ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲೊಂದಾದ ‘ಅಮೃತವರ್ಷಿಣಿ’ಯಲ್ಲಿ ಶಕುಂತಲಾದೇವಿ ಮಗಳಾಗಿ ಹಾಗೂ ಸೊಸೆಯಂದಿರಾಗಿ ಮಿಂಚಿದ ನಟಿಯರು ಹಲವು ವರ್ಷಗಳ ಬಳಿಕ ಮತ್ತೆ ಜೊತೆ ಸೇರಿದ್ದಾರೆ. ಸದ್ಯ ಈ ಫೋಟೊಗಳು ವೈರಲ್ ಆಗುತ್ತಿವೆ.
ಕೆಲವು ಧಾರಾವಾಹಿಗಳು ಕಳೆದ ವರ್ಷಗಳು ಎಷ್ಟೇ ಕಳೆದರೂ ಅವುಗಳ ಕಥೆ, ಪಾತ್ರಧಾರಿಗಳು ಎಂದಿಗೂ ವೀಕ್ಷಕರ ಮನಸ್ಸಿನಲ್ಲಿ ಸದಾ ಹಚ್ಚಹಸಿರಾಗಿರುತ್ತಾರೆ. ಅಂತಹ ಒಂದು ಧಾರಾವಾಹಿ ಎಂದರೆ ‘ಸ್ಟಾರ್ ಸುವರ್ಣ’ ವಾಹಿನಿಯ ಜನಪ್ರಿಯ ‘ಅಮೃತವರ್ಷಿಣಿ’ ಧಾರಾವಾಹಿ.
26
ಹಲವು ವರ್ಷಗಳ ಬಳಿಕ ಜೊತೆ ಸೇರಿದ ಅತ್ತಿಗೆ-ನಾದಿನಿಯರು
ಎಂದೆಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿರುವ ಅಮೃತವರ್ಷಿಣಿ ಧಾರಾವಾಹಿಯ ಅತ್ತಿಗೆ ನಾದಿನಿಯರು ಅಂದ್ರೆ, ಶಕುಂತಲಾ ದೇವಿ ಸೊಸೆಯಾದ ಅಮೃತಾ, ವರ್ಷ ಹಾಗೂ ಮಗಳು ಕೊಮಲ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಬರೋಬ್ಬರಿ 4 ವರ್ಷದ ಬಳಿಕ. ನಟಿ ರಜನಿ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
36
ನಟಿಯರ ಸಂಡೆ ಮೀಟ್ ಅಪ್
ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದ್ದ ನಟಿಯರಾದ ರಜಿನಿ, ಸ್ವಾತಿ ಹಾಗೂ ಕೋಮಲ್ ಪಾತ್ರಧಾರಿ ನಟಿ, ಬಹು ದಿನಗಳ ಬಳಿಕ ಇದೀಗ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ. ಜೊತೆಯಾಗಿ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ರಜಿನಿ ಪೋಸ್ಟ್ ಮಾಡಿದ್ದು, ಈ ಪೋಸ್ಟನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಅಮೃತ ,ವರ್ಷ, ಕೋಮಲ್ ನಿಮ್ಮ ಮೂರು ಜನರನ್ನು ಒಟ್ಟಿಗೆ ನೋಡಿ ತುಂಬ ಖುಷಿ ಆಯ್ತು, ಮತ್ತೆ ನೀವೆಲ್ಲಾ ಸೇರಿ ಅಮೃತವರ್ಷಿಣಿ 2 ಮಾಡ್ತಿದ್ದೀರಾ? ಈ ರೀಯೂನಿಯನ್ ನೋಡೋದಕ್ಕೆ ಖುಷಿ ಆಗ್ತಿದೆ. ‘ಅಮೃತವರ್ಷಿಣಿ’ ಎವರ್ ಗ್ರೀನ್ ಸೀರಿಯಲ್. ಶಾಕುಂತಲಾದೇವಿ ಮಗಳು ಮತ್ತು ಸೊಸೆಯಂದಿರನ್ನು ನೋಡಿ ಖುಷಿ ಆಯ್ತು ಎನ್ನುತ್ತಿದ್ದಾರೆ ಜನ.
56
ಅಮೃತವರ್ಷಿಣಿ ಕಥೆ ಏನು?
ಶಾಕುಂತಲಾದೇವಿ ಆಗರ್ಭ ಶ್ರೀಮಂತೆ. ಜೊತೆಗೆ ಶಿಸ್ತಿನ ಸಿಪಾಯಿ. ಯಾರೇ ತಪ್ಪು ಮಾಡಿದರು ಸುಮ್ಮನೆ ಬಿಡುವವಳು ಅಲ್ಲ. ಇವರ ಮನೆಗೆ ಸೊಸೆಯಾಗಿ ಬರುವವರು ಅಮೃತಾ ಹಾಗೂ ಆಕೆಯ ಚಿಕ್ಕಮ್ಮನ ಮಗಳು ವರ್ಷಿಣಿ. ಅಕ್ಕನನ್ನು ಕಂಡರೆ ಆಗದ ವರ್ಷ ಮಾಡುವ ಕಿತಾಪತಿ, ತನ್ನ ಒಳ್ಳೆಯತನದಿಂದಲೇ ಮನ ಗೆಲ್ಲುವ ಅಮೃತಾ ಹಾಗೂ ಅತ್ತೆಯ ಬೆಂಬಲ ಎಲ್ಲವೂ ಸೇರಿ ಇದೊಂದು ಸುಂದರವಾದ ಕೌಟುಂಬಿಕ ಕಥೆಯಾಗಿ ಮೂಡಿ ಬಂದಿತ್ತು. ಅತ್ತೆ ಶಾಕುಂತಲಾ ದೇವಿಯಾಗಿ ಹಿರಿಯ ನಟಿ ಹೇಮಾ ಚೌದರಿ ನಟಿಸಿದ್ದರು.
66
ಏನು ಮಾಡ್ತಿದ್ದಾರೆ ಈಗ ನಟಿಯರು?
ಅಮೃತವರ್ಷಿಣಿ ನಾಯಕಿಯಾದ ಅಮೃತ ಸದ್ಯ ‘ನೀ ಇರಲು ಜೊತೆಯಲ್ಲಿ’ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಜೊತೆಗೆ ಪತಿ ಅರುಣ್ ಜೊತೆ ಜೋಡಿ ನಂ 1ರಲ್ಲೂ ಸ್ಪರ್ಧಿಸುತ್ತಿದ್ದಾರೆ. ವರ್ಷಿಣಿ ಪಾತ್ರಧಾರಿ ಸ್ವಾತಿ ‘ಅಮೃತಧಾರೆ’ ಧಾರಾವಾಹಿಯಲ್ಲಿ ಆನಂದ್ ಪತ್ನಿಯಾಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.