ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಒನ್ ಮ್ಯಾನ್ ಶೋ ಆಗಿದ್ದಾರೆ, ಗಿಲ್ಲಿ ಸುತ್ತವೇ ಇಡೀ ಮನೆ ಕಂಟೆಂಟ್ ಇರೋದು. ಗಿಲ್ಲಿ ನಟನ ಕಾಮಿಡಿ, ಕೌಂಟರ್ ಅಟ್ಯಾಕ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ಈಗ ರಜನಿಕಾಂತ್ ಅವರು ಹೊಗಳಿದ್ದಾರೆ ಎನ್ನೋದು ಸತ್ಯವೇ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಮಂಡ್ಯ ಮೂಲದವರು. ಉಳಿದ ಸ್ಪರ್ಧಿಗಳ ಜೊತೆ ಕಾಮಿಡಿ ಮಾಡೋದು, ಪ್ರತಿ ಮಾತಿಗೂ ಅಲ್ಲಿಯೇ ತಿರುಗಿ ಸರಿಯಾಗಿ ಉತ್ತರ ಕೊಡೋದು, ಅಷ್ಟೇ ಅಲ್ಲದೆ ಇದ್ದ ವಿಷಯವನ್ನು ನೇರವಾಗಿ ಹೇಳೋದರಲ್ಲಿ ಗಿಲ್ಲಿ ನಟ ಎತ್ತಿದ ಕೈ. ಇವರನ್ನು ಇಷ್ಟಪಡುವ ದೊಡ್ಡ ಬಳಗ ಸೃಷ್ಟಿ ಆಗಿದೆ.
25
ಜೈಲರ್ 2 ಸಿನಿಮಾ ರಿಲೀಸ್ ಯಾವಾಗ?
ಜೈಲರ್ 2 ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ. ಶೂಟಿಂಗ್ ಸಮಯದಲ್ಲಿ ರಜನಿಕಾಂತ್ ಅವರು ಕನ್ನಡ ಬಿಗ್ ಬಾಸ್ ಕುರಿತು ಮಾತನಾಡಿದ್ದಾರೆ ಎನ್ನುವ ಪೋಸ್ಟ್‌ವೊಂದು ವೈರಲ್ ಆಗಿದೆ. ಇದರ ಸತ್ಯಾ ಸತ್ಯತೆ ಏನು?
35
ಜೈಲರ್ ಸಿನಿಮಾದಲ್ಲಿರುವ ಶಿವರಾಜ್‌ಕುಮಾರ್
ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಅವರು Tiger Muthuvel Pandian ಎನ್ನುವ ಪಾತ್ರ ಮಾಡಿದ್ದರು. ಅಂದಹಾಗೆ ಜೈಲರ್ 2 ಸಿನಿಮಾದಲ್ಲಿ ಸಂತಾನಂ, ವಿದ್ಯಾ ಬಾಲನ್, ವಿಜಯ್ ಸೇತುಪತಿ, ರಮ್ಯಾ ಕೃಷ್ಣನ್, ಯೋಗಿ ಬಾಬು, ಶಿವ ರಾಜ್‌ಕುಮಾರ್, ಮೋಹನ್ ಲಾಲ್ ಅವರು ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ.
ಜೈಲರ್ 2 ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ ತಮಿಳು ಯುಟ್ಯೂಬರ್ ಒಬ್ಬ ನಿಮ್ಮ ನೆಚ್ಚಿನ ತಮಿಳು ಬಿಗ್ ಬಾಸ್ ಸ್ಪರ್ಧಿ ಯಾರು ಎಂದು ಪ್ರಶ್ನೆ ಮಾಡಿದ್ದಾರಂತೆ. ಅದಿಕ್ಕೆ ರಜನಿಕಾಂತ್ ಅವರು, "ಕ್ಷಮಿಸಿ, ನಾನು ಯಾವುದೇ ರಿಯಾಲಿಟಿ ಶೋ ನೋಡೋದಿಲ್ಲ. ಪುಸ್ತಕ ಅಷ್ಟೇ ನನ್ನ ಹವ್ಯಾಸ, ಆದರೆ ನನ್ನ ಧರ್ಮಪತ್ನಿ ಕನ್ನಡ ಬಿಗ್ ಬಾಸ್ ನೋಡುತ್ತಿರುತ್ತಾರೆ. ನನಗೆ ಗಿಲ್ಲಿ ಬಗ್ಗೆ ಅವನ ತಮಾಷೆ ವಿಡಿಯೋ ತೋರಿಸುತ್ತಾಳೆ. ತಯಂಬ ಎನರ್ಜಿಟಿಕ್ ಹುಡುಗ ಗಿಲ್ಲಿ, ನನಗೆ ಫೇವರಿಟ್ ಸ್ಪರ್ಧಿ ಎಂದು ರಜನೀಕಾಂತ್ ಹೇಳಿದ್ದಾರೆ ಎನ್ನಲಾದ ಪೋಸ್ಟ್‌ವೊಂದು ಈಗ ವೈರಲ್ ಆಗ್ತಿದೆ.
55
ಇದು ನಿಜಕ್ಕೂ ಸತ್ಯವೇ?
ಜೈಲರ್ 2 ಸಿನಿಮಾ ಶೂಟಿಂಗ್ ಟೈಮ್‌ನಲ್ಲಿ ರಜನಿಕಾಂತ್ ಅವರು ಯುಟ್ಯೂಬರ್‌ವೊಬ್ಬರಿಗೆ ಮಾತಿಗೆ ಸಿಗುತ್ತಾರೆ ಎನ್ನೋದು ಡೌಟ್ ಇದೆ. ರಜನಿಕಾಂತ್ ಸದಾ ಬ್ಯುಸಿ ಆಗಿರುತ್ತಾರೆ, ಅವರ ಸುತ್ತ ಸದಾ ಗನ್‌ಮ್ಯಾನ್, ಬೌನ್ಸರ್‌ಗಳು ಇರುತ್ತಾರೆ. ಹೀಗಿರುವಾಗ ಅವರು ಯುಟ್ಯೂಬರ್‌ವೊಬ್ಬರನ್ನು ಕಾಂಟ್ಯಾಕ್ಟ್ ಮಾಡೋದು ಕಷ್ಟ ಇದೆ. ರಜನಿಕಾಂತ್ ಪತ್ನಿ ಲತಾ ಅವರು ತಮಿಳುನಾಡಿನವರು, ಅಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರಿಗೆ ಕನ್ನಡ ಬರುತ್ತದೆಯೇ ಇಲ್ಲವೇ ಎನ್ನೊಂದು ಒಂದು ಕಡೆಯಾದರೆ, ಅವರು ಕನ್ನಡ ಬಿಗ್ ಬಾಸ್ ನೋಡುತ್ತಾರಾ ಇಲ್ಲವಾ ಎನ್ನೋದು ಇನ್ನೊಂದು ಪ್ರಶ್ನೆ. ಗಿಲ್ಲಿ ನಟ ಅವರ ಅಭಿಮಾನಿಗಳು ಸೃಷ್ಟಿ ಮಾಡಿದ ಪೋಸ್ಟ್ ಇದಾಗಿ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.