Amruthadhaare Serial ಕಲಾವಿದರಿಗೆ ತಾರತಮ್ಯ; ಪೇಜ್‌ ವಿರುದ್ಧ ಸಿಡಿದೆದ್ದ ಪಾರ್ಥ ಪಾತ್ರಧಾರಿ ಕರಣ್

Published : Jun 01, 2026, 03:31 PM IST

Amruthadhaare Serial: ಧಾರಾವಾಹಿಗೆ ಅಭಿಮಾನಿಗಳ ಬಳಗ ಇದ್ದೇ ಇರುತ್ತದೆ. ಈಗಂತೂ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್‌ ಪೇಜ್‌ಗಳು ಕ್ರಿಯೇಟ್‌ ಆಗಿರುತ್ತವೆ. ಈಗ ಅಮೃತಧಾರೆ ಧಾರಾವಾಹಿಯ ಫ್ಯಾನ್‌ ಪೇಜ್‌ ಕೂಡ ಇದ್ದು, ಅಲ್ಲಿ ಪಾರ್ಥ ಪಾತ್ರವನ್ನು ಕಡೆಗಣಿಸಲಾಗಿದೆ ಎಂದು ನಟ ಕರಣ್‌ ಕೆ ಆರ್‌ ದೂರಿದ್ದಾರೆ. 

PREV
15
ಫ್ಯಾನ್‌ ಪೇಜ್‌ಗಳು ಏನು ಹೇಳಿತ್ತು?

ಇದಕ್ಕೆ ಫ್ಯಾನ್‌ ಪೇಜ್‌ ಕೂಡ ಉತ್ತರ ಕೊಟ್ಟಿದ್ದು, “ಮೊದಲನೇದಾಗಿ ಪ್ರತಿ ವರ್ಷ, ಪ್ರತಿ ಸಲ ಟೀಮ್ ಅಂತ ಬಂದಾಗ ನಾವೆಲ್ಲರನ್ನೂ ಗುರುತಿಸುತ್ತೇವೆ. ನಾವು ಏನೇ ಎಡಿಟ್ ಮಾಡಿದ್ರೂ ಅದರಲ್ಲಿ ಎಲ್ಲ ಪಾತ್ರಗಳನ್ನು ಸೇರಿಸಿ ಮಾಡುತ್ತೇವೆ. ಕಳೆದ ಮೂರು ವರ್ಷಗಳಿಂದನು ಮಾಡಿರೋ ಪ್ರತಿ ಆನಿವರ್ಸರಿ ಎಡಿಟ್‌ನಲ್ಲಿ ಎಲ್ಲರೂ ಇದ್ದಾರೆ. ಆದರೆ ಇರೋದನ್ನು ಯಾಕೆ ಗುರುತಿಸುತ್ತಿಲ್ಲ? ಯಾಕೆ ? ಅದಕ್ಕೆ ಗ್ರಾಟಿಟ್ಯೂಡ್ ಕೂಡ ತೋರ್ಸಿಲ್ಲ. ನಾವು ಅದನ್ನು ನಿರೀಕ್ಷೆ ಮಾಡೋದಿಲ್ಲ. ನಮಗೂ ಪ್ರತಿಸಲ ಒಂದೇ ತರ ಎಡಿಟ್ ಮಾಡಲು ಆಗೋದಿಲ್ಲ. ಆದ್ದರಿಂದ ಈ ಸಲ ಏನೋ ಹೊಸದಾಗಿ ಮಾಡಿದಾಗ ತುಂಬಾ ಪಾತ್ರಗಳು ಹೈಡ್ ಆಗಿದೆ. ಮೇನ್‌ ಫೋಟೋ ಹಾಕಿದಾಗ ಹಿಂದೆ ಇರೋ ಪೋಟೋಗಳು ಹೈಡ್ ಆಗೋದು ಸಹಜ. ಅದಕ್ಕೋಸ್ಕರ ಪ್ರಯತ್ನ ಹಾಕಿರೋರ್ ಮೇಲೆ ಆರೋಪ ಮಾಡೋದು ತುಂಬ ತಪ್ಪು! ವಿಷಯ ಗೊತ್ತಿಲ್ಲದೆ ಆರೋಪ ಮಾಡೋದು ತಪ್ಪು ಎಂದು ಹೇಳಿದೆ.

25
ನಿಮಗೆ ಹೊಟ್ಟೆಕಿಚ್ಚು ಅಂತ ಅಂದುಕೊಳ್ಳಬಹುದಾ?

ಫೋಟೋ ಎಟಿಟ್‌ ಅಲ್ಲಿ ಕಾಣಿಸ್ತಿಲ್ಲ ಅಂತ ನಿನ್ನೆಯಿಂದ ಇನ್‌ಸ್ಟಾಗ್ರಾಮ್‌ ಸ್ಟೋರಿ ಮೇಲೆ ಸ್ಟೋರಿ ಹಾಕ್ತಾ ಇರೋ ನೀವು, ಅಷ್ಟು ವರ್ಷದಿಂದ ಎಡಿಟ್ ಮಾಡಿ ಹಾಕೊಂಡ್ ಬಂದಾಗ ಎಲ್ಲಿ ಹೋಗಿದ್ರಿ? ಫೋಟೋ ಮೇಲೆ ಫೋಟೋ ಬಂದಾಗ ಕಾಣದೆ ಇರೋದು ಸಹಜ. ಒಂದರ ಮೇಲೆ ಇನ್ನೊಂದು ಫೋಟೋ ಕೂರಿಸಿದಾಗ ಹಿಂದೆ ಇರೋರ ಮುಖ ಕಾಣಿಸಲ್ಲ. ನಿಮ್ಮೊಬ್ಬರದೆ ಅಲ್ಲ ಕಾಣಿಸದೆ ಇರೋದು ತುಂಬ ಕಲಾವಿದರ ಮುಖ ಕಾಣಿಸ್ತಾ ಇಲ್ಲ. ಆದರೆ ಯಾರು ನಿಮ್ ತರ ಆಡ್ತಾ ಇಲ್ಲ!

ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮ್ಯಾಟರ್‌ ಆಗಲ್ಲ ಅಂತ ಅಂದಾಗ ನಿನ್ನೆಯಿಂದ ಸ್ಟೋರಿ ಮೇಲೆ ಸ್ಟೋರಿ ಯಾಕೆ ಹಾಕ್ತಾ ಇದ್ದೀರಾ? ನಿಮಗೆ ನೀವೇ ಕಲ್ಪನೆ ಮಾಡ್ಕೊಂಡು ನಮಗೆ ದುರಂಕಾರ, Attitude ಅಂತ ಎಲ್ಲ ಹೇಳ್ತಾ ಇದೀರಲ್ಲ! The same way ನೀವು ಕೂಡ ನಿನ್ನೆ ಮೊನ್ನೆ ಬಂದಿರೋರನ್ನು ಹಾಕಿದ್ದೀರಾ. ಮೂರು ವರ್ಷದಿಂದ ಇರೋ ನಮ್ಮನ್ನು ಹಾಕಿಲ್ಲ ಅಂತ ಹೇಳ್ತಿದೀರಿ. ಅದನ್ನು ನಾವು ನಿಮಗೆ ಹೊಟ್ಟೆಕಿಚ್ಚು ಅಂತ ಅಂದುಕೊಳ್ಳಬೇಕಾ? ಕಲಾವಿದರಾಗಿ ಏನು ಮಾತನಾಡುತ್ತಿದ್ದೇನೆ ಎನ್ನೋದನ್ನು ತಲೆಯಲ್ಲಿ ಇಟ್ಟುಕೊಂಡು ಮಾತನಾಡಬೇಕು, ಮನಸ್ಸಿಗೆ ಬಂದ ಹಾಗೆ ಮಾತನಾಡಿದ್ರೆ ನಿಮ್ಮ ಸ್ಥಾನಕ್ಕೆ ಸೆಟ್‌ ಆಗೋದಿಲ್ಲ ಎಂದು ಫ್ಯಾನ್ಸ್‌ ಪೇಜ್‌ಗಳು ಹೇಳಿವೆ.

35
ಇನ್‌ಸ್ಟಾಗ್ರಾಮ್‌ ಪೇಜ್‌ನಿಂದ ಕಲಾವಿದರು ಇಲ್ಲ!

ನಿಮ್ಮ pagesಗಳಲ್ಲಿ ಫೋಟೋ ಎಡಿಟ್ ಮಾಡಿ‌, ಪೋಸ್ಟ್‌ ಮಾಡುವುದರಿಂದಲೇ ಕಲಾವಿದರು ಗುರುತಿಸಿಕೊಂಡಿದ್ದಾರೆ ಅನ್ನೋ ಭಾವನೆ ದುರಹಂಕಾರ ಅಷ್ಟೇ. ಮೊದಲಿನಿಂದಲೂ ಪ್ರತಿ ವರ್ಷ ಅಮೃತಧಾರೆ ತಂಡವನ್ನು ಕರ್ನಾಟಕದ ಪ್ರೇಕ್ಷಕರು ಗುರುತಿಸಿದ್ದಾರೆ. ಕಲಾವಿದರನ್ನು ಗುರುತಿಸೋದು ಸೋ ಕಾಲ್ಡ್‌ ಇನ್‌ಸ್ಟಾಗ್ರಾಮ್‌ ಪೇಜ್‌ನಿಂದ ಬಂದಿಲ್ಲ. ಜೀ ಕನ್ನಡದಲ್ಲಿ ಪ್ರತಿದಿನ ನಮ್ಮನ್ನು ನೋಡಿ ಪ್ರೀತಿಸುವ ಪ್ರೇಕ್ಷಕರಿಂದ ಬಂದಿದೆ. ನಿಮ್ಮ ಪೇಜ್‌ಗಳಲ್ಲಿ ಫೋಟೋ ಎಡಿಟ್‌ ಮಾಡಿ, ಪೋಸ್ಟ್‌ ಮಾಡುವುದರಿಂದಲೇ ಕಲಾವಿದರು ಗುರುತಿಸಿಕೊಂಡಿದ್ದಾರೆ ಎನ್ನೋ ಭಾವನೆ ದುರಂಹಕಾರ ಅಷ್ಟೇ. ಅಮೃತಧಾರೆ ಅಂದರೆ ಕೇವಲ ಒಂದು ಪೋಸ್ಟರ್‌ ಅಲ್ಲ, ಅದು ಕಲಾವಿದರು, ನಿರ್ದೇಶಕರು, ಕ್ಯಾಮರಾ ಮ್ಯಾನ್‌, ಸಂಕಲನಕಾರರು, ಸಂಪೂರ್ಣ ತಂಡದ ಪರಿಶ್ರಮ. ಶೋ ಇರೋದರಿಂದ ಈ ಪೇಜ್‌ಗಳು ಇವೆ, ಪೇಜ್‌ಗಳು ಇರೋದರಿಂದ ಶೋ ಇಲ್ಲ ಎಂದು ಕರಣ್‌ ಕೆ ಆರ್‌ ( Amruthadhaare Serial Actor karan kr ) ಹೇಳಿದ್ದಾರೆ.

45
ಪಾರ್ಥ ಪಾತ್ರವನ್ನು ಕಡೆಗಾಣಿಸಿದ್ರಿ

ಮೂರು ವರ್ಷದ ಜರ್ನಿಯಲ್ಲಿ ಮೊದಲಿನಿಂದಲೂ ಇದ್ದು, ಇನ್ನೂ ಆ ಪಯಣದ ಭಾಗಿ ಆಗಿರುವವರನ್ನು ಸಂಪೂರ್ಣವಾಗಿ ಬಿಟ್ಟು, ಇತ್ತೀಚೆಗೆ ಬಂದ ಪಾತ್ರಗಳನ್ನು ಮೂರು ವರ್ಷ ಅಂತ ತೋರಿಸೋದು ಕೃತಜ್ಞತೆ ಅಲ್ಲ. ನೀವು ನಮ್ಮನ್ನು ಸೇರಿಸಿ ಅಥವಾ ಬಿಡಿ, ಅದು ಸಂಬಂಧಪಟ್ಟಿಲ್ಲ. ಕಲಾವಿದನನ್ನು ಗುರುತಿಸೋದು ಇನ್‌ಸ್ಟಾಗ್ರಾಮ್‌ ಪೇಜ್‌ಗಳಿಂದಲ್ಲ ಎಂದು ಕರಣ್‌ ಕೆ ಆರ್‌ ಹೇಳಿದ್ದಾರೆ.

55
ಪಾರ್ಥ ಅಷ್ಟು ಬೇಗ ಮರೆತು ಹೋಗಲ್ಲ

ಪಾರ್ಥ ಅಷ್ಟು ಸುಲಭವಾಗಿ ಮರೆತು ಹೋಗುವ ಪಾತ್ರ ಅಲ್ಲ. ಎಷ್ಟು ಪೋಸ್ಟರ್‌ಗಳಿಂದ ಹೈಡ್‌ ಮಾಡಿದರೂ ಪ್ರೇಕ್ಷಕರ ಮನಸ್ಸಿನಲ್ಲಿ ಅವನಿಗೆ ಜಾಗ ಇದೆ. ನಾನು ಆರೋಪ ಮಾಡುತ್ತಿಲ್ಲ. ಆದರೆ ಉದ್ದೇಶಪೂರ್ವಕ ಅಗೌರವ ಕಂಡಾಗ ಪ್ರತಿಕ್ರಿಯೆ ಇರಲೇಬೇಕು ಎಂದು ಕರಣ ಕೆ ಆರ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories