ಬಿಗ್‌ಬಾಸ್ ಮನೆಯ ರಹಸ್ಯ ಬಾಗಿಲಿನ ಬಗ್ಗೆ ಗಿಲ್ಲಿ ನಟ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನು 'ಹಿತ್ತಲಿನ ಬಾಗಿಲು' ಎಂದು ಕರೆದಿದ್ದು, ಈ ಹಿಂದೆ ಅಶ್ವಿನಿ ಗೌಡ ಕೂಡ ಇದರ ಬಗ್ಗೆ ಮಾತನಾಡಿದ್ದರು. ಈ ವಾರದ ಬಿಬಿ ಪ್ಯಾಲೇಸ್ ಟಾಸ್ಕ್ ಮತ್ತು ಅತಿಥಿಗಳ ವರ್ತನೆಯ ಬಗ್ಗೆಯೂ ಲೇಖನದಲ್ಲಿ ಚರ್ಚಿಸಲಾಗಿದೆ.
ಬಿಗ್‌ಬಾಸ್ ಮನೆಯಲ್ಲಿರೋ ರಹಸ್ಯ ಬಾಗಿಲು ಬಗ್ಗೆ ಗಿಲ್ಲಿ ನಟ ಹೇಳಿದ್ದಾರೆ. ಸಾಮಾನ್ಯವಾಗಿ ಗಾರ್ಡನ್ ಏರಿಯಾದಲ್ಲಿರೋದು ಮುಖ್ಯದ್ವಾರವಾಗಿದೆ. ಅದರ ಪಕ್ಕವೇ ಮತ್ತೊಂದು ದ್ವಾರ ಇರೋದನ್ನು ಕಾಣಬಹುದಾಗಿದೆ. ಈ ಬಾಗಿಲ ಮೂಲಕವೇ ಐವರು ಅತಿಥಿಗಳು ಬಿಗ್‌ಬಾಸ್ ಮನೆಗೆ ಬಂದಿದ್ದರು.
25
ಸ್ಟೋರ್ ರೂಮ್, ಕನ್ಫೆಷನ್ ರೂಮ್
ಈ ಎರಡು ದ್ವಾರ ಹೊರತುಪಡಿಸಿದ್ರೆ ಸ್ಟೋರ್ ರೂಮ್, ಕನ್ಫೆಷನ್ ರೂಮ್‌ನಲ್ಲಿಯೋ ಹೊರಗೆ ಹೋಗಿಲು ಬಾಗಿಲು ಮಾಡಲಾಗಿರುತ್ತದೆ. ಆದ್ರೆ ಈ ಬಾಗಿಲುಗಳನ್ನು ವೀಕ್ಷಕರಿಗೆ ತೋರಿಸಲ್ಲ. ಈ ಹಿಂದಿನ ಸೀಸನ್‌ಗಳಲ್ಲಿ ಕ್ಯಾಪ್ಟನ್ ರೂಮ್ ಸಹ ಹೊರಗೆ ಹೋಗುವ ಬಾಗಿಲು ಹೊಂದಿರುತ್ತಿತ್ತು. ಈ ಎಲ್ಲಾ ಬಾಗಿಲುಗಳ ನಡುವೆ ಮತ್ತೊಂದು ಡೋರ್ ಇರೋದರ ಬಗ್ಗೆ ಗಿಲ್ಲಿ ನಟ ಹೇಳಿದ್ದಾರೆ.
35
ಯೆಲ್ಲೋ ಮತ್ತು ರೆಡ್ ಬೆಡ್‌ರೂಮ್
ಬಿಗ್‌ಬಾಸ್ ಮನೆ ಯೆಲ್ಲೋ ಮತ್ತು ರೆಡ್ ಬೆಡ್‌ರೂಮ್‌ಗಳನ್ನು ಹೊಂದಿದೆ. ಸದ್ಯ ರೆಡ್ ಬೆಡ್‌ರೂಮ್‌ನಲ್ಲಿ ಅತಿಥಿಗಳು ಉಳಿದುಕೊಂಡಿದ್ದಾರೆ. ಈ ಬೆಡ್‌ರೂಮ್‌ನಲ್ಲಿ ಮತ್ತೊಂದು ಬಾಗಿಲು ಇರೋದನ್ನು ಗಿಲ್ಲಿ ನಟ ಹೇಳಿದ್ದಾರೆ. ಅತಿಥಿಗಳ ಪೈಕಿ ಮಂಜು ಮತ್ತು ಗಿಲ್ಲಿ ನಟ ನಡುವೆ ತಮಾಷೆ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಗಿಲ್ಲಿ ನಟ ಅಲ್ಲಿರುವ ಬಾಗಿಲ ಬಗ್ಗೆ ಹೇಳುತ್ತಾರೆ.
ಈ ಹಿಂದಿನ ವಾರದಲ್ಲಿ ಅಶ್ವಿನಿ ಗೌಡ, ರೆಡ್ ಬೆಡ್‌ರೂಮ್ ಮೂರು ಬಾಗಿಲುಗಳನ್ನು ಹೊಂದಿದೆ. ಹಾಗಾಗಿ ಅಲ್ಲಿ ನೆಗೆಟಿವಿಟಿ ತುಂಬಿದೆ ಎಂದು ಗಿಲ್ಲಿ ಹೇಳುತ್ತಾರೆ ಅಂತ ವೀಕೆಂಡ್ ಸಂಚಿಕೆಯಲ್ಲಿಯೇ ಹೇಳಿದ್ದರು. ಗಿಲ್ಲಿ ನಟ ಇದನ್ನು ಹಿತ್ತಲಿನ ಬಾಗಿಲು ಎಂದು ಕರೆದಿದ್ದಾರೆ.
ಈ ವಾರದ ಬಿಬಿ ಪ್ಯಾಲೇಸ್ ಟಾಸ್ಕ್ ಬಗ್ಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತಿಥಿಗಳ ಪೈಕಿ ಮಂಜು ಮತ್ತು ರಜತ್ ವರ್ತನೆ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಧ್ರುವಂತ್ ಪದ ಬಳಕೆ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.