Amruthadhaare: ಅಲ್ಲಿ ಹನಿಮೂನ್​ ಮೂಡ್​ನಲ್ಲಿರೋ ದಿಯಾ ಇಲ್ಲಿ ಸುಟ್ಟು ಭಸ್ಮ- ಜೈಲು ಪಾಲಾಗ್ತಾನಾ ಜೈ

Published : Jun 01, 2026, 05:31 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ದಿಯಾಳನ್ನು ಕೊಲೆ ಮಾಡಿದ್ದಾನೆ. ದಿಯಾ ಪಾತ್ರಕ್ಕೆ ಅಂತ್ಯ ಹಾಡಿರುವ ಜೈದೇವ್‌ನ ಮುಂದಿನ ಗುರಿ ಮಿಂಚು ಆಗಿದ್ದು, ಆತ ಪೊಲೀಸರ ಕೈಗೆ ಸಿಗುತ್ತಾನೆಯೇ ಅಥವಾ ಮಿಂಚುವಿನ ಜೀವಕ್ಕೆ ಅಪಾಯ ತರುತ್ತಾನೆಯೇ ಎಂಬ ಕುತೂಹಲ ಮೂಡಿದೆ.

PREV
16
ದಿಯಾಳ ಕೊಲೆ

ಅಮೃತಧಾರೆ ಸೀರಿಯಲ್​ (Amruthadhaare Serial) ಸದ್ಯ ದಿಯಾ ಬೇಬಿಯನ್ನು ಜೈದೇವ್​ ಕೊಲೆ ಮಾಡಿದ್ದಾಯ್ತು. ಅಸಲಿಗೆ ರಿಯಲ್​ ಲೈಫ್​ನಲ್ಲಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಮದುವೆಯಾಗಿದ್ದು, ಅವರು ಹನಿಮೂನ್​ ಮೂಡ್​ನಲ್ಲಿ ಇದ್ದಾರೆ. ಇತ್ತ ಜೈದೇವ್​ ಸೀರಿಯಲ್​ನಲ್ಲಿ ದಿಯಾಳ ಕೊಲೆ ಮಾಡಿದ್ದಾನೆ.

26
ತಾರ್ಕಿಕ ಅಂತ್ಯ

ಯಾರಿಗೂ ತಿಳಿಯದಂತೆ ಜೈದೇವ್​ ದಿಯಾಳನ್ನು ಸುಟ್ಟು ಹಾಕಿದ್ದಾನೆ. ಅಲ್ಲಿಗೆ ದಿಯಾ ಪಾತ್ರ ಮುಗಿದಿದೆ. ತಮ್ಮ ಪಾತ್ರಕ್ಕೆ ತಾರ್ಕಿಕ ಅಂತ್ಯ ಕಾಣಿಸಿ ನಟಿ ಸೀರಿಯಲ್​ ತೊರೆದಿದ್ದಾರೆ.

36
ಜೈಲು ಪಾಲಾಗ್ತಾನಾ

ಇನ್ನು ಜೈದೇವ್​ ಸುಟ್ಟು ಭಸ್ಮವಾಗಿರೋ ಜಾಗಕ್ಕೆ ಬಂದು ದಿಯಾಳ ಸಾವನ್ನು ಸಂಭ್ರಮಿಸುತ್ತಿದ್ದಾನೆ. ದಿಯಾಳ ಕಥೆ ಮುಗಿಸಿರೋ ಜೈದೇವ್​ನ ಮುಂದಿನ ಹೆಜ್ಜೆ ಈಗ ಮಿಂಚು. ಅದಕ್ಕೂ ಮುನ್ನ ಜೈದೇವ್​ ಜೈಲುಪಾಲಾಗ್ತಾನಾ ಅಥವಾ ಈ ರೀತಿ ಕೊಲೆ ಮಾಡಿದ್ರೂ ತಪ್ಪಿಸಿಕೊಳ್ತಾನಾ ಎನ್ನುವುದು ನೋಡಬೇಕಿದೆ.

46
ಮಿಂಚು ಮಹಿಮಾ ಬಳಿ

ಇದಾಗಲೇ ಮಿಂಚುವನ್ನು ಮಹಿಮಾ ಬಳಿ ಕಳುಹಿಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ಆ ಮುಗ್ಧ ಹೃದಯಕ್ಕೆ ಅದೆಷ್ಟು ನೋವಾಗಿದೆ ಎನ್ನುವುದು ಆಕೆಗಷ್ಟೇ ಗೊತ್ತು. ಅವಳನ್ನು ಮಹಿಮಾಳ ಬಳಿ ಕಳುಹಿಸಲು ಭೂಮಿಕಾ ಮತ್ತು ಗೌತಮ್​ಗೆ ಇಷ್ಟವಿಲ್ಲದಿದ್ದರೂ ಕಳುಹಿಸಲೇಬೇಕಾದ ಅನಿವಾರ್ಯತೆ ಇದೆ.

56
ಮುಂದೇನಾಗುತ್ತೆ?

ಆದ್ದರಿಂದ ಮುಂದೇನಾಗುತ್ತದೆ ಎನ್ನುವುದು ಸದ್ಯಕ್ಕೆ ಇರುವ ಕುತೂಹಲ. ಜೈದೇವ್​ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಅಲ್ಲಿಗೆ ಮಿಂಚು ಇಷ್ಟು ಬೇಗ ಅವನ ಕೈಸೇರಲ್ಲ ಎನ್ನುವುದು ದಿಟ. ಆದರೆ ಕೊಲೆ ಮಾಡಿಯೂ ತಪ್ಪಿಸಿಕೊಂಡರೆ ಮಿಂಚುವಿನ ಲೈಫ್​ ಡೇಂಜರ್​ನಲ್ಲಿ ಇದೆ ಎಂದೇ ಅರ್ಥ.

66
ಭವಿಷ್ಯವಾಣಿ

ಒಟ್ಟಿನಲ್ಲಿ, ಮುಂದೇನಾಗಲಿದೆ ಎನ್ನುವುದು ಕಾದು ನೋಡಬೇಕಿದೆ. ಅತ್ತ ಜ್ಯೋತಿಷರ ಭವಿಷ್ಯವಾಣಿಯಂತೆ ಗೌತಮ್​ಗೆ ಮಗಳಿಂದ ಕಂಟಕವಿದೆ. ಹಾಗಿದ್ದರೆ ಆ ಮಗಳು ಯಾರು ಎನ್ನುವುದೂ ತಿಳಿಯಬೇಕಿದೆ. ಜೊತೆಗೆ ಮಿಂಚುನೇ ತಮ್ಮ ಮಗಳು ಎಂದು ಈ ಜೋಡಿಗೂ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories