BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ

Published : Dec 07, 2025, 08:17 AM IST

BBK 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಧ್ರುವಂತ್‌ ಅವರು ಕಿಚ್ಚ ಸುದೀಪ್‌ ಮುಂದೆಯೂ, ಕ್ಯಾಮರಾ ಮುಂದೆ ಹೋಗಿ ಮನೆಗೆ ಹೋಗಬೇಕು, ಶೋ ಬಿಡ್ತೀನಿ ಎಂದು ಹೇಳುತ್ತಲೇ ಇದ್ದರು. ಈಗ ಅವರ ವಿರುದ್ಧ ರಜತ್‌ ಗಂಭೀರ ಆರೋಪವನ್ನು ಮಾಡಿದ್ದಾರೆ. 

PREV
16
ಧ್ರುವಂತ್‌ ಮಾಡಿದ್ದೆಲ್ಲ ಡವ್

“ಧ್ರುವಂತ್‌ ಮನೆಗೆ ಹೋಗೋಕೆ ರೆಡಿಯಾಗಿದ್ದರು. ಹೋಗ್ತೀನಿ ಎಂದು ಸುಮ್ಮನೆ ಹೇಳಿದ್ದರು. ನಾನು ಮಾತನಾಡಿದಮೇಲೆ ಅವರು, ಗಿಲ್ಲಿ ನನ್ನ ಮನವೊಲಿಸಿದರು, ನಾನು ಹಾಗೆ ಇರ್ತೀನಿ ಎಂದು ಹೇಳಿದರು, ಅವರಿಗೆ ಅವರೇ ಅಂದುಕೊಂಡರೇ ವಿನಃ ನಾನು ಮನವೊಲಿಸಿರಲಿಲ್ಲ” ಎಂದು ರಜತ್‌ ಹೇಳಿದ್ದಾರೆ.

26
ಧ್ರುವಂತ್‌ ಡ್ಯಾಮೇಜ್‌ ಮಾಡಿಕೊಳ್ಳುತ್ತಿದ್ದಾರೆ

“ಮನೆಗೆ ಹೋಗಬೇಕು ಎನ್ನೋ ಮನಸ್ಥಿತಿ ಇರಲಿಲ್ಲ, ಕ್ಯಾಮರಾ ಮುಂದೆ ನಿಂತುಕೊಂಡು ಅವರು ಡವ್‌ ಮಾಡಿದ್ದರು. ನಾನು ಇಲ್ಲಿ ಡ್ಯಾಮೇಜ್‌ ಮಾಡಿಕೊಳ್ಳೋದರ ಬದಲು ಹೊರಗಡೆ ಹೋಗಬೇಕು ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರೇ ಡ್ಯಾಮೇಜ್‌ ಮಾಡಿಕೊಳ್ಳುತ್ತಿದ್ದಾರೆ” ಎಂದು ರಜತ್‌ ಹೇಳಿದ್ದಾರೆ.

36
ಅಸಭ್ಯವಾಗಿ ನಡೆದುಕೊಂಡ್ರು

ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ, ಅಸಭ್ಯವಾಗಿ ಮಾತನಾಡುತ್ತಾರೆ. ಸ್ಪಂದನಾ ಹತ್ತಿರ ನಿಂತುಕೊಂಡು ಬ್ಯಾಕ್‌ಗೆ ಹಾಕು ಎಂದಾಗ ಎಲ್ಲರೂ ನೋಡಿದೆವು. ನಾನು ನೇರವಾಗಿ ಮಾತನಾಡುವಾಗ ನೀನು ತಡೆದುಕೋ ಎಂದು ರಜತ್‌ ಹೇಳಿದ್ದಾರೆ.

46
ಡ್ಯಾಮೇಜಿಂಗ್‌ ಹೇಳಿಕೆ ಇದು

“ಡ್ಯಾಮೇಜಿಂಗ್‌ ಸ್ಟೇಟ್‌ಮೆಂಟ್‌ ಇದು, ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲೇ ಇರು. ನನ್ನ ಹತ್ರ ಬೇಡ, ನೀನು ದೊಡ್ಡ ಪಳಾರ್‌ ಅಲ್ಲ” ಎಂದು ಧ್ರುವಂತ್‌ ಹೇಳಿದ್ದಾರೆ. “ಈ ದೊಡ್ಡ ಶೋನಲ್ಲಿ ಈ ರೀತಿ ಮಾತನಾಡೋದು, ಒಬ್ಬರ ಕ್ಯಾರೆಕ್ಟರ್‌ ವಿಮರ್ಶೆ ಮಾಡೋದು, ಹೆಣ್ಣು ಮಕ್ಕಳ ಬಳಿ ಮಾತನಾಡೋದು ನನಗೆ ಇಷ್ಟವಿಲ್ಲ. ಈ ಮನೆಯಲ್ಲಿ ನಾನು ಹೆಣ್ಣು ಮಕ್ಕಳ ಜೊತೆ ಕಡಿಮೆ ಮಾತನಾಡ್ತೀನಿ, ಆಟದ ಬಗ್ಗೆ ಫೋಕಸ್‌ ಮಾಡ್ತೀನಿ, ನಾನು ಮೌನಿಯಾಗಿದ್ದಾಗಲೂ ಟ್ರಿಗರ್‌ ಮಾಡ್ತಾರೆ” ಎಂದು ಧ್ರುವಂತ್‌ ಹೇಳಿದ್ದಾರೆ.

56
ನಾನು ಯುದ್ಧ ಗೆಲ್ತೀನಿ

“ನಾನು ಯುದ್ಧ ಗೆಲ್ತೀನಿ, ಆದರೆ ಬುಲೆಟ್‌ ಬೇರೆಯವರಿಗೆ ಬೀಳುತ್ತಿರುತ್ತದೆ” ಎಂದು ಧ್ರುವಂತ್‌ ಹೇಳಿದ್ದಾರೆ. ಈ ಬಗ್ಗೆ ಸ್ಪಂದನಾ ಮಾತನಾಡಿದ್ದು, “ಧ್ರುವಂತ್‌ ಮಾತಿಗೆ ನಮ್ಮ ರಿಯಾಕ್ಷನ್‌ ಇರುತ್ತದೆ. ಆದರೆ ಎಲ್ಲರೂ ಇವರ ವಿರುದ್ಧ ತಿರುಗಿ ಬೀಳುವಷ್ಟು ಸ್ಟ್ರಾಂಗ್‌ ಸ್ಪರ್ಧಿಯಂತೂ ಅಲ್ಲ” ಎಂದು ಹೇಳಿದ್ದಾರೆ.

66
ಆರಾಮಾಗಿ ಆಟ ಆಡಲಿ

“ಧ್ರುವಂತ್‌ ಆರಾಮಾಗಿ ಇರಲಿ, ಯಾರ ಜೊತೆ ಬೇಕಿದ್ರೂ ಆರಾಮಾಗಿ ಇರಲಿ, ಆರಾಮಾಗಿ ಆಟ ಆಡಿಕೊಂಡು ಇರಲಿ” ಎಂದು ರಜತ್‌ ಹೇಳಿದ್ದಾರೆ. ಈ ಬಗ್ಗೆ ಸುದೀಪ್‌ ಮಾತನಾಡಿದ್ದು, “ಒಂದು ಕಡೆ ನನಗೆ ಯಾರ ಅವಶ್ಯಕತೆ ಇಲ್ಲ ಎಂದು ಹೇಳುತ್ತೀರಿ. ನಿಮ್ಮ ತಲೆಯಲ್ಲಿ ಓಡುತ್ತಿರೋದು ನಡೆಯುತ್ತಿಲ್ಲ. ಯುದ್ಧದಲ್ಲಿ ಗಾಯ ಆಗತ್ತೆ ಅಂತಿದ್ರೆ ನಾವು ಇಂದು ಹೀಗೆ ಇರಲು ಆಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

Read more Photos on
click me!

Recommended Stories