Amruthadhaare Serial:‌ ಜೈಲಿಂದ ಹೊರಬಂದು ಲೆಕ್ಕ ಚುಕ್ತಾ ಮಾಡಲು ರೆಡಿಯಾದ ಜಯದೇವ್; ಗೌತಮ್‌ಗೆ ಅಪಾಯ ತಪ್ಲಿಲ್ಲ!

Published : May 11, 2026, 09:07 AM IST

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ನನ್ನು ದಿಯಾ ಜೈಲಿಗೆ ಕಳಿಸಿದ್ದಳು. ಲಕ್ಷ್ಮೀಕಾಂತ್‌ ದೊಡ್ಡ ಮನಸ್ಸು ಮಾಡಿ, ಅವನಿಗೆ ಜಾಮೀನು ಕೊಡಿಸಿದನು. ಮೊದಲೇ ಕಷ್ಟದಲ್ಲಿರುವ ಜಯದೇವ್‌ಗೆ ಇನ್ನೊಂದಿಷ್ಟು ಕಷ್ಟ ಆಗಬಾರದು ಎಂದು ಅವನು ಲೆಕ್ಕಾಚಾರ ಹಾಕಿದ್ದನು. 

PREV
14
ಕಡಿಮೆ ಆಗದ ಜಯದೇವ್‌ ದ್ವೇಷ

ನನ್ನಲ್ಲಿ ದ್ವೇಷ ಹುಟ್ಟಿಸಿದವರು ನೀವುಗಳೇ. ನನ್ನ ಗುರಿ ತಲುಪೋವರೆಗೂ ನಾನು ಸುಮ್ಮನಿರೋದಿಲ್ಲ, ನನ್ನ ಗುರಿಗೆ ಯಾರೇ ಅಡ್ಡ ಬರಲೀ, ನೀನಾಗಲೀ, ನನ್ನ ತಾಯಿಯಾಗಲೀ, ಗೌತಮ್‌ ದಿವಾನ್‌ ಆಗಲೀ ಸುಮ್ಮನೆ ಇರೋದಿಲ್ಲ. ನಾನು ಅಂದುಕೊಂಡಿರೋದನ್ನು ಸಾಧಿಸಿಯೇ ತೀರುತ್ತೇನೆ, ಲೆಕ್ಕ ಚುಕ್ತ ಮಾಡೋವರೆಗೂ ನಾನು ಬಿಡೋದಿಲ್ಲ ಎಂದು ಜಯದೇವ್‌, ತನ್ನ ಮಾವನಿಗೆ ಹೇಳಿದ್ದಾನೆ.

24
ಜಯದೇವ್‌ ಗುರಿ ಏನು?

ಗೌತಮ್‌ ದಿವಾನ್‌ ಆಸ್ತಿಯನ್ನು ಮತ್ತೆ ವಶಕ್ಕೆ ಪಡೆಯೋದು ಇವನ ಗುರಿ. ಈಗ ಒಮ್ಮೆ ಪಡೆದು, ಅದನ್ನು ದಿವಾಳಿ ಮಾಡಿ ಮುಗೀತು, ಇವನು ನಂಬಿದ್ದ ದಿಯಾ ಬೇಬಿ ಕೂಡ ನೀರು ಕುಡಿಸಿದಳು. ಇನ್ನೊಂದು ಕಡೆ ಈಗ ಅವನ ಬಳಿ ದುಡ್ಡು ಇಲ್ಲ, ದಿವಾನ್‌ ಕುಟುಂಬ ಪ್ರತಿಷ್ಠೆ, ಗೌರವ ಕೂಡ ಉಳಿದುಕೊಂಡಿಲ್ಲ. ಹಾಗಾದರೆ ಮುಂದೆ ಏನು ಮಾಡುತ್ತಾನೆ?

34
ಸೀರಿಯಲ್‌ನಲ್ಲಿ ಏನು ಬೇಕಿದ್ರೂ ಆಗತ್ತೆ

ಇದು ಸೀರಿಯಲ್‌, ಒಂದೇ ಕ್ಷಣದಲ್ಲಿ ಶ್ರೀಮಂತ, ಬಡವನಾಗುತ್ತಾನೆ. ಬಡವ, ಶ್ರೀಮಂತನಾಗುತ್ತಾನೆ, ಸತ್ತವನು ಬದುಕುತ್ತಾನೆ, ಬದುಕಿದ್ದವನು ಸಾಯುತ್ತಾನೆ. ಇಲ್ಲಿ ಏನು ಬೇಕಿದ್ರೂ ಆಗಬಹುದು. ಜೀರೋ ಆಗಿರುವ ಜಯದೇವ್‌, ಮತ್ತೆ ಗೌತಮ್‌ ಕುಟುಂಬದ ಮೇಲೆ ದಾಳಿ ಮಾಡಲೂಬಹುದು.

44
ಏನು ಮಾಡುತ್ತಾನೆ?

ಸದ್ಯ ಗೌತಮ್‌ ಮಗಳ ಹುಡುಕಾಟದಲ್ಲಿದ್ದಾರೆ. ನೂರಕ್ಕೆ ನೂರರಷ್ಟು ಮಿಂಚು, ಗೌತಮ್-ಭೂಮಿಕಾ ಮಗಳೇ ಆಗಿರುತ್ತಾಳೆ. ಮಕ್ಕಳ ಸಾಗಾಣಿಕೆಯಲ್ಲಿ ಮಿಂಚು ಸಿಕ್ಕಿದ್ದಳು, ಆಮೇಲೆ ಅವಳನ್ನು ಅನಾಥಾಶ್ರಮಕ್ಕೆ ಬಿಡಲಾಯ್ತು, ಒಂದು ದಂಪತಿ ಮಿಂಚುಳನ್ನು ದತ್ತು ಪಡೆದರು, ಆಮೇಲೆ ಮಿಂಚು, ಗೌತಮ್‌ಗೆ ಸಿಕ್ಕಿದಳು. 

ಮಿಂಚುಳೇ, ಗೌತಮ್‌ ಮಗಳು ಎನ್ನೋ ಸತ್ಯದ ಜೊತೆಗೆ ಜಯದೇವ್‌ ಆಟ ಆಡಬಹುದು. ಜ್ಯೋತಿಷಿ ಹೇಳಿದಂತೆ ಇದೇ ವಿಚಾರದಲ್ಲಿ ಫೈಟ್‌ ಮಾಡಲು ಹೋಗಿ ಗೌತಮ್‌ ಜೀವಕ್ಕೆ ಅಪಾಯ ಬರಬಹುದು. ಒಟ್ಟಿನಲ್ಲಿ ಇದೇ ರೀತಿ ಆಗೋ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories