ಅಮೃತಧಾರೆ ಸೀರಿಯಲ್ನಲ್ಲಿ ಜೈದೇವ್, ಗೌತಮ್-ಭೂಮಿಕಾ ಮಗಳು ಮಿಂಚುವನ್ನು ಅಪಹರಿಸಿದ್ದಾನೆ. ಇದೇ ವೇಳೆ, ನಕಲಿ ದಂಪತಿಗಳು ಗೌತಮ್ನನ್ನು ಅರೆಸ್ಟ್ ಮಾಡಿಸಿದ್ದು, ಮಗಳ ಜಾಡು ಹಿಡಿದು ಹೋದ ಭೂಮಿಕಾ ರೌಡಿಗಳ ವಿರುದ್ಧ ಹೋರಾಡಿದ್ದಾಳೆ.
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ರೋಚಕ ಟ್ವಿಸ್ಟ್ ಸಿಕ್ಕಿದೆ. ಮಿಂಚುವನ್ನು ಇನ್ನೇನು ಮಹಿಮಾಗೆ ದತ್ತುಕೊಡಲು ಮುಂದಾದ ಸಮಯದಲ್ಲಿಯೇ, ಮಿಂಚು ಗೌತಮ್ ಮತ್ತು ಭೂಮಿಕಾ ಮಗಳು ಎಂದು ತಿಳಿದಿರುವ ಜೈದೇವ್ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ.
26
ಗೌತಮ್ ಅರೆಸ್ಟ್
ಇತ್ತ ಮಿಂಚುವಿನ ಅಪ್ಪ-ಅಮ್ಮ ತಾವೇ ಎಂದು ಹೇಳಿಕೊಂಡು ದಂಪತಿ ಬಂದಿದ್ದಾರೆ. ಬರುವಾಗ ಪೊಲೀಸರನ್ನು ಕರೆದುಕೊಂಡು ಬಂದಿದ್ದಾರೆ. ಮಿಂಚುವನ್ನು ಬೇಕೆಂದೇ ತಮ್ಮಿಂದ ಮುಚ್ಚಿಡುವುದಾಗಿ ಆರೋಪಿಸಿದ ಕಾರಣ, ಪೊಲೀಸರು ಗೌತಮ್ನನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ.
36
ಜಾಡು ಹಿಡಿದು ಹೋದ ಭೂಮಿಕಾ
ಇತ್ತ ಭೂಮಿಕಾ, ರೌಡಿಗಳಿಗೆ ಹಣ ಕೊಟ್ಟು ಮಿಂಚುವನ್ನು ಕಿಡ್ನ್ಯಾಪ್ ಮಾಡಿದವರ ಜಾಡು ಹಿಡಿದು ಹೋದಳು. ಮಿಂಚುವನ್ನು ಜೈದೇವ್ ಅಪಹರಿಸಿ ಇಟ್ಟ ಜಾಗಕ್ಕೆ ಹೋಗುವಷ್ಟರಲ್ಲಿಯೇ ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗಿತ್ತು.
ಮಿಂಚುವಿನ ಗೊಂಬೆ ನೋಡಿದ ಭೂಮಿಕಾಗೆ ಮಿಂಚು ಅಲ್ಲಿರುವುದು ಕನ್ಫರ್ಮ್ ಆಯಿತು. ಅಷ್ಟರಲ್ಲಿಯೇ ರೌಡಿಗಳು ಆಕೆಯ ಮೇಲೆ ಅಟ್ಯಾಕ್ ಮಾಡಿದ್ರು.
56
ಭದ್ರಕಾಳಿಯಾದ ಭೂಮಿಕಾ
ಆಗ ಭದ್ರಕಾಳಿಯಾದಳು ಭೂಮಿಕಾ. ರೌಡಿಗಳನ್ನು ಎತ್ತಿ ಎತ್ತಿ ಒಗೆದಿದ್ದಾಳೆ. ಆದರೆ ಅಷ್ಟರಲ್ಲಿಯೇ ಮಿಂಚುವನ್ನು ಅಲ್ಲಿಂದ ರೌಡಿಗಳು ದೂರ ಕರೆದುಕೊಂಡು ಹೋಗಲಾಗಿದೆ.
66
ಮುಂದೇನು?
ಇದರ ಹಿಂದೆ ಜೈದೇವನ ಕೈವಾಡ ಇರುವುದು ಭೂಮಿಕಾಗೆ ತಿಳಿಯತ್ತಾ ಇಲ್ಲವಾ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ. ಒಂದು ವೇಳೆ ಮಿಂಚು ಸಿಕ್ಕರೂ, ಆ ನಕಲಿ ದಂಪತಿ ಅಸಲಿಯತ್ತು ಬಯಲು ಮಾಡಬೇಕಿದೆ. ಹೆತ್ತ ಮಗಳಿಂದಲೇ ಗೌತಮ್ಗೆ ತೊಂದರೆ ಇದೆ ಎನ್ನುವುದು ಹೀಗೆ ಸಾಬೀತಾಗಿಹೋಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.