ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಪೌರಾಣಿಕ ಧಾರಾವಾಹಿ ಶ್ರೀ ರೇಣುಕಾ ಯಲ್ಲಮ್ಮದಲ್ಲಿ ಇದೀಗ ಹೊಸ ಅಧ್ಯಾಯ ಆರಂಭವಾಗಿದ್ದು, ರೇಣುಕೆ ಮತ್ತು ಯಲ್ಲಮ್ಮನ ಪಾತ್ರಗಳು ಬದಲಾಗಿವೆ. ರೇಣುಕಾ ಪಾತ್ರದಲ್ಲಿ ಕನ್ನಡ ಮತ್ತು ತೆಲುಗು ಕಿರುತೆರೆಯ ಜನಪ್ರಿಯ ನಟಿ ವರ್ಷ ನಟಿಸುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಶ್ರೀ ರೇಣುಕಾ ಯಲ್ಲಮ್ಮ. ಈ ಪೌರಾಣಿಕ ಧಾರಾವಾಹಿ ಎರಡು ವರ್ಷಗಳಿಂದ ಪ್ರಸಾರವಾಗುತ್ತಿದ್ದು, ಕಥೆ ಹಾಗೂ ಪಾತ್ರದ ಮೂಲಕ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
27
ಹೊಸ ಆಧ್ಯಾಯ ಆರಂಭ
ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಇದೀಗ ಮೂರನೇ ಪರ್ವ ಆರಂಭವಾಗಿದೆ. ಅಂದರೆ ಧಾರಾವಾಹಿಯಲ್ಲಿ ಮೂರು ಬಾರಿ ಪಾತ್ರಧಾರಿಗಳು ಬದಲಾಗಿದ್ದಾರೆ. ಬಾಲ್ಯ, ಯೌವ್ವನ ಹಾಗೂ ಈಗ ವಯಸ್ಸಿನಲ್ಲಿ ಮತ್ತೊಮ್ಮೆ ಪಾತ್ರ ಬದಲಾವಣೆ ಮಾಡಲಾಗಿದೆ.
37
ರೇಣುಕಾ ಪಾತ್ರಕ್ಕೆ ಭಾವ ಪೂರ್ಣ ವಿದಾಯ ಹೇಳಿದ ಮಹತಿ
ಕಳೆದ ಒಂದೂವರೆ ವರ್ಷದಿಂದ ರೇಣುಕಾ ಪಾತ್ರಕ್ಕೆ ನಟಿ ಮಹತಿ ವೈಷ್ಣವಿ ಜೀವ ತುಂಬಿದ್ದರು. ಮಹಾರಾಣಿಯಾಗಿ ಮೆರೆದು, ಜಮದಗ್ನಿಯನ್ನು ಪ್ರೀತಿಸಿ ಮದುವೆಯಾಗುವುದರಿಂದ ಹಿಡಿದು, ಗರ್ಭಿಣಿಯಾಗುವಲ್ಲಿಯವರೆಗೂ ಯೌವ್ವನ ರೇಣುಕೆ ಪಾತ್ರದಲ್ಲಿ ಮಹತಿ ನಟಿಸಿದ್ದರು.
ಇದೀಗ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಹೊಸ ರೇಣುಕೆಯಾಗಿ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ವರ್ಷಾ ಎಚ್.ಕೆ ನಟಿಸುತ್ತಿದ್ದಾರೆ. ಈಗಾಗಲೇ ಇವರು ನಟಿಸಿರುವ ಪ್ರೊಮೋ ಪ್ರಸಾರವಾಗಿದೆ.
57
ಯಾರು ಈ ವರ್ಷ ಎಚ್ ಕೆ?
ಈಕೆ ಕನ್ನಡತಿ, ಕನ್ನಡದ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಾಗಮಂಡಲ’, ಉದಯ ಟಿವಿಯ ‘ಕಸ್ತೂರಿನಿವಾಸ’ದ ಮೊದಲ ನಾಯಕಿ, ಹಾಗೂಕಲರ್ಸ್ ಸೂಪರ್ ನ ‘ರಾಜಾರಾಣಿ’ ಧಾರವಾಹಿಯಲ್ಲಿ ವರ್ಷ ನಟಿಸಿದ್ದರು. ತೆಲುಗಿನಲ್ಲೂ ಈಕೆ ಫೇಮಸ್.
67
ತೆಲುಗು ಕಿರುತೆರೆಯ ಸ್ಟಾರ್ ನಟಿ
ನಂತರ ತೆಲುಗು ಕಿರುತೆರೆಯಲ್ಲಿ ಜೀ ತೆಲುಗು ವಾಹಿನಿಯ ‘ಪ್ರೇಮ ಎಂಥಾ ಮಧುರo’ ಧಾರವಾಹಿಯ ಮೂಲಕ ಅತ್ಯಂತ ಜನಪ್ರಿಯತೆ ಗಳಿಸಿದ್ದರು. ಈಗ ವರ್ಷಗಳ ಬಳಿಕ ‘ಶ್ರೀ ರೇಣುಕಾ ಯಲ್ಲಮ್ಮ’ ಧಾರವಾಹಿಯ ರೇಣುಕೆಯಾಗಿ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ!
77
ಐದು ವರ್ಷಗಳಿಂದ ತೆಲುಗಿನಲ್ಲಿ ಬ್ಯುಸಿ
ವರ್ಷ ಎಚ್.ಕೆ. ಕಳೆದ ಐದು ವರ್ಷಗಳಿಗಿಂತ ಹೆಚ್ಚು ಕಾಲ್ ತೆಲುಗು ಕಿರುತೆರೆಯಲ್ಲಿ ನಟಿಸಿದ್ದು, ಬೆಸ್ಟ್ ಜೋಡಿ ಅವಾರ್ಡ್ ಕೂಡ ಪಡೆದಿದ್ದಾರೆ. ಅಂದ ಹಾಗೇ ಈ ನಟಿಗೆ ಈಗಾಗಲೆ ಮದುವೆಯಾಗಿದ್ದು, ಕಳೆದ ವರ್ಷ ಕೌಶಿಕ್ ರೆಡ್ಡಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ಜಮದಗ್ನಿಯ ಪತ್ನಿ ರೇಣುಕೆಯಾಗಿ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಮಾಡಿದ್ದಾರೆ.