Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್-ಭೂಮಿಕಾರನ್ನು ಹತ್ತಿರ ಮಾಡೋಕೆ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದು ಕಡೆ ಜಯದೇವ್ ತಾನೇ ತೋಡಿಕೊಂಡ ಗುಂಡಿಗೆ ಬೀಳುತ್ತಿದ್ದಾನೆ. ಅಧರ್ಮಕ್ಕೆ ಎಂದಿಗೂ ಗೆಲುವು ಸಿಗೋದಿಲ್ಲ ಎನ್ನೋದು ಸಾಬೀತಾಗಿದೆ.
ಹೌದು, ಭಾಗ್ಯಮ್ಮಳಿಗೆ ಕೊನೆಗೂ ಮಾತು ಬಂದಿದೆ. ತನ್ನ ಮನಸ್ಸಿನ ಮಾತನ್ನು ಅವಳೀಗ ಎಲ್ಲರ ಎದುರು ಹೇಳಿಕೊಳ್ಳಬಹುದು. ಇನ್ನೊಂದು ಕಡೆ ಮಗ-ಸೊಸೆಯನ್ನು ಒಂದು ಮಾಡಬೇಕು ಎಂದು ಅವಳು ಪಣ ತೊಟ್ಟಿದ್ದಾಳೆ. ಶಕುಂತಲಾ ಹೇಳಿದಂತೆ ನಾನು ಮನೆಯವರಿಂದ, ಗೌತಮ್‌ನಿಂದ ದೂರ ಇದ್ದರೆ ಮಾತ್ರ ಎಲ್ಲರೂ ಚೆನ್ನಾಗಿರುತ್ತಾರೆ ಎಂದು ಭಾವಿಸಿ, ಪತಿ, ತನ್ನ ತಂದೆ-ತಾಯಿ, ಅತ್ತೆಯಿಂದ ದೂರ ಇದ್ದಾಳೆ. ಈ ಸತ್ಯ ಶಕುಂತಲಾ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ.
26
ತಪ್ಪು ತಿಳಿದುಕೊಂಡಿರೋ ಗೌತಮ್
ಮಗಳು ಹುಟ್ಟಿರೋದು, ಮಗಳು ಕಿಡ್ನ್ಯಾಪ್ ಆಗಿರೋ ವಿಷಯವನ್ನು ಮುಚ್ಚಿಟ್ಟಿದ್ದೆ ಎನ್ನುವ ಕಾರಣಕ್ಕೆ ಭೂಮಿಕಾ ತನ್ನಿಂದ ದೂರ ಆಗಿದ್ದಾಳೆ ಎಂದು ಗೌತಮ್ ತಪ್ಪು ತಿಳಿದುಕೊಂಡಿದ್ದಾನೆ. ಅವನಿಗೂ ಕೂಡ ಯಾವ ಕಾರಣಕ್ಕೆ ಭೂಮಿಕಾ ದೂರ ಹೋದಳು ಎನ್ನೋದರ ಅರಿವಿಲ್ಲ.
36
ಶಕುಂತಲಾ ಸತ್ಯ ಹೊರಬಂದಿದೆ
ಶಕುಂತಲಾ, ಜಯದೇವ್ ಸೇರಿಕೊಂಡು ನಮಗೆ ತೊಂದರೆ ಕೊಟ್ಟಿದ್ದಾರೆ, ಮೋಸ ಮಾಡಿದ್ದಾರೆ ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ತನ್ನೆಲ್ಲ ಆಸ್ತಿಯನ್ನು ಶಕುಂತಲಾಗೆ ಕೊಟ್ಟು ಮನೆ ಬಿಟ್ಟು ಬಂದಿದ್ದನು. ಈಗ ಅವನು ವಠಾರದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಅವನೀಗ ತನ್ನ ಹೆಂಡ್ತಿ, ಮಗನ ಜೊತೆ ಬದುಕಬೇಕು ಎಂದು ಫಿಕ್ಸ್ ಆಗಿದ್ದಾನೆ.
ಜಯದೇವ್ ಹೆಸರಿನಲ್ಲಿ ಒಂದಿಷ್ಟು ಆಸ್ತಿ ಇತ್ತು. ಮೊದಲೇ ಗೌತಮ್ ತನ್ನೆಲ್ಲ ಆಸ್ತಿಯನ್ನು ಭೂಮಿಕಾ ಹಾಗೂ ಅವಳ ಮಗುವಿನ ಹೆಸರಿಗೆ ಬರೆದಿದ್ದಳು. ಈಗ ಆಸ್ತಿಯೆಲ್ಲವೂ ಜಯದೇವ್‌ಗೆ ಸೇರಿದರೂ ಕೂಡ, ಅದನ್ನು ಅವರು ಮಾರುವಂತಿಲ್ಲ, ಅವುಗಳ ಮೇಲೆ ಅಧಿಕಾರವಿಲ್ಲ. ಇನ್ನೊಂದು ಕಡೆ 600 ಕೋಟಿ ರೂಪಾಯಿ ಸಾಲ ಕೂಡ ಇದೆ. ಹೀಗಾಗಿ ಎಲ್ಲ ಆಸ್ತಿ, ಬ್ಯಾಂಕ್ ಅಕೌಂಟ್‌ನ್ನು ಫ್ರೀಜ್ ಮಾಡಿದ್ದಾರೆ.
56
ಅಜ್ಜಿ ಬಂದಳು
ಗೌತಮ್ ಅಜ್ಜಿ ಈಗ ಶಕುಂತಲಾ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಶಕುಂತಲಾ ಮಾಡಿದ ಮೋಸ ಅವಳಿಗೆ ಈಗ ಗೊತ್ತಾಗಿರಬಹುದು. ಈಗ ಮತ್ತೆ ಗೌತಮ್‌ನನ್ನು ಆ ಮನೆಗೆ ಕರೆದುಕೊಂಡು ಬರಬೇಕು ಎಂದು ಅವಳು ಯೋಚನೆ ಮಾಡಿದ್ದಾಳೆ. ಅಜ್ಜಿಯಿಂದ ಈಗ ಭೂಮಿಕಾ-ಗೌತಮ್ ಮತ್ತೆ ಒಂದಾಗುವ ಸಾಧ್ಯತೆ ಜಾಸ್ತಿ ಕಾಣುತ್ತಿದೆ.
66
ಗುಂಡಿಗೆ ಬಿದ್ದ ಜಯದೇವ್
ಜಯದೇವ್ ಈಗ ಏನು ಮಾಡಬೇಕು ಎಂದು ಗೊತ್ತಾಗದೆ ಒದ್ದಾಡುತ್ತಿದ್ದಾನೆ. ಮಲ್ಲಿಗೆ ಡಿವೋರ್ಸ್ ಕೊಟ್ಟರೆ, ಅವಳು ಬೇರೆ ಮದುವೆ ಆಗಿ ಆರಾಮಾಗಿ ಇರುತ್ತಾಳೆ ಎಂದು ಜಯದೇವ್‌ಗೆ ಗೊತ್ತಾಗಿದೆ. ಹೀಗಾಗಿ ಅವನು ಅವಳಿಗೆ ಡಿವೋರ್ಸ್ ಕೊಡ್ತಿಲ್ಲ. ಇನ್ನೊಂದು ಕಡೆ ಗೌತಮ್-ಭೂಮಿಕಾರನ್ನು ಹುಡುಕಿ ಆಸ್ತಿಯನ್ನು ತಾವು ಕಂಪ್ಲೀಟ್ ಆಗಿ ತಗೊಬೇಕು ಎಂದು ಕೂಡ ಹೊಂಚು ಹಾಕುತ್ತಿದ್ದಾನೆ. ಈಗ ಇವರ ಕೈಗೆ ಗೌತಮ್, ಭೂಮಿಕಾ, ಮಲ್ಲಿ ಸಿಕ್ಕರೆ ಏನು ಮಾಡುತ್ತಾನೆ ಎಂದು ಕಾದು ನೋಡಬೇಕಿದೆ.