Amruthadhaare serial like Movie story: 'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ ತನ್ನ ಮಗ ಆಕಾಶ್‌ನನ್ನು ಭೂಮಿಕಾಗೆ ತಿಳಿಯದಂತೆ ರಹಸ್ಯವಾಗಿ ಭೇಟಿಯಾಗುತ್ತಿದ್ದಾನೆ. ಈ ಸತ್ಯ ಭೂಮಿಕಾಗೆ ತಿಳಿದಾಗ ಆಕೆಯ ಮುಂದಿನ ನಡೆ ಏನಾಗಿರಲಿದೆ ಎಂಬ ಕುತೂಹಲ ಮೂಡಿದೆ.
ಭೂಮಿಕಾಗೆ ಗೊತ್ತಿಲ್ಲದೇ ಗೌತಮ್ ದಿವಾನ್, ತನ್ನ ಮುದ್ದು ಮಗ ಆಕಾಶ್‌ನನ್ನು ಭೇಟಿಯಾಗುತ್ತಿದ್ದಾನೆ. ಹುಟ್ಟುಹಬ್ಬದ ದಿನದಂದು ಮಗನನ್ನು ಭೇಟಿಯಾಗಿ ಆತ ಕೇಳಿದ ಎಲ್ಲಾ ವಸ್ತುಗಳನ್ನು ಗೌತಮ್ ಕೊಡಿಸಿದ್ದಾನೆ. ಮನೆಯಲ್ಲಿ ತನ್ನ ಗೆಳೆಯನ ಪೋಷಕರು ಇದನ್ನೆಲ್ಲಾ ಕೊಡಿಸಿದ್ದಾರೆ ಎಂದು ಅಪ್ಪು ಸುಳ್ಳು ಹೇಳಿದ್ದಾನೆ.
25
ಮಗನನ್ನು ಭೇಟಿಯಾಗುತ್ತಿರುವ ಗೌತಮ್
ರಜಾ ದಿನವಾಗಿರುವ ಕಾರಣ ತಾಯಿಗೆ ತಿಳಿಯದೇ ಗೌತಮ್‌ನನ್ನು ಭೇಟಿಯಾಗಲು ಅಪ್ಪು ಹೊರಟಿದ್ದಾನೆ. ಮಲ್ಲಿ ಮುಂದೆ ತನ್ನ ಗೆಳೆಯ ನೋಡಲು ನನ್ನ ಹಾಗೆಯೇ ಇದ್ದಾನೆ. ನನ್ನದು ಚಿಕ್ಕ ಹೊಟ್ಟೆ, ಫ್ರೆಂಡ್ ಹೊಟ್ಟೆ ಸ್ವಲ್ಪ ದೊಡ್ಡದಿದೆ. ದೊಡ್ಡವನಾದ ಮೀಸೆ ಬಂದ್ಮೇಲೆ ನಾನು ಹಾಗೆ ಕಾಣುತ್ತೀನಿ ಎಂದು ಹೇಳಿದ್ದಾನೆ. ಇದನ್ನೆಲ್ಲಾ ಕೇಳಿದ ಮೇಲೆ ಅಪ್ಪು ಗೆಳೆಯ ಗೌತಮ್ ಅನ್ನೋದು ಖಾತ್ರಿಯಾಗಿದೆ.
35
ಜಾಮೂನು ಕಳುಹಿಸಿದ ಮಲ್ಲಿ
ತಂದೆಯನ್ನು ಭೇಟಿಯಾಗಲು ಹೋಗುತ್ತಿರುವ ಅಪ್ಪು ಕೈಯಲ್ಲಿ ಭೂಮಿಕಾ ಮಾಡಿರುವ ಗುಲಾಬ್ ಜಾಮೂನು ಕಳುಹಿಸಿದ್ದಾಳೆ. ಗೌತಮ್‌ಗೆ ಭೂಮಿಕಾ ಮಾಡಿರುವ ಗುಲಾಬ್ ಜಾಮೂನು ಅಂದ್ರೆ ಬಲು ಇಷ್ಟ. ಹಾಗಾಗಿ ಮಲ್ಲಿ ಸಿಹಿ ಕಳುಹಿಸಿದ್ದಾಳೆ. ಸಿಹಿ ನೋಡುತ್ತಿದ್ದಂತೆ ಗೌತಮ್ ಖುಷಿಯಿಂದ ಜಾಮೂನು ತಿಂದಿದ್ದಾನೆ. ಮಗ ಕೊಡುವ ಸ್ವೀಟ್ ತಿನ್ನುವ ಗೌತಮ್ ದೃಶ್ಯ ನೋಡಿದ ವೀಕ್ಷಕರಿಗೆ ಕನ್ನಡದ ಮೂರು ಸಿನಿಮಾಗಳು ಕಣ್ಮುಂದೆ ಬಂದಿವೆ.
1.ಸಾಹಸಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿರುವ 'ಸೂರ್ಯವಂಶ'ದಲ್ಲಿ ಅಜ್ಜ ಯಾರಿಗೂ ತಿಳಿಯದಂತೆ ಮೊಮ್ಮಗನನ್ನು ಭೇಟಿಯಾಗುತ್ತಾನೆ. ಅಲ್ಲಿ ಗಸಗಸೆ ಪಾಯಸ, ಇಲ್ಲಿ ಗುಲಾಬ್ ಜಾಮೂನ್.
2.ರವಿಚಂದ್ರನ್ ಮತ್ತು ಸುಧಾರಾಣಿ ನಟನೆಯ 'ಮನೆದೇವ್ರು' ಸಿನಿಮಾದಲ್ಲಿಯೂ ಇದೇ ರೀತಿಯ ದೃಶ್ಯಗಳಿವೆ. ಹೆಂಡ್ತಿ ಮತ್ತು ಮಗನಿಂದ ಹೀರೋ ದೂರವಾಗಿರುತ್ತಾರೆ. ಎದುರಿನ ಮನೆಯಲ್ಲಿದ್ರೂ ಮಗನಿಗೆ ತಂದೆ ಯಾರು ಎಂದು ಗೊತ್ತಿರಲ್ಲ. ಶಾಲೆಗೆ ಬರುವ ಮಗನನ್ನು ಹೀರೋ ಪತ್ನಿಗೆ ತಿಳಿಯದಂತೆ ಭೇಟಿಯಾಗುತ್ತಿರುತ್ತಾನೆ.
3.ಶಶಿಕುಮಾರ್ ಮತ್ತು ಶೃತಿ ಅಭಿನಯದ 'ಎದುರು ಮನೆಯಲ್ಲಿ ಗಂಡ, ಪಕ್ಕದ ಮನೆಯಲ್ಲಿ ಹೆಂಡತಿ' ಸಿನಿಮಾದಲ್ಲಿಯೂ ಇದೇ ರೀತಿಯ ಕಥೆಯನ್ನು ನೋಡಬಹುದು. ಇಲ್ಲಿ ಮಗನೇ ಬೇರೆಯಾಗಿರುವ ತಂದೆ-ತಾಯಿಯನ್ನು ಒಂದು ಮಾಡುತ್ತಾನೆ.
ಈ ಮೇಲಿನ ಮೂರು ಸಿನಿಮಾಗಳು ಪತ್ನಿ ಮತ್ತಯ ಮಗನನಿಂದ ಗಂಡ ದೂರವಾಗಿರುತ್ತಾನೆ. ಇದೀಗ ಇದೇ ಮಾದರಿಯ ಕಥೆಯನ್ನು ಅಮೃತಧಾರೆ ಒಳಗೊಂಡಿದೆ. ಒಂದು ವೇಳೆ ಗೌತಮ್ ಮಗನನ್ನು ಭೇಟಿಯಾಗುತ್ತಿರುವ ವಿಷಯ ತಿಳಿದ್ರೆ ಭೂಮಿಕಾ ಮುಂದೇನು ಮಾಡ್ತಾಳೆ ಅನ್ನೋದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.