Amruthadhaareಯಲ್ಲಿ ಫಾರಿನ್​ ಟೂರ್​ ಹೋದ ಗೌತಮ್​, ಹೆದ್ದಾರಿ 66 ನಲ್ಲಿ ಪ್ರತ್ಯಕ್ಷ- ಏನಿದು ಹೊಸ ವೇಷ

Published : Aug 27, 2026, 10:48 PM IST

ಅಮೃತಧಾರೆ ಸೀರಿಯಲ್​ನಲ್ಲಿ ಜೈದೇವನ ವಿಚಾರಣೆ ನಡೆಯುತ್ತಿದ್ದು, ಗೌತಮ್ ವಿದೇಶಕ್ಕೆ ಹೋಗಿದ್ದಾನೆ ಎಂದು ತೋರಿಸಲಾಗಿದೆ. ಆದರೆ, ಗೌತಮ್ ಪಾತ್ರಧಾರಿ ರಾಜೇಶ್ ನಟರಂಗ ಅವರು 20 ವರ್ಷಗಳ ನಂತರ 'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ರಂಗಭೂಮಿಗೆ ಮರಳುತ್ತಿದ್ದು, ಇದಕ್ಕಾಗಿ ಧಾರಾವಾಹಿಯಿಂದ ಬಿಡುವು ಪಡೆದಿದ್ದಾರೆ.

PREV
16
ಜೈದೇವನ ಬೇಟೆ

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಜೈದೇವನ ಬೇಟೆ ನಡೆದಿದೆ. ಆತನ ಬಾಯಿಯಿಂದ ನಾಪತ್ತೆಯಾಗಿರುವ ದಿಯಾ ಮತ್ತು ಅನು ಬಗ್ಗೆ ತಿಳಿದುಕೊಳ್ಳುವ ಹಿನ್ನೆಲೆಯಲ್ಲಿ, ಮಲ್ಲಿ ಮತ್ತು ಭೂಮಿಕಾ, ಪೊಲೀಸ್​ ಮಧುರಾಳನ್ನು ಬಿಟ್ಟಿದ್ದಾರೆ.

26
ಅನಾಹುತವೇನು?

ಸದ್ಯ ಮಧುರಾ, ಜೈದೇವನ ಬಾಯಿಯಿಂದ ಸತ್ಯ ಹೊರಕ್ಕೆ ಹಾಕುವಲ್ಲಿ ಯಶಸ್ವಿಯಾಗಿದ್ದರೂ, ಮುಂದೆ ಏನೋ ಅನಾಹುತ ಕಾದಿದ್ಯಾ ಎನ್ನುವ ಅನುಮಾನ ಕೂಡ ಕಾಡುತ್ತಿದೆ.

36
ಫಾರಿನ್​ಗೆ ಹೋದ ಗೌತಮ್​

ಇದರ ನಡುವೆಯೇ, ಗೌತಮ್​ನನ್ನು ಫಾರಿನ್​ಗೆ ಕಳುಹಿಸಲಾಗಿದೆ. ಬೇಗ ಬರುತ್ತೇನೆ ಎಂದು ಹೋದವ ಇನ್ನೂ ಪತ್ತೆಯಿಲ್ಲ. ಆದರೆ, ಗೌತಮ್​ ಮಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಣಿಸಿಕೊಂಡಿದ್ದು, ಅದರ ಪೋಸ್ಟ್​ ವೈರಲ್​ ಆಗುತ್ತಿದೆ.

46
ಪೋಸ್ಟ್​ ಶೇರ್​

ಅಂದಹಾಗೆ, ಗೌತಮ್​ ಪಾತ್ರಧಾರಿ ರಾಜೇಶ್​ ನಟರಂಗ (Rajesh Nataranga) ಅವರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಬರ್ಮೂಡಾದಲ್ಲಿ ಕಾಣಿಸಿಕೊಂಡಿದ್ದು, NH 66 Mangalore to Mumbai via Goa ಎಂದು ಬೋರ್ಡ್​ನಲ್ಲಿ ಬರೆಯಲಾಗಿದೆ.

56
20 ವರ್ಷಗಳ ಬಳಿಕ

ಇದೇನಿದು ಹೊಸ ವೇಷ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರೆ, ಹೊಸ ಸಿನಿಮಾನಾ, ಏನಿದು, ಇದಕ್ಕೇನಾ ಅಮೃತಧಾರೆಯಲ್ಲಿ ಫಾರಿನ್​ಗೆ ಹೋಗಿರೋದು ಎಂದು ಪ್ರಶ್ನಿಸುತ್ತಿದ್ದಾರೆ. ಇದೇನೆಂದು ರಾಜೇಶ್​ ಅವರೇ ಖುದ್ದು ಮಾಹಿತಿ ನೀಡಬೇಕಿದೆ. ಈ ಪ್ರದರ್ಶನವು ಸೆಪ್ಟೆಂಬರ್ 17 ರಂದು ಸಂಜೆ 7:30ಕ್ಕೆ ಬೆಂಗಳೂರಿನ ಪ್ರಸಿದ್ಧ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ. ಇದರ ತಯಾರಿಗೆ ಸೀರಿಯಲ್​ನಲ್ಲಿ ಫಾರಿನ್​ಗೆ ಕಳುಹಿಸಿರುವ ಸಾಧ್ಯತೆ ಇದೆ.

66
ʻಮಳೆ ನಿಲ್ಲುವವರೆಗೆʼ ನಾಟಕ

ಇದರ ನಡುವೆಯೇ, 20 ವರ್ಷಗಳ ಬಳಿಕ ರಾಜೇಶ್​ ಅವರು ರಂಗಭೂಮಿಗೆ ಮತ್ತೆ ಮರಳುತ್ತಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನ ಅನ್ವೇಷಿಸುವ ತುಡಿತದೊಂದಿಗೆ ಜೀವ ಪಡೆದಿರುವ ಸಂಸ್ಥೆ ʻಕಲಾದ್ಯುತಿ ಪ್ರೊಡಕ್ಷನ್ಸ್ʼ ವತಿಯಿಂದ ನಡೆಯಲಿರುವ ʻಮಳೆ ನಿಲ್ಲುವವರೆಗೆʼ ನಾಟಕದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories