Amruthadhaare Serial Update: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?

Published : Dec 09, 2025, 08:06 AM IST

Amruthadhaare Kannada Serial Tv Episode Update: ಅಮೃತಧಾರೆ ಧಾರಾವಾಹಿಯಲ್ಲಿ ಈಗ ಜಯದೇವ್‌, ಅಜ್ಜಿ ಆಸ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಅಜ್ಜಿ ಹೇಳಿದರೆ ಗೌತಮ್-ಭೂಮಿಕಾ ಮಾತು ಕೇಳಬೇಕು ಎನ್ನೋದು ಎಲ್ಲರಿಗೂ ಗೊತ್ತಿದೆ. ಈಗ ಏನಾಗಲಿದೆ ಎಂದು ಕಾದು ನೋಡಬೇಕಿದೆ. 

PREV
15
ಗೌತಮ್‌ನಿಂದ ದೂರ ಇರುವ ಭೂಮಿ

ಭಾಗ್ಯಮ್ಮ ಎಷ್ಟೇ ಹೇಳಿದರೂ ಕೂಡ ಭೂಮಿ ತನ್ನ ಹಠವನ್ನು ಬಿಡುತ್ತಿಲ್ಲ, ಗೌತಮ್‌ ಜೊತೆ ಒಂದಾಗಿ ಬಾಳಲು ಒಪ್ಪುತ್ತಿಲ್ಲ. ತಾನು ತನ್ನ ಮನೆಯವರ ಜೊತೆ ಬಾಳಿ ಬದುಕಿದರೆ ಶಕುಂತಲಾ ಎಲ್ಲರನ್ನೂ ಸಾಯಿಸುತ್ತಾಳೆ ಎಂದು ಅವಳು ಹೆದರಿದ್ದಾಳೆ. ಎಷ್ಟೇ ಮನಸ್ಸಿಗೆ ನೋವಾದರೂ ಕೂಡ ಅವಳು ಸುಮ್ಮನೆ ಇದ್ದಾಳೆ.

25
ಭಾಗ್ಯಮ್ಮ ಹಠ

ಮಗ-ಸೊಸೆ ಒಂದಾಗಬೇಕು ಎಂದು ಭಾಗ್ಯಮ್ಮ ಆಸೆ ಪಡುತ್ತಿದ್ದಾಳೆ. ಇದ್ದರೆ ಈ ರೀತಿ ದಂಪತಿ ಇರಬೇಕು ಎಂದು ಬಾಳಿದ ಗೌತಮ್-ಭೂಮಿಕಾ ಈಗ ಹೀಗೆ ಇದ್ದಾರೆ ಎನ್ನೋ ಬೇಸರ ಭಾಗ್ಯಮ್ಮನ ಮನಸ್ಸಿನಲ್ಲಿದೆ. ಭಾಗ್ಯಮ್ಮ ಏನಾದರೂ ಮಾಡಬೇಕು ಎಂದುಕೊಂಡಳು. ಆದರೆ ಆಗಲಿಲ್ಲ. ಈಗ ಅಜ್ಜಿ ಎಂಟ್ರಿ ಕೊಟ್ಟಿರೋದು ಭಾಗ್ಯಮ್ಮಳಿಗೆ ಖುಷಿಯಾಗಿದೆ.

35
ಅಜ್ಜಿ ಖಡಕ್‌ ಎಂಟ್ರಿ

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎನ್ನುತ್ತಾರೆ. ಅದರಂತೆ ಅಜ್ಜಿ ಈಗ ಗೌತಮ್‌ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಶಕುಂತಲಾ ಬಳಿ ಅವಳು ತನ್ನ ಸೇವೆ ಮಾಡಿಸಿಕೊಳ್ಳುತ್ತಿದ್ದಾಳೆ. ಇನ್ನೊಂದು ಕಡೆ ಇಡೀ ಮನೆ ಸರಿ ಮಾಡಬೇಕು, ಗೌತಮ್-ಭೂಮಿ ಮನೆಗೆ ಬರಬೇಕು ಎಂದು ಆಸೆಪಡುತ್ತಿದ್ದಾಳೆ. ಇದು ನೆರವೇರಲಿದೆಯಾ ಎಂದು ಕಾದು ನೋಡಬೇಕಿದೆ.

45
ಜಯದೇವ್‌ ಪ್ಲ್ಯಾನ್‌ ಏನು?

ಈಗಾಗಲೇ 600 ಕೋಟಿ ರೂಪಾಯಿ ಸಾಲ ಇದೆ. ಇನ್ನೊಂದು ಕಡೆ ಬ್ಯಾಂಕ್‌ ಅಕೌಂಟ್‌ಗಳು, ಆಸ್ತಿಗಳನ್ನು ಬ್ಯಾಂಕ್‌ನವರು ಮುಟ್ಟುಗೋಲು ಹಾಕಿದ್ದಾರೆ. ಇದರಿಂದ ಜಯದೇವ್‌ ಏನೂ ಮಾಡಲು ಆಗುತ್ತಿಲ್ಲ. ಅತ್ತ ಗೌತಮ್-ಭೂಮಿಕಾರನ್ನು ಮನೆಗೆ ಕರೆಸಿ ಆಸ್ತಿ ಸಮಸ್ಯೆ ಬಗೆಹರಿಸೋಣ ಎಂದುಕೊಂಡರೆ ಅದು ಆಗುತ್ತಿಲ್ಲ. ಹೀಗಾಗಿ ಅವನು ಅಜ್ಜಿ ಆಸ್ತಿ ಮೇಲೆ ಕಣ್ಣು ಹಾಕಿದ್ದಾನೆ. ಫೇಕ್‌ ಅಜ್ಜಿ ಕರೆತಂದು ಅಜ್ಜಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳೋಣ ಎಂದುಕೊಂಡಿದ್ದಾನೆ.

55
ಭೂಮಿಕಾ ಜನ್ಮದಿನ ಆಚರಣೆ

ವಠಾರದವರು ಸೇರಿಕೊಂಡು ಭೂಮಿಕಾರ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ. ಭೂಮಿಕಾ ಕೇಕ್‌ ಕಟ್‌ ಮಾಡಿದ್ದು, ಗೌತಮ್‌ ಕೇಕ್‌ ತಿನಿಸಿದ್ದಾನೆ. ಆದಷ್ಟು ಬೇಗ ಎಲ್ಲವೂ ಸರಿ ಹೋಗುತ್ತದೆ, ಭೂಮಿಕಾ ಹಾಗೂ ಮಗ ಆಕಾಶ್‌ ಜೊತೆ ಗೌತಮ್‌ ಬದುಕುತ್ತೀನಿ ಎಂಬ ಆಸೆ ಇಟ್ಟುಕೊಂಡಿದ್ದಾನೆ.

Read more Photos on
click me!

Recommended Stories