Bigg Boss Kannada: ಬಿಗ್‌ಬಾಸ್‌ಗಾಗಿ ಕೆಲಸವನ್ನೇ ಬಿಟ್ಟ ಸ್ಪರ್ಧಿ, ಬಾಸ್‌ಗೆ ಕರೆ ಮಾಡಿ ರಾಜೀನಾಮೆ ಘೋಷಿಸಿದ ಯುವತಿ

Published : Aug 27, 2026, 05:21 PM IST

ಬಿಗ್‌ಬಾಸ್‌ ಅಗ್ನಿಪರೀಕ್ಷೆ ಭರ್ಜರಿ ಸದ್ದು ಮಾಡುತ್ತಿದೆ. ಬಿಗ್‌ಬಾಸ್‌ ಮನೆ ಪ್ರವೇಶಿಸಲು ಉತ್ಸುಕರಾಗಿರುವ ಸ್ಪರ್ಧಿಗಳಿಗೆ ಧೈರ್ಯ, ಸಾಮರ್ಥ್ಯ ಹಾಗೂ ಮಾನಸಿಕ ಸ್ಥೈರ್ಯ ಪರೀಕ್ಷಿಸುವ ಹಲವು ಸವಾಲುಗಳನ್ನು ನೀಡಲಾಗುತ್ತಿದೆ. ಇದೇ ವೇಳೆ ಓರ್ವ ಸ್ಪರ್ಧಿ ಮಾಡಿದ ದಿಟ್ಟ ನಿರ್ಧಾರ ಇದೀಗ ಎಲ್ಲರ ಗಮನ ಸೆಳೆದಿದೆ.

PREV
14
ಬಿಗ್‌ಬಾಸ್‌ ಕನ್ನಡ ಸೀಸನ್‌ 13

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 13 ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಪ್ರೋಮೋ ಮೂಲಕ ಶೋ ಆರಂಭದ ದಿನಾಂಕವನ್ನು ಘೋಷಿಸಿದ್ದು, ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್‌ ಕನ್ನಡ 13 ಗ್ರ್ಯಾಂಡ್‌ ಆಗಿ ಆರಂಭವಾಗಲಿದೆ. ಇದರ ಬೆನ್ನಲ್ಲೇ ಬಿಗ್‌ಬಾಸ್‌ ಅಗ್ನಿಪರೀಕ್ಷೆ ಕೂಡ ಭರ್ಜರಿ ಸದ್ದು ಮಾಡುತ್ತಿದೆ. ಮುಖ್ಯ ಸೀಸನ್‌ ಆರಂಭಕ್ಕೂ ಮುನ್ನ ನಡೆಯುತ್ತಿರುವ ಬಿಗ್‌ಬಾಸ್‌ ಅಗ್ನಿಪರೀಕ್ಷೆ ಯಲ್ಲಿ ಬಿಗ್‌ಬಾಸ್‌ ಮನೆ ಪ್ರವೇಶಿಸಲು ಉತ್ಸುಕರಾಗಿರುವ ಸ್ಪರ್ಧಿಗಳಿಗೆ ಧೈರ್ಯ, ಸಾಮರ್ಥ್ಯ ಹಾಗೂ ಮಾನಸಿಕ ಸ್ಥೈರ್ಯ ಪರೀಕ್ಷಿಸುವ ಹಲವು ಸವಾಲುಗಳನ್ನು ನೀಡಲಾಗುತ್ತಿದೆ. ಒಟ್ಟು 60 ಶಾರ್ಟ್‌ಲಿಸ್ಟ್‌ ಆಗಿರುವ ಸ್ಪರ್ಧಿಗಳು ಈ ಆಯ್ಕೆ ಸುತ್ತಿನಲ್ಲಿ ವಿಭಿನ್ನ ಟಾಸ್ಕ್‌ಗಳನ್ನು ಎದುರಿಸುತ್ತಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ, ಶ್ರುತಿ, ವಿನಯ್ ಗೌಡ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಸೇರಿದಂತೆ ತೀರ್ಪುಗಾರರು ಸ್ಪರ್ಧಿಗಳ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದಾರೆ. ಇದೇ ವೇಳೆ ಓರ್ವ ಸ್ಪರ್ಧಿ ಮಾಡಿದ ದಿಟ್ಟ ನಿರ್ಧಾರ ಇದೀಗ ಎಲ್ಲರ ಗಮನ ಸೆಳೆದಿದೆ.

24
ಬಿಗ್‌ಬಾಸ್‌ಗಾಗಿ ಕೆಲಸಕ್ಕೆ ಗುಡ್‌ಬೈ

ಅಗ್ನಿಪರೀಕ್ಷೆಯ ಒಂದು ಸಂಚಿಕೆಯಲ್ಲಿ ನಿರಂಜನ್ ದೇಶಪಾಂಡೆ ಅವರು ಸ್ಪರ್ಧಿಗೆ ಧೈರ್ಯಶಾಲಿ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ ಎಂದು ಕೇಳಿದ್ದಾರೆ. ಬಳಿಕ, “ಈಗಲೇ ನಿಮ್ಮ ಬಾಸ್‌ಗೆ ಕರೆ ಮಾಡಿ, ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳುವ ಧೈರ್ಯ ನಿಮಗಿದೆಯೇ?” ಎಂದು ಸವಾಲು ಹಾಕಿದ್ದಾರೆ. ಈ ಸವಾಲನ್ನು ಕೇಳಿ ಹಿಂದೆ ಸರಿಯದ ಸ್ಪರ್ಧಿ, ತಾನು ಟಾಸ್ಕ್‌ ಮಾಡಲು ಸಿದ್ಧ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ನಂತರ ಅಲ್ಲಿಂದಲೇ ತಮ್ಮ ಬಾಸ್‌ಗೆ ಕರೆ ಮಾಡಿ, ಕರೆಯನ್ನು ಸ್ಪೀಕರ್‌ಫೋನ್‌ನಲ್ಲಿ ಹಾಕಿದ್ದಾರೆ. ಬಾಸ್‌ ಕರೆ ಸ್ವೀಕರಿಸುತ್ತಿದ್ದಂತೆ, “ನಾನು ನಾಳೆಯಿಂದ ಕಚೇರಿಗೆ ಬರುವುದಿಲ್ಲ. ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ. ಸ್ಪರ್ಧಿಯ ಈ ದಿಟ್ಟ ನಡೆ ನೋಡಿ ಅಲ್ಲಿದ್ದ ತೀರ್ಪುಗಾರರೇ ಅಚ್ಚರಿಗೊಳಗಾಗಿದ್ದಾರೆ.

ಬಿಗ್‌ಬಾಸ್‌ ಮನೆ ಪ್ರವೇಶಿಸುವ ಅವಕಾಶಕ್ಕಾಗಿ ಕೆಲಸವನ್ನೇ ತ್ಯಜಿಸಲು ಸಿದ್ಧವಾದ ಈ ನಿರ್ಧಾರ ಇದೀಗ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ಯಲ್ಲಿ ಚರ್ಚೆಯ ವಿಷಯವಾಗಿದೆ. ಟಾಸ್ಕ್‌ಗಾಗಿ ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸ್ಪರ್ಧಿಯ ಧೈರ್ಯಕ್ಕೆ ವೀಕ್ಷಕರಿಂದಲೂ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

34
19 ಸ್ಪರ್ಧಿಗಳಲ್ಲಿ ಮೂವರಿಗೆ ಮಾತ್ರ ಬಿಗ್‌ಬಾಸ್‌ ಮನೆಗೆ ಎಂಟ್ರಿ

ಇನ್ನು ಈ ಬಾರಿ ಬಿಗ್‌ಬಾಸ್‌ ಅಗ್ನಿಪರೀಕ್ಷೆಯ ಆಯ್ಕೆ ಪ್ರಕ್ರಿಯೆ ಮತ್ತಷ್ಟು ಕುತೂಹಲ ಮೂಡಿಸಿದೆ. 19 ಸ್ಪರ್ಧಿಗಳಲ್ಲಿ ಕೇವಲ ಮೂವರಿಗೆ ಮಾತ್ರ ಬಿಗ್‌ಬಾಸ್‌ ಕನ್ನಡ 13ರ ಮನೆಗೆ ಪ್ರವೇಶಿಸುವ ಅವಕಾಶ ಸಿಗಲಿದೆ. ಯಾರು ಮನೆಗೆ ಹೋಗಬೇಕು ಎಂಬ ನಿರ್ಧಾರವನ್ನು ವೀಕ್ಷಕರೇ ಮಾಡಲಿದ್ದಾರೆ. ಈಗಾಗಲೇ ಕಲರ್ಸ್‌ ಕನ್ನಡ ಹಾಗೂ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್‌ ಅಗ್ನಿಪರೀಕ್ಷೆ ಪ್ರಸಾರವಾಗುತ್ತಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ವೋಟಿಂಗ್‌ ಕೂಡ ಆರಂಭವಾಗಿದ್ದು, ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ಮತ ಚಲಾಯಿಸಬಹುದು. ಒಬ್ಬ ವೀಕ್ಷಕರಿಗೆ ಒಂದು ಮತ ಹಾಕುವ ಅವಕಾಶವಿದೆ. ಅತಿ ಹೆಚ್ಚು ಮತಗಳನ್ನು ಪಡೆಯುವ ಮೂವರು ಸ್ಪರ್ಧಿಗಳು ಬಿಗ್‌ಬಾಸ್‌ ಮನೆ ಪ್ರವೇಶಿಸಲಿದ್ದಾರೆ.

44
ಬಿಗ್‌ಬಾಸ್‌ ಕನ್ನಡ 13 ಯಾವಾಗ, ಎಷ್ಟು ಗಂಟೆಗೆ?

ಕಿಚ್ಚ ಸುದೀಪ್ ಸಾರಥ್ಯದ ಬಿಗ್‌ಬಾಸ್‌ ಕನ್ನಡ ಸೀಸನ್‌ 13 ಸೆಪ್ಟೆಂಬರ್‌ 6ರಿಂದ ಆರಂಭವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಬಿಗ್‌ಬಾಸ್‌ ಪ್ರಸಾರವಾಗಲಿದೆ. ಹೀಗಾಗಿ ಈ ಬಾರಿ ಬಿಗ್‌ಬಾಸ್‌ ಮನೆಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಅದರಲ್ಲೂ ಕೆಲಸವನ್ನೇ ಪಣಕ್ಕಿಟ್ಟು ಬಿಗ್‌ಬಾಸ್‌ ಅವಕಾಶಕ್ಕಾಗಿ ಮುನ್ನುಗ್ಗಿದ ಈ ಸ್ಪರ್ಧಿಗೆ ಅಂತಿಮವಾಗಿ ಮನೆ ಪ್ರವೇಶ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories