್ಗೊಂಡು ತೀವ್ರ ಗಮನ ಸೆಳೆದಿದ್ದರು.
25
ಮಳೆಯಲ್ಲಿಯೇ ಪೊಲೀಸ್ ವ್ಯಾನ್ ತಡೆದು ವಿದ್ಯಾರ್ಥಿಗಳನ್ನು ಬಿಡಿಸಿದ ರಿಯಾ
ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಲೆಕ್ಕಿಸದ 27 ವರ್ಷದ ಮಾಡೆಲ್ ರಿಯಾ ಅಹಿರ್, ಪೊಲೀಸರು ವಶಕ್ಕೆ ಪಡೆದಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲು ನೇರವಾಗಿ ಪೊಲೀಸ್ ವ್ಯಾನ್ ಮುಂದೆಯೇ ಬಿಂದಾಸ್ ಆಗಿ ನಿಂತಿದ್ದರು. ಇವರ ಈ ದಿಟ್ಟ ನಿರ್ಧಾರಕ್ಕೆ ಪೊಲೀಸರು ವಶದಲ್ಲಿದ್ದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕಾಯಿತು. ಈ ಧೈರ್ಯದ ಸಾಹಸವನ್ನು ಕಂಡು ಸಾರ್ವಜನಿಕರು ಹಾಗೂ ನೆಟ್ಟಿಗರು ರಿಯಾ ಅವರ ಸಾಹಸವನ್ನು ವ್ಯಾಪಕವಾಗಿ ಶ್ಲಾಘಿಸಿದ್ದಾರೆ.
ಘಟನೆಯ ವೀಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ರಿಯಾ ಅಹಿರ್ ಅವರ ಮಾಡೆಲಿಂಗ್ ದಿನಗಳ ಗ್ಲಾಮರಸ್ ಹಾಗೂ ರಾಯಲ್ ಲುಕ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಆಗುತ್ತಿವೆ. ನೆಟ್ಟಿಗರು ಅವರ ಕಂಟೆಂಟ್ ಮತ್ತು ಗ್ಲಾಮರ್ ಲೈಕ್ ಮಾಡುತ್ತಿದ್ದಾರೆ. ರಿಯಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 2,29,000 (229k) ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ ಹಾಗೂ ಸ್ವತಃ 187 ಜನರನ್ನು ಫಾಲೋ ಮಾಡುತ್ತಿದ್ದಾರೆ.
"ಫೇಮಸ್ ಆಗಲು ಹೀಗೆ ಮಾಡಲಿಲ್ಲ": ವೈರಲ್ ವೀಡಿಯೋ ಬಗ್ಗೆ ನಟಿಯ ಸ್ಪಷ್ಟನೆ
ಈ ಘಟನೆಯ ಕುರಿತು ಸಂದರ್ಶನದಲ್ಲಿ ಮಾತನಾಡಿದ ರಿಯಾ, ನಾನು ಕೇವಲ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಅಲ್ಲಿ ನಿಂತಿದ್ದೆ ಅಷ್ಟೇ. ನನ್ನ ಈ ನಿರ್ಧಾರಕ್ಕೆ ತಂದೆ-ತಾಯಿ ಸಂಪೂರ್ಣ ಬೆಂಬಲ ನೀಡಿದ್ದರು. ಆದರೆ, ಈ ವೀಡಿಯೋ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೈರಲ್ ಆದಾಗ ನನಗೆ ತುಂಬಾ ಭಯವಾಗಿತ್ತು. ನನ್ನ ಫೋಟೋ ಅಥವಾ ವೀಡಿಯೋಗಳು ವೈರಲ್ ಆಗಬೇಕು ಎಂಬ ಯಾವುದೇ ಅಪೇಕ್ಷೆ ಅಥವಾ ಉದ್ದೇಶ ನನಗಿರಲಿಲ್ಲ ಎಂದಿದ್ದಾರೆ.
55
ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ಕಲಾವಿದೆ
ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಿಯಾ, ತಮ್ಮ ಗ್ಲಾಮರಸ್ ಫೋಟೋಗಳು ಮತ್ತು ವೀಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚಿನ ಪ್ರತಿಭಟನೆಯ ಘಟನೆಯ ನಂತರ ಅವರ ಸೋಶಿಯಲ್ ಮೀಡಿಯಾ ಖಾತೆಗೆ ಲೈಕ್ಸ್ ಹಾಗೂ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.