Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಆಸ್ತಿಯನ್ನು ಅನುಭವಿಸುವ ಸ್ವಾತಂತ್ರ್ಯ ಇದ್ದರೂ ಕೂಡ, ಜಯದೇವ್, ಶಕುಂತಲಾಗೆ ನೆಮ್ಮದಿಯಿಲ್ಲ. ಒಂದು ಕಡೆ ಜಯದೇವ್ ಈಗ 600 ಕೋಟಿ ರೂಪಾಯಿ ಸಾಲವನ್ನು ತೀರಿಸಬೇಕಿದೆ. ಆದರೆ ಮಾಡಿದ ಕರ್ಮ ಎಲ್ಲಿಗೂ ಹೋಗೋದಿಲ್ಲ ಎನ್ನೋದಕ್ಕೆ ಇವರೇ ಸಾಕ್ಷಿ.
ಆರಂಭದಲ್ಲಿ ಮಲ್ಲಿ ಜೊತೆ ಲವ್ ಅಂತ ನಾಟಕ ಮಾಡಿದ್ದ ಜಯದೇವ್ ಅವಳನ್ನು ಗರ್ಭಿಣಿ ಮಾಡಿದ್ದನು, ಆಮೇಲೆ ಅವನೇ ಗರ್ಭಪಾತ ಆಗೋ ಹಾಗೆ ಮಾಡಿದ್ದನು. ಅದಾದ ಮೇಲೆ ಜಯದೇವ್ ದಿಯಾಳನ್ನು ಮದುವೆಯಾಗಿದ್ದಾನೆ. ದಿಯಾಳನ್ನು ಮದುವೆಯಾದಬಳಿಕ ಮಲ್ಲಿ ಕೂಡ ಅವನಿಂದ ದೂರ ಹೋದಳು.
25
ಸಾಲ ತೀರಿಸಬೇಕು
ಈಗ ಮಲ್ಲಿ, ಭೂಮಿಕಾ ಜೊತೆ ವಾಸವಿದ್ದಾಳೆ. ಅತ್ತ ಜಯದೇವ್, ದಿಯಾ ಜೊತೆ ಇದ್ದಾನೆ. ಗೌತಮ್ ಆಸ್ತಿಯನ್ನು ಅನುಭವಿಸೋ ಹಕ್ಕು ಇದ್ದರೂ ಕೂಡ ಭೂಮಿಕಾ ಹಾಗೂ ಅವಳ ಮಕ್ಕಳ ಸಹಿ ಬೇಕಾಗಿದ್ದರಿಂದ ಅದನ್ನು ಮಾರಾಟ ಮಾಡೋಕೆ ಆಗೋದಿಲ್ಲ. ಇನ್ನು ಆ ಸಾಲವನ್ನು ಕೂಡ ತೀರಿಸಬೇಕು. ಒಂದು ಕಡೆ ಭೂಮಿಕಾ ಹುಡುಕಾಟದಲ್ಲಿರೋ ಅವನಿಗೆ ಮಲ್ಲಿ ಕೂಡ ಇಲ್ಲೇ ಇರೋದು ಗೊತ್ತಾಗಿದೆ.
35
ಜಯದೇವ್‌ಗೆ ಚಿಂತೆ ಯಾಕೆ?
ರೌಡಿಗಳನ್ನು ಬಿಟ್ಟು ಅವನು ಮಲ್ಲಿಯನ್ನು ಹುಡುಕಿಸುತ್ತಿದ್ದಾನೆ. ಆದರೆ ಮಲ್ಲಿ ಮಾತ್ರ ಅವನಿಂದ ಎಸ್ಕೇಪ್ ಆಗುತ್ತಿದ್ದಾಳೆ. ನಿತ್ಯವೂ ಮಲ್ಲಿ ಓಡಾಡುವ ರಸ್ತೆಯಲ್ಲಿ ಜಯದೇವ್ ಅಲೆದರೂ ಕೂಡ ಅವಳು ಸಿಗ್ತಿಲ್ಲ. ಮನೆಗೆ ಬಂದು ಅವನು, “ನನ್ನ ಕಣ್ಣು ಮುಂದೆಯೇ ಮಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾಳೆ. ಅವಳು ವಿಲ ವಿಲ ಅಂತ ಒದ್ದಾಡಬೇಕು, ಅವಳು ಹೇಗೆ ಆರಾಮಾಗಿ ಓಡಾಡಿಕೊಂಡು ಇರ್ತಾಳೆ? ಅವಳ ತಲೆಕೂದಲು ಎಳೆದು ಹೇಗಿದ್ದೀಯಾ ಅಂತ ನಾನು ಕೇಳಬೇಕು” ಎಂದು ಹೇಳಿದ್ದನು.
ಪದೇ ಪದೇ ಜಯದೇವ್ ತನ್ನ ಮೊದಲ ಪತ್ನಿ ಬಗ್ಗೆ ಮಾತನಾಡಿದ ಅಂತ ದಿಯಾ ಸಿಟ್ಟಾಗಿದ್ದಾಳೆ. ಅವಳು ಕೂಡ ಅವನ ಬಳಿ ಬಂದು, “ನಾನು ನಿಮ್ಮ ಹೆಂಡ್ತಿ, ಮಲ್ಲಿ ಮುಗಿದು ಹೋದ ಚಾಪ್ಟರ್, ನೀವು ಯಾಕೆ ಅವಳ ಬಗ್ಗೆ ಮಾತಾಡ್ತೀರಿ? ಎಂದು ಪ್ರಶ್ನೆ ಮಾಡಿದ್ದಾಳೆ. ದಿಯಾ ಪೊಸೆಸ್ಸಿವ್ ಆದಳು ಅಂತ ಜಯದೇವ್ ಕೂಡ ಅವಳನ್ನು ಸಮಾಧಾನ ಮಾಡಿದ್ದಾನೆ, ಆದರೂ ಪ್ರಯೋಜನವಾಗಿಲ್ಲ.
55
ಜಯದೇವ್‌ಗೆ ನೆಮ್ಮದಿ ಇಲ್ಲ
ಜಯದೇವ್‌ಗೆ ನೆಮ್ಮದಿ ಇಲ್ಲ. ಎಷ್ಟೇ ಆಸ್ತಿ ಇದ್ದರೂ, ಯಾರು ಏನೇ ಕೇಳದೆ ಇದ್ದರೂ ಕೂಡ, ತಾನು ಪ್ರೀತಿಸಿದ ಹುಡುಗಿ ದಿಯಾಳನ್ನು ಮದುವೆ ಆದರೂ ಕೂಡ ಅವನಿಗೆ ಮಲ್ಲಿ ಬಡತನದಲ್ಲಿ ಚೆನ್ನಾಗಿದ್ದರೂ, ನಗುತ್ತಿದ್ದರೂ ಕೂಡ ನೆಮ್ಮದಿ ಇಲ್ಲದಂತಾಗಿದೆ. ಕರ್ಮ ಎನ್ನೋದು ಇದಕ್ಕೆ. ಎಲ್ಲ ಕೊಟ್ಟು ಜಯದೇವ್‌ಗೆ ಬೇಕಾದ ನೆಮ್ಮದಿಯನ್ನು ದೇವರು ಕಿತ್ತುಕೊಂಡಿದ್ದಾನೆ.