Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ತನ್ನನ್ನು ಪ್ರೀತಿಸಿ ನಾಟಕ ಮಾಡಿ, ಮದುವೆಯಾಗಿ ಎಲ್ಲ ಹಣವನ್ನು ದೋಚಿಕೊಂಡಿದ್ದ ದಿಯಾಳನ್ನು ಜಯದೇವ್ ಕೊ*ಲೆ ಮಾಡಿದ್ದಾನೆ. ಈಗ ಅವನು ಮತ್ತೆ ಹಳೇ ಆಟ ಶುರು ಮಾಡಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?
ಹೌದು, ಮೊದಲೇ ಸಾಲ ಆಗಿತ್ತು. ಹೀಗಾಗಿ ದಿವಾನ್ ಆಸ್ತಿಯನ್ನೆಲ್ಲ ಹರಾಜಿಗೆ ಇಡಲಾಯ್ತು, ಆ ಬಳಿಕ ಗೌತಮ್ ತನ್ನೆಲ್ಲ ಆಸ್ತಿಯನ್ನು ಹರಾಜಿನಲ್ಲಿ ಮರಳಿ ಪಡೆದನು. ಇನ್ನು ಜಯದೇವ್ ಬಳಿ ಇದ್ದ ಹಣವನ್ನೆಲ್ಲ ದಿಯಾ ಎತ್ತಿಕೊಂಡು ಹೋದಳು. ಪ್ರತಿ ಬಾರಿ ಅವನಿಗೆ ಮದ್ಯ ಕುಡಿಸಿ ಮೋಸ ಮಾಡಿದಳು.
25
ದಿಯಾ ಮನೇಲಿ ಜೀತದಾಳಾಗಿದ್ದ ಜೆಡಿ
ಈಗ ದಿಯಾ ಮನೆಯಲ್ಲಿ ಜಯದೇವ್ ಜೀತದಾಳು ಥರ ಇದ್ದಾನೆ, ಅವಳು ಹೇಳಿದ್ದ ಕೆಲಸವನ್ನು ಮಾಡಿಕೊಂಡಿದ್ದಾನೆ. ಎಷ್ಟೇ ಹೇಳಿದರೂ ಕೂಡ ಲಕ್ಷ್ಮೀಕಾಂತ್ ಮಾವ, ಪಾರ್ಥನ ಮಾತು ಕೇಳದೆ ಅವನು ದಿಯಾ ಮನೆಯಲ್ಲಿದ್ದನು. ಇನ್ನೊಂದು ಕಡೆ ಲಕ್ಷ್ಮೀಕಾಂತ್‌ನನ್ನು ಕಿಡ್ನ್ಯಾಪ್ ಮಾಡಿರೋದು, ಮಿಂಚುಳೇ ಗೌತಮ್ ಮಗಳು ಎನ್ನೋದು ದಿಯಾಗೆ ಗೊತ್ತಾಗಿತ್ತು. ಹೀಗಾಗಿ ಅವನು, ಅವಳನ್ನು ಹೊಡೆದು ಸಾಯಿಸಿದ್ದಾನೆ.
35
ಎರಡು ಸಾ*ವು
ಸಿಟ್ಟಿನಲ್ಲಿ ಜಯದೇವ್, ದಿಯಾಳನ್ನು ಹೊಡೆದು ಸಾಯಿಸಿದ್ದಾನೆ. ಲಕ್ಷ್ಮೀಕಾಂತ್ ಕಿಡ್ನ್ಯಾಪ್ ವಿಷಯ ಸೆಕ್ಯುರಿಟಿಗೆ ಗೊತ್ತಿದ್ದರಿಂದ ಅವನನ್ನು ಕೂಡ ಸಾಯಿಸಿದ್ದನು. ಹೀಗಾಗಿ ಏನು ಮಾಡೋದು ಎಂದು ಅರಿಯದೆ ಅವನು ದಿಯಾ ಹಾಗೂ ಸೆಕ್ಯುರಿಟಿಯನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾನೆ.
ಈಗ ಅವನು ದಿಯಾ ಆಸ್ತಿಯನ್ನು ತಾನು ಇಟ್ಟುಕೊಂಡು, ಕಾರ್‌ನಲ್ಲಿ, ಹಳೇ ಖದರ್‌ನಲ್ಲಿ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಮಿಂಚುಳೇ ಗೌತಮ್ ನಿಜವಾದ ಮಗಳು ಎಂದು ಅರಿತು ಅವನು, ಇನ್ನೇನು ಮಾಡುತ್ತಾನೋ ಏನೋ! ಒಟ್ಟಿನಲ್ಲಿ ಲಕ್ಷ್ಮೀಕಾಂತ್ ಕಿಡ್ನ್ಯಾಪ್ ವಿಷಯ ಗೌತಮ್ ಮನೆಯವರಿಗೆ ಗೊತ್ತಾಗುವಾಗ, ಮಗಳ ವಿಷಯವೂ ಗೊತ್ತಾಗುತ್ತದೆ. ಆಗ ಗೌತಮ್ ಜೀವಕ್ಕೆ ಅಪಾಯ ಆಗಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಇರಲಿದೆ.
55
ಕೆಟ್ಟವರಿಗೆ ಒಳ್ಳೆಯ ಕಾಲ
ಇನ್ನೊಂದು ಕಡೆ ಕೆಟ್ಟವರಿಗೆ ಒಳ್ಳೆಯ ಕಾಲ ಎಂದು ಕಾಣುತ್ತದೆ. ಎಷ್ಟೇ ಅನ್ಯಾಯ ಮಾಡಿದರೂ, ಮೋಸ ಮಾಡಿದರೂ ಕೂಡ ಜಯದೇವ್‌ಗೆ ಮತ್ತೆ ಒಳ್ಳೆಯದಾಗುತ್ತಿದೆ. ಒಟ್ಟಿನಲ್ಲಿ ಮುಂದಾದರೂ ಜಯದೇವ್ ಮಾಡಿದ ಮೋಸಕ್ಕೆ ತಕ್ಕ ಶಿಕ್ಷೆ ಆಗಲಿದೆಯಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.