ನಂದಗೋಕುಲ: ಮೀನಾಳ 'ಆಪರೇಶನ್ ಮಂಚ' ವಿಫಲ, ದೆವ್ವದಂತೆ ಕಾಡಿದರೂ ಒಂದಾಗದ ಅಮೂಲ್ಯ-ವಲ್ಲಭ!

Published : Aug 27, 2026, 03:22 PM IST

ನಂದಗೋಕುಲ ಧಾರಾವಾಹಿಯಲ್ಲಿ, ಅಮೂಲ್ಯ ಮತ್ತು ವಲ್ಲಭರನ್ನು ಒಂದು ಮಾಡಲು ಮೀನಾ 'ಆಪರೇಶನ್ ಮಂಚ' ಯೋಜನೆ ರೂಪಿಸುತ್ತಾಳೆ. ದೆವ್ವದಂತೆ ಗೆಜ್ಜೆ ಶಬ್ದ ಮಾಡಿ ಅಮೂಲ್ಯಳನ್ನು ಭಯಪಡಿಸಿ ವಲ್ಲಭನ ಬಳಿ ಮಲಗುವಂತೆ ಮಾಡುವುದು ಅವಳ ಪ್ಲ್ಯಾನ್ ಆಗಿರುತ್ತದೆ, ಆದರೆ ವಲ್ಲಭನ ಉಪಾಯದಿಂದ ಮೀನಾಳ ಈ ಯೋಜನೆ ವಿಫಲಗೊಳ್ಳುತ್ತದೆ.

PREV
17

ನಂದಗೋಕುಲ ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ವಲ್ಲಭನನ್ನು ಒಂದು ಮಾಡುವುದಕ್ಕೆ ಮೀನಾ ಹರಸಾಹಸ ಮಾಡುತ್ತಿದ್ದಾಳೆ. ಆದರೆ, ಇಬ್ಬರನ್ನು ಒಂದು ಮಾಡುವುದಕ್ಕೆ ಹಲವು ಬಾರಿ ಅಮೂಲ್ಯಾಗೆ ಕೊಡುವ ಎಲ್ಲ ಐಡಿಯಾಗಳು ಫ್ಲಾಪ್ ಆಗಿವೆ. ಆದರೂ ಪ್ರಯತ್ನ ಬಿಡದ ಅಮೂಲ್ಯ ಈಗಾ ತಾನೇ ಸ್ವತಃ ಗಂಡ ಕೇಶವನೊಂದಿಗೆ ಸೇರಿಕೊಂಡು ಹೊಸ ಪ್ಲ್ಯಾನ್ ಮಾಡಿದ್ದಾಳೆ.

27

ಈ ಹೊಸ ಪ್ಲ್ಯಾನ್‌ನಂತೆ ಗಂಡ ಕೇಶವನಿಗೆ ಅಮೂಲ್ಯ ಹಾಗೂ ವಲ್ಲಭ ಇಬ್ಬರೂ ಜಗಳ ಮಾಡಿಕೊಂಡು ಬೇರೆ ಬೇರೆ ಮಲಗುತ್ತಿದ್ದಾರೆ. ವಲ್ಲಭ ಮಂಚದ ಮೇಲೆ ಮಲಗಿದರೆ, ಅಮೂಲ್ಯ ಚಾಪೆ ಹಾಸಿಕೊಂಡು ನೆಲದ ಮೇಲೆ ಮಲಗುತ್ತಿದ್ದಾಳೆ. ಇದು ತಪ್ಪಲ್ಲವೇ, ಇಬ್ಬರೂ ಗಂಡ-ಹೆಂಡತಿ ಅಂದಮೇಲೆ ಒಟ್ಟಿಗೆ ಮಲಗಬೇಕು ಅಲ್ವಾ ಎಂದು ಕೇಶವನ ತಲೆಗೆ ತುಂಬುತ್ತಾಳೆ. ಇದಕ್ಕೆ ತಲೆಯಾಡಿಸುವ ಕೇಶವ ಇಬ್ಬರನ್ನೂ ಒಂದು ಮಾಡಲು ಏನು ಮಾಡಬೇಕು ಎಂದು ಕೇಳುತ್ತಾನೆ.

37

ಆಗ ಐಡಿಯಾ ಕೊಡುವ ಮೀನಾ, ಕೇಶವನೊಂದಿಗೆ ಮನೆಯ ಹಿಂಭಾಗಕ್ಕೆ ಹೋಗಿ ಅಮೂಲ್ಯ-ವಲ್ಲಭ ಮಲಗಿರುವ ಕೋಣೆಯ ಪಕ್ಕದಲ್ಲಿ ನಿಂತು ಗೆಜ್ಜೆ ಶಬ್ದಗಳನ್ನು ಮಾಡುತ್ತಾ, ವೂವ್‌..., ಎಂದು ಕೂಗುತ್ತಾಳೆ. ದೆವ್ವ ಬಂದಿದೆ ಎಂಬಂತೆ ಶಬ್ದವನ್ನು ಮಾಡುತ್ತಾ ಅಮೂಲ್ಯಳನ್ನು ಭಯಪಡಿಸಿ ವಲ್ಲಭನ ಪಕ್ಕದಲ್ಲಿ ಮಂಚದ ಮೇಲೆ ತಬ್ಬಿಕೊಂಡು ಮಲಗುವಂತೆ ಮಾಡುತ್ತಾರೆ.

47

ಆದರೆ, ಇವರಿಬ್ಬರ ಮಂಚದ ಮೇಲೆ ಒಟ್ಟಿಗೆ ಸೇರಿಸುವ ಪ್ಲ್ಯಾನ್ ಸಕ್ಸಸ್ ಸಂಭ್ರಮ ಮಾಡುವ ಮುನ್ನವೇ ಕಮರಿ ಹೋಗುತ್ತದೆ. ಕಾರಣ, ಅಮೂಲ್ಯ ವಲ್ಲಭನನ್ನು ತಬ್ಬಿಕೊಂಡು ಮಲಗುತ್ತಿದ್ದಂತೆ ಎಚ್ಚರಗೊಳ್ಳುತ್ತಾನೆ. ನಂತರ, ಅಮೂಲ್ಯಳನ್ನು ಎಬ್ಬಿಸಿ ಈ ನಾಗವಲ್ಲಿ ಚಂದ್ರಮುಖಿ ಮೋಹಿನಿ ಭೂತ ಪ್ರೇತ ಪಿಶಾಚಿ ಅವೆಲ್ಲ ನಿನ್ನ ಫ್ರೆಂಡ್ಸ್ ತಾನೆ, ನೀನೇಕೆ ಹೆದರಿಕೊಳ್ಳುತ್ತೀಯ ಎಂದು ರೇಗಿಸುತ್ತಾನೆ.

57

ಇದಕ್ಕೆ ಕೋಪಗೊಳ್ಳುವ ಅಮೂಲ್ಯ, ಏ ಕಾಡುಪಾಪ ಹಿಂಗೆಲ್ಲ ಮಾತಾಡೋದು ಸರಿ ಇರಲ್ಲ ನೋಡು.., ಎಂದು ಹೇಳುತ್ತಾಳೆ. ಆಗ ಕೇಶವ ಆಯ್ತು ಆಯ್ತು ಆಯ್ತು ಸಮಾಧಾನ ಇರು, ಇದು ಯಾಕೋ ಸಮಾಧಾನ ಮಾಡುತ್ತಾನೆ. ಆಗಲೂ ಗೆಜ್ಜೆ ಶಬ್ದಗಳನ್ನು ಕೇಳುತ್ತಿದ್ದ ಅಮೂಲ್ಯ ಭಯಪಡುತ್ತಿದ್ದಾಗ ಇದಕ್ಕೊಂದು ಪರಿಹಾರ ನನ್ನಬಳಿ ಇದೆ ಎಂದು ವಲ್ಲಭ ಹೇಳುತ್ತಾನೆ.

67

ಆಗ ವಲ್ಲಭ ಇವಾಗ ಇರೋದು ಇದೊಂದೇ ಸೊಲ್ಯೂಷನ್, ಇದನ್ನ (ಕೈಯಲ್ಲಿ ಹತ್ತಿಯನ್ನು ಹಿಡಿದು) ಕಿವಿಗೆ ಹಾಕೊಂಡು ಮಲ್ಕೊಂಡುಬಿಟ್ರೆ ಫುಲ್ ಸೌಂಡ್ ಪ್ರೂಫ್ ಆಗಿ ಹೋಗುತ್ತೆ ಏನು ಕೇಳಲ್ಲ ನೋಡು ಎಂದು ಐಡಿಯಾ ಕೊಡುತ್ತಾನೆ. ಆಗ ಅಮೂಲ್ಯ ಕೂಡ ಹತ್ತಿಯನ್ನು ಕಿವಿಯಲ್ಲಿ ಇಟ್ಟುಕೊಂಡು ಪುನಃ ನೆಲದಲ್ಲಿ ಹಾಸಿದ್ದ ಚಾಪೆಯ ಮೇಲೆ ಮಲಗುತ್ತಾಳೆ.

77

ಇದರಿಂದ ಮೀನಾಳ 'ಆಪರೇಶನ್ ಮಂಚ' ಫ್ಲಾಪ್ ಆಗಿದ್ದಕ್ಕೆ ಬೇಸರಗೊಂಡು, 'ಏ ಕೇಶವ ಇಲ್ಲಿ ನಾವು ಇಷ್ಟೊಂದು ಸರ್ಕಸ್ ಮಾಡ್ತಾ ಇದೀವಿ ಇವರು ನೋಡಿದ್ರೆ ಇವರ ಪಾಡಿಗೆ ಹೋಗಿ ಮಲ್ಕೊಂಡಿದ್ದಾರಲ್ವೋ ಎಂದು ಹೇಳುತ್ತಾಳೆ. ಮುಂದೆ ಏನಾಗುತ್ತದೆ ಎಂಬುದನ್ನು ರಾತ್ರಿಯ ಎಪಿಸೋಡ್‌ಗಳನ್ನು ನಿರೀಕ್ಷಿಸಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories