Bhagyalakshmi Serial ವಿದಾಯ: ಮೇಘನಾ ರಾಜ್​ ಜೊತೆ ನಟಿ ಸುಷ್ಮಾ ರಾವ್​ ಹೊಸ ಪಯಣ

Published : Jun 01, 2026, 12:17 PM IST

ಕಲರ್ಸ್ ಕನ್ನಡದ ಜನಪ್ರಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿ ಅಂತ್ಯಗೊಳ್ಳುತ್ತಿದ್ದು, ಅದರ ನಾಯಕಿ ಸುಷ್ಮಾ ಕೆ. ರಾವ್ ಅವರು 'ಕ್ವಾಟ್ಲೆ ಕಿಚನ್' ಎಂಬ ಹೊಸ ರಿಯಾಲಿಟಿ ಶೋನ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಸೀಸನ್‌ನಲ್ಲಿ ನಟಿ ಮೇಘನಾ ರಾಜ್ ತೀರ್ಪುಗಾರರಾಗಿ ಆಗಮಿಸುತ್ತಿರುವುದು ಮತ್ತೊಂದು ವಿಶೇಷ.

PREV
16
ಭಾಗ್ಯಲಕ್ಷ್ಮಿ ಅಂತ್ಯ

2022ರ ಅಕ್ಟೋಬರ್​ 10ರಿಂದ ಕಲರ್ಸ್​ ಕನ್ನಡದಲ್ಲಿ ಆರಂಭವಾಗಿದ್ದ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial)ಗೆ ಈಗ ಮೂರೂವರೆ ವರ್ಷ ಕಳೆದಿವೆ. ಆಗ ಮುಗಿಯತ್ತೆ, ಈಗ ಮುಗಿಯತ್ತೆ ಎಂದುಕೊಂಡಿದ್ದ ಸೀರಿಯಲ್​ ಕೊನೆಗೂ ಮುಗಿಯುವ ಹಂತಕ್ಕೆ ಬಂದಿದೆ. ಇದಾಗಲೇ ಅಂತಿಮ ಸಂಚಿಕೆಗಳು ಆರಂಭವಾಗಿದ್ದು, ಇದೇ 7 ಅರ್ಥಾತ್​ ಜೂನ್​ 7ರಂದು ಸೀರಿಯಲ್​ ಮುಗಿಯಲಿದೆ ಎನ್ನಲಾಗುತ್ತಿದೆ.

26
ಸುಷ್ಮಾ ಹೊಸ ಪ್ರಾಜೆಕ್ಟ್​

ಇದರ ನಡುವೆಯೇ, ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ (Sushma K. Rao) ಅವರು ಹೊಸ ಪ್ರಾಜೆಕ್ಟ್​ ಒಂದಕ್ಕೆ ಸಹಿ ಹಾಕಿರುವುದಾಗಿ ತಿಳಿಸಲಾಗಿದೆ. ಎಲ್ಲರಿಗೂ ತಿಳಿದಿರುವಂತೆ ಸುಷ್ಮಾ ಅವರು ಕೇವಲ ನಟಿ ಮಾತ್ರವಲ್ಲದೇ ಖ್ಯಾತ ಆ್ಯಂಕರ್​ ಕೂಡ ಹೌದು. ಇದಾಗಲೇ ಅವರು, ‘ಸೀರಿಯಲ್‌ ಸಂತೆ’, ‘ಅನುಬಂಧ ಅವಾರ್ಡ್ಸ್‌’ ಸೇರಿದಂತೆ ಕೆಲವು ರಿಯಾಲಿಟಿ ಷೋ, ಫಂಕ್ಷನ್​ಗಳಲ್ಲಿ ಆ್ಯಂಕರಿಂಗ್​ ಮಾಡಿದ್ದಾರೆ.

36
ಕ್ವಾಟ್ಲೆ ಕಿಚನ್' ನಿರೂಪಕಿ

ಅದೇ ರೀತಿ ಇದೀಗ ಅವರು, ಇನ್ನೊಂದು ರಿಯಾಲಿಟಿ ಷೋನಲ್ಲಿ ನಿರೂಪಕಿಯಾಗಲಿರುವುದಾಗಿ ತಿಳಿಸಿದ್ದಾರೆ. ಅದು 'ಕ್ವಾಟ್ಲೆ ಕಿಚನ್'(Kwatle Kitchen) ಷೋ. ಈ ಬಗ್ಗೆ ಅವರು, ಕಳೆದ ವಾರದ ‘ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್‌’ ಗ್ರ್ಯಾಂಡ್‌ ಫಿನಾಲೆಯಲ್ಲಿ ಅನೌನ್ಸ್‌ ಮಾಡಿದ್ದಾರೆ. ಇದರ ಪ್ರೊಮೋ ಕೂಡ ರಿಲೀಸ್​ ಆಗಿದೆ.

46
ಯಾರು ಬದಲಾದ್ರು?

ಅಂದಹಾಗೆ ಇಲ್ಲಿಯವರೆಗೆ ಈ ಷೋ ಅನ್ನು ಅನುಪಮಾ ಗೌಡ ಮತ್ತು ಕುರಿ ಪ್ರತಾಪ್​ ಅವರು ನಡೆಸಿಕೊಡುತ್ತಿದ್ದರು. ಈ ಬಾರಿ ಸುಷ್ಮಾ ಕೆ.ರಾವ್​ ಅವರು ಬರಲಿರುವ ಹಿನ್ನೆಲೆಯಲ್ಲಿ ಅನುಪಮಾ ಗೌಡ ಅವರು ಬೇರೆ ಪ್ರಾಜೆಕ್ಟ್​ಗೆ ಹೋಗ್ತಿರಬಹುದಾ ಎನ್ನುವ ಸಂದೇಹವಿದೆ. ಅಥವಾ ಕುರಿ ಪ್ರತಾಪ್​ ಇರುವುದಿಲ್ಲವೆ ಎನ್ನುವುದು ಕೆಲವರ ಪ್ರಶ್ನೆ. ಅದಕ್ಕೆ ಶೀಘ್ರದಲ್ಲಿಯೇ ಉತ್ತರ ಸಿಗಲಿದೆ.

56
ತೀರ್ಪುಗಾರರ ಬದಲು

ಅಷ್ಟಕ್ಕೂ, ಈ ಷೋನಲ್ಲಿ, ನಟಿ ಶ್ರುತಿ ಮತ್ತು ಖ್ಯಾತ ಶೆಫ್ ಕೌಶಿಕ್ ಅವರು ಇಲ್ಲಿಯವರೆಗೆ ತೀರ್ಪುಗಾರರಾಗಿದ್ದರು. ಈ ಬಾರಿ ನಟಿ ಮೇಘನಾ ರಾಜ್‌ ಅವರು ತೀರ್ಪುಗಾರರಾಗಲಿದ್ದಾರೆ. ಇದಕ್ಕೆ ಕಾರಣ ಕಲರ್ಸ್ ಕನ್ನಡ ಈಚೆಗೆ ಪ್ರೊಮೋ ರಿಲೀಸ್ ಮಾಡಿತ್ತು. ಅದರಲ್ಲಿ, ಕ್ವಾಟ್ಲೆ - ಕುಕ್‌ಗಳ ಮನದಲ್ಲಿ ಕಿಚ್ಚು ಹಚ್ಚೋಕೆ ಬರ್ತಿರೋ ಜಡ್ಜ್ ಯಾರು ಗೆಸ್ ಮಾಡಿ ಎಂದು ಮೇಘನಾ ಅವರ ಲುಕ್​ ಇರುವ ವಿಡಿಯೋ ಶೇರ್​ ಮಾಡಲಾಗಿತ್ತು. ಬಳಿಕ ಇನ್ನೊಂದು ಪ್ರೊಮೋದಲ್ಲಿ ಮೇಘನಾ ರಾಜ್​ ಅವರನ್ನು ನೋಡಬಹುದು.

66
ಯಾವಾಗ ಷೋ?

ಕ್ವಾಟ್ಲೆ ಕಿಚನ್​-2 ಷೋ ಶೀಘ್ರದಲ್ಲಿ ಬರಲಿರುವುದಾಗಿ ವಾಹಿನಿ ಅನೌನ್ಸ್​ ಮಾಡಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಇದು ಪ್ರಸಾರ ಆಗಲಿದೆ. ಇದರ ಕೆಲವು ಪ್ರೊಮೋಗಳನ್ನು ಇದಾಗಲೇ ವಾಹಿನಿ ಶೇರ್​ ಮಾಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories