Bidadi Ai City: ಜೆಡಿಎಸ್‌ಗೆ ಸೇರಿದ್ಮೇಲೆ 9000 ಫಲವತ್ತಾದ ಎಕರೆ ಗುಳುಂ ವಿಷಯಕ್ಕೆ ಬಂದ ಬಿಗ್‌ ಬಾಸ್‌ ಜಾನ್ವಿ!

Published : Jun 06, 2026, 10:29 AM IST

ಬಿಡದಿಯಲ್ಲಿ ಎಐ ಸಿಟಿ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆದರೆ ಬಿಡದಿಯಲ್ಲಿರೋದು ಬರಡು ಭೂಮಿ ಅಲ್ಲ, ಫಲವತ್ತಾದ ಭೂಮಿ ಎಂದು ನಟಿ, ಬಿಗ್‌ ಬಾಸ್‌ ಸ್ಪರ್ಧಿ ಜಾನ್ವಿ ಅವರು ವಿಡಿಯೋ ಮಾಡಿ ಅಭಿಪ್ರಾಯವನ್ನು ಹೊರಹಾಕಿದ್ದಾರೆ.  

PREV
14
ಹೇಗೆ ಬರಡು ಭೂಮಿ ಎಂದು ಹೇಳ್ತೀರಾ?

“ಮುಖ್ಯಮಂತ್ರಿಗಳು ಸಸಿ ನೆಡುವ ಫೋಟೋವನ್ನು ಹಾಕಿ ಪರಿಸರ ಉಳಿಸಿ ಎಂದು ಕರೆ ಕೊಟ್ಟಿದ್ದಾರೆ. ಬಿಡದಿಯಲ್ಲಿ 9600 ಎಕರೆಯನ್ನು ಗುಳುಂ ಮಾಡಿ ಎಐ ಸಿಟಿ ಮಾಡಲು ಹೊರಟಿದ್ದೀರಿ. ಎಷ್ಟು ಫಲವತ್ತಾಗಿರುವ ಈ ಭೂಮಿಯನ್ನು ಬರಡು ಭೂಮಿ ಎಂದು ಹೇಳಿದ್ದೀರಿ. 360 ಡಿಗ್ರಿ ನೋಡಿದರೂ ಕೂಡ ಅಲ್ಲಿ ಹಸಿರು ಕಾಣಿಸುತ್ತದೆ. ನಕಲಿ ಜನರನ್ನು ನೋಡಿ ಮಾತನಾಡಿಸಿ, ಬರಡು ಭೂಮಿ ಎಂದು ಹೇಳುತ್ತಾರೆ” ಎಂದು ನಟಿ ಜಾನ್ವಿ ಹೇಳಿದ್ದಾರೆ.

24
ಎಕರೆಗೆ ಇಂತಿಷ್ಟು ಎಂದು ಹಣ ಕೊಡ್ತಾರಂತೆ

ಬಿಡದಿ ಬಳಿ ಸುಮಾರು 2,000 ಎಕರೆ ಜಾಗ ಇದೆ. ಇದನ್ನು ಈಗ ಎಐ ಸಿಟಿ ಮಾಡಬೇಕು ಎನ್ನೋ ಪ್ಲ್ಯಾನ್‌ ಇದೆ. ಒಂದು ಎಕರೆಗೆ ಇಂತಿಷ್ಟು ಎಂದು ರೈತರಿಗೆ ಹಣ ಕೊಟ್ಟು ಖರೀದಿ ಮಾಡಲಾಗುತ್ತದೆ. ಇದನ್ನು ಅಲ್ಲಿನ ರೈತರು ವಿರೋಧಿಸಿದ್ದಾರೆ, ಆದರೆ ಸರ್ಕಾರ ಮಾತ್ರ ಇದನ್ನು ಬರಡು ಭೂಮಿ ಎಂದು ಹೇಳಿದೆ ಎಂದು ನಟಿ, ಬಿಗ್‌ ಬಾಸ್‌ ಜಾಹ್ನವಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

34
ಇಲ್ಲಿನ ರೈತರು ಏನಂತಾರೆ?

ಇಲ್ಲಿ ಅಡಿಕೆ, ತೆಂಗಿನ ತೋಟ ಇದೆ. ಹೈನುಗಾರಿಕೆ ಕೂಡ ಇದೆ. ಕಂಪ್ಯೂಟರ್‌ನಿಂದ ಹಾಲು ಬರತ್ತಾ? ನಾವು ಸತ್ತರೂ ಪರವಾಗಿಲ್ಲ, ಜಮೀನನ್ನು ಕೊಡೋದಿಲ್ಲ ಎಂದು ಅಲ್ಲಿನ ರೈತರು ಹೇಳಿದ್ದಾರೆ.

44
ಬಿಡದಿ ಸಿಟಿ ಎಂದರೇನು?

ಬಿಡದಿ ಎಐ ಸಿಟಿ (Bidadi AI City) ಎಂಬುದು ಕರ್ನಾಟಕ ಸರ್ಕಾರದ ಯೋಜನೆಯಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಬಿಡದಿ ಇದೆ. ಇಲ್ಲಿ ಎಐ ಸಿಟಿ ಮಾಡೋದು ಇದರ ಉದ್ದೇಶವಾಗಿದೆ. ವಿಶ್ವದಾದ್ಯಂತ ಇರುವ ಪ್ರಮುಖ ಎಐ ಕಂಪನಿ, Startups, ಸಂಶೋಧನಾ ಸಂಸ್ಥೆಗಳನ್ನು ಬಿಡದಿಯಲ್ಲಿ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories