Gowri Shankara Serial: 3ನೇ ಬಾರಿಗೆ ಹೀರೋಯಿನ್ ಬದಲಾವಣೆ;‌ 894 ಎಪಿಸೋಡ್‌ಗೆ ಸೀರಿಯಲ್‌ ಬಿಟ್ಟ ನಟಿ ದಿವ್ಯಾ!

Published : Jun 06, 2026, 11:11 AM IST

Star Suvarna gowri shankara Serial: ಗೌರಿ ಶಂಕರ ಧಾರಾವಾಹಿ ಆರಂಭವಾಗಿ 895 ಎಪಿಸೋಡ್‌ ಪ್ರಸಾರ ಆಗಿದೆ. ಈಗ ಮೂರನೇ ಬಾರಿಗೆ ನಾಯಕಿ ಬದಲಾವಣೆ ಆಗಿದೆ. ಹೌದು, ಈಗ ನಾಯಕಿ ಗೌರಿ ಪಾತ್ರಧಾರಿ ಬದಲಾಗಿದ್ದಾರೆ. ಹೊಸ ನಾಯಕಿ ಯಾರು?

PREV
13
ಕೌಸ್ತುಭ ಮಣಿ ಸೀರಿಯಲ್‌ ಬಿಟ್ಟಿದ್ಯಾಕೆ?

ಗೌರಿ ಪಾತ್ರದಲ್ಲಿ ಆರಂಭದಲ್ಲಿ ನಟಿ ಕೌಸ್ತುಭ ಮಣಿ ಅವರು ನಟಿಸಿದ್ದರು. ಸೀರಿಯಲ್‌ ಶುರುವಾಗಿ ಹದಿನೈದು ದಿನಕ್ಕೆ ಇವರು ಧಾರಾವಾಹಿಯಿಂದ ಹೊರಬಂದರು. ಕೌಸ್ತುಭ ಮಣಿ ಅವರು ಧಾರಾವಾಹಿ ಬಿಟ್ಟ ಟೈಮ್‌ಗೆ ಅವರಿಗೆ ರಿಯಲ್‌ ಆಗಿ ಮದುವೆ ಕೂಡ ಫಿಕ್ಸ್‌ ಆಗಿತ್ತು.

23
ಹೊರಗಡೆ ಬಂದ ದಿವ್ಯಾ

ಆ ಬಳಿಕ ಈ ಧಾರಾವಾಹಿಗೆ ಹೊಸ ನಟಿಯ ಆಗಮನವಾಗಿತ್ತು. ಈ ಹಿಂದೆ ‘ಮಾಂಗಲ್ಯಂ ತಂತು ನಾನೇನ’ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಅವರು ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದರು. ವರ್ಷಗಳ ಕಾಲ ಈ ಸೀರಿಯಲ್‌ನಲ್ಲಿ ನಟಿಸಿದ್ದ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ.

33
ದಿವ್ಯಾ ಜಾಗಕ್ಕೆ ರಮೋಲ ಎಂಟ್ರಿ

ದಿವ್ಯಾ ಅವರು ಯಾವ ಕಾರಣಕ್ಕೆ ಸೀರಿಯಲ್‌ ಬಿಟ್ಟರು ಎಂಬುದಕ್ಕೆ ನಿಖರ ಕಾರಣ ಸಿಕ್ಕಿಲ್ಲ. ಈಗ ಈ ಸೀರಿಯಲ್‌ಗೆ ಹೊಸ ನಟಿಯ ಆಗಮನವಾಗಿದೆ. ಸೀತಾರಾಮ ಧಾರಾವಾಹಿ ನಟಿ ರಮೋಲ ಅವರು ಸೀರಿಯಲ್‌ಗೆ ಗೌರಿಯಾಗಿ ಆಯ್ಕೆ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories