Amruthadhaare Serial Minchu Real Name: ಅಮೃತಧಾರೆ ಧಾರಾವಾಹಿಯಲ್ಲಿ ಕೆಲ ವಾರಗಳಿಂದ ಮಿಂಚು ಎನ್ನುವ ಪಾತ್ರದ ಪರಿಚಯ ಆಗಿದೆ. ಇದ್ದಕ್ಕಿದ್ದಂತೆ ಗೌತಮ್‌ಗೆ ಮಿಂಚು ಎನ್ನುವ ಹುಡುಗಿ ಸಿಗುತ್ತಾಳೆ, ಅವನಿಗೆ ಕನೆಕ್ಟ್ ಆಗುತ್ತಾಳೆ. ಈಗ ಈ ಪಾತ್ರಧಾರಿ ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ಅಂದಹಾಗೆ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮಗ ಆಕಾಶ್ ದಿವಾನ್ ಪಾತ್ರದಲ್ಲಿ ದುಷ್ಯಂತ್ ಚಕ್ರವರ್ತಿ ಅವರು ನಟಿಸುತ್ತಿದ್ದಾರೆ. ದುಷ್ಯಂತ್ ರಿಯಲ್ ತಂದೆ ಸಿಲ್ಲಿ ಲಲ್ಲಿ ಆನಂದ್ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಪ್ಪ-ಮಗ ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
25
ಅಮೃತಧಾರೆ ಭಾಗ ಆಗಿರೋ ಮಿಂಚು ರಿಯಲ್ ತಂದೆ
ಈಗ ಮಿಂಚು ಪಾತ್ರಧಾರಿಯ ತಂದೆ ಕೂಡ ಅಮೃತಧಾರೆ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನೋದು ಅನೇಕರಿಗೆ ಗೊತ್ತೇ ಇಲ್ಲ. ಮಿಂಚು ರಿಯಲ್ ಹೆಸರು ಏನು ಎಂಬ ಬಗ್ಗೆ ಈ ಮಾಹಿತಿ ಇದೆ.
35
ಗೌತಮ್ ನಿಜವಾದ ಮಗಳಾ ಮಿಂಚು?
ಗೌತಮ್ ಈಗ ಮಿಂಚುವನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಗೌತಮ್ ಮಗ ಆಕಾಶ್ ಹಾಗೂ ಮಿಂಚು ಈಗ ಕ್ಲೊಸ್ ಫ್ರೆಂಡ್ಸ್ ಆಗಿದ್ದಾರೆ, ಮಿಂಚುವನ್ನು ಆಕಾಶ್ ಅಕ್ಕ ಎಂದೇ ಕರೆಯುತ್ತಾನೆ. ಮಿಂಚು ನಿಜಕ್ಕೂ ಗೌತಮ್ ಮಗಳಾಗಿರುವ ಸಾಧ್ಯತೆ ಜಾಸ್ತಿ ಇದೆ.
ಭೂಮಿ ಮಗಳಿಗೆ ಜನ್ಮ ಕೊಡುತ್ತಾಳೆ, ಆಗ ಜಯದೇವ್ ಆ ಮಗುವನ್ನು ಎತ್ತಿಕೊಂಡು ಓಡಿ ಹೋಗುತ್ತಾನೆ, ಕಾಡಿನಲ್ಲಿ ಎಸೆಯುತ್ತಾನೆ. ಆಮೇಲೆ ಆ ಮಗು ಎಲ್ಲಿ ಹೋಯ್ತು? ಏನಾಯ್ತು ಎಂದು ಯಾರಿಗೂ ಗೊತ್ತಾಗಿಲ್ಲ. ಇತ್ತೀಚೆಗೆ ಪೊಲೀಸರು, ಆ ಮಗು ಬದುಕಿದೆ, ಮಕ್ಕಳ ಕಳ್ಳಸಾಗಾಣಿಕೆಯಲ್ಲಿ ಸಿಲುಕಿಕೊಂಡಿದೆ ಎಂದಿದ್ದರು. ಅದಾದ ಬಳಿಕ ಮಿಂಚು ತನ್ನ ಸಾಕಿದ ಅಪ್ಪ-ಅಮ್ಮನ ಬಗ್ಗೆ ಕೂಡ ಗೌತಮ್ ಬಳಿ ಹೇಳಿಕೊಂಡಿದ್ದುಂಟು.
55
ನಿರ್ದೇಶಕ ಮಹೇಶ್ ರಾವ್ ಮಗಳು ನೈನಿಕಾ
ಮುಂದಿನ ದಿನಗಳಲ್ಲಿ ಗೌತಮ್ ನಿಜವಾದ ಮಗಳು ಮಿಂಚು ಎನ್ನೋದು ಗೊತ್ತಾಗಬಹುದು. ಅಂದಹಾಗೆ ಗೌತಮ್ ಮಗಳು ಮಿಂಚು ಪಾತ್ರಧಾರಿಯ ನಿಜವಾದ ಹೆಸರು ನೈನಿಕಾ. ಈ ಧಾರಾವಾಹಿಯ ನಿರ್ದೇಶಕ ಮಹೇಶ್ ರಾವ್ ಮಗಳೇ ನೈನಿಕಾ. ಮಹೇಶ್ ರಾವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಗಳ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.