ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ (Ranjani Raghavan) ತಮ್ಮ ಶೂಟಿಂಗ್ ಗೆ ಬ್ರೇಕ್ ಕೊಟ್ಟಂತೆ ಕಾಣಿಸುತ್ತಿದೆ. ಕಳೆದ ಕೆಲವು ಸಮಯದಿಂದ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ತಮ್ಮ ಕುಟುಂಬದ ಜೊತೆಗೆ ಶಿವನಸಮುದ್ರಕ್ಕೆ ಭೇಟಿ ನೀಡಿದ್ದು, ದೇಗುಲ ದರ್ಶನ, ಜಲಪಾತದ ದರ್ಶನ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.