'ಅಮೃತಧಾರೆ' ಸೀರಿಯಲ್‌ನಲ್ಲಿ ಜೈದೇವ್ ತನ್ನ ಪತ್ನಿ ದಿಯಾಳನ್ನು ಕೊಲೆ ಮಾಡಿದ್ದಾನೆ. ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರಿಗೆ ನಿಜ ಜೀವನದಲ್ಲಿ ಮದುವೆ ಆಗಿದ್ದರಿಂದ, ಸೀರಿಯಲ್‌ನಲ್ಲಿ ಅವರ ಪಾತ್ರವನ್ನು ಈ ರೀತಿ ಅಂತ್ಯಗೊಳಿಸಲಾಗಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಜೈದೇವನಿಗೆ ಮೋಸ ಮಾಡಿದ ಪತ್ನಿ ದಿಯಾಳನ್ನು ಸಾಯಿಸಿಬಿಟ್ಟಿದ್ದಾನೆ ಜೈದೇವ್. ಅವಳ ಆಸ್ತಿಯ ಬಗ್ಗೆ ತಿಳಿದುಕೊಂಡು ಆಕೆಯನ್ನು ಸಾಯಿಸಲು ಪ್ಲ್ಯಾನ್ ಹಾಕಿದ್ದ. ಆದರೆ, ದುಡ್ಡು ಎಲ್ಲಿದೆ ತಿಳಿದುಕೊಳ್ಳುವ ಮೊದಲೇ ಆಕೆಯ ಡ್ರಿಂಕ್ಸ್ನಲ್ಲಿ ಏನೋ ಮಿಕ್ಸ್ ಮಾಡಿ ಸಾಯಿಸಿಬಿಟ್ಟಿದ್ದಾನೆ.
25
ರಿಯಲ್ ಲೈಫ್ ಮದುವೆ
ಅಷ್ಟಕ್ಕೂ ದಿಯಾ ಪಾತ್ರ ಈ ರೀತಿ ಎಂಡ್ ಮಾಡಲು ಕಾರಣವೂ ಇದೆ. ಅದೇನೆಂದರೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ರಿಯಲ್ ಲೈಫ್ನಲ್ಲಿ ಮದುವೆಯಾಗಿದ್ದಾರೆ. ಇದೇ ಮೇ 14ರಂದು ಹಳೆಬೀಡಿನಲ್ಲಿ ಮದುವೆಯಾಗಿರುವ ನಟಿ ಸದ್ಯ ಹನಿಮೂನ್ ಮೂಡ್ನಲ್ಲಿ ಇದ್ದರೆ, ಇತ್ತ ಸೀರಿಯಲ್‌ನಲ್ಲಿ ಸಾಯಿಸಿದ್ದಾರೆ.
35
ಸೀರಿಯಲ್ಗೆ ಕೈಕೊಡದ ನಟಿ
ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ, ಅರ್ಧಕ್ಕೆ ಬಿಡದೇ ಪಾತ್ರವನ್ನು ಅಂತ್ಯ ಮಾಡಿಕೊಂಡೇ ನಟಿ ಹೋಗಿರುವುದು ಶ್ಲಾಘನಾರ್ಹವಾಗಿದೆ. ಸೀರಿಯಲ್ ನಟ-ನಟಿಯರು ಸಾಮಾನ್ಯವಾಗಿ ಮದುವೆಯೆಂದು ಬಂದಾಗ, ಅರ್ಧಕ್ಕೆ ಕೈಕೊಟ್ಟು ಹೋಗುವುದು ಇದೆ. ಆದರೆ ಕೆಲವು ನಟ-ನಟಿಯರು ಮದುವೆಯ ಸಂಭ್ರಮದ ನಡುವೆಯೇ ತಮ್ಮನ್ನು ನಂಬಿಕೊಂಡಿರುವ ಸೀರಿಯಲ್ನವರಿಗೆ ಕೈಕೊಡದೇ ಪಾತ್ರ ಮುಂದುವರೆಸುತ್ತಾರೆ. ಉದಾಹರಣೆಗೆ ಲಕ್ಷ್ಮೀ ನಿವಾಸ ಸೀರಿಯಲ್ ಚಂದನಾ ಅವರು ಕೂಡ ಮದುವೆಯಾಗಿದ್ದರೂ ಕೈಕೊಡದೇ ಅದೇ ಪಾತ್ರದಲ್ಲಿ ಮುಂದುವರೆದಿದ್ದಾರೆ.
ಅದೇ ರೀತಿ ಇದೀಗ ನಟಿ ಶ್ವೇತಾ ಗೌಡ ಪಾತ್ರವನ್ನು ಸಾಯಿಸುವ ಮೂಲಕ ಅಂತ್ಯ ಮಾಡಲಾಗಿದೆ. ಶ್ವೇತಾ ಅವರದ್ದು ಅರೇಂಜ್ಡ್ ಮ್ಯಾರೇಜ್. ಪತಿಯ ಹೆಸರು ಸುನೀಲ್. ಇಬ್ಬರೂ ಒಂದೇ ಊರಿನವರು. ತಂದೆಗೆ ಅನಾರೋಗ್ಯ ಆಗಿ ಹಾಸನಕ್ಕೆ ಹೋಗಿ ಬೆಡ್ ರೆಸ್ಟ್ ಮಾಡುವ ಯೋಚನೆಯಲ್ಲಿದ್ದರು. ಆ ವೇಳೆ ಸುನೀಲ್ ಕುಟುಂಬದ ಪರಿಚಯವಾಗಿ, ಮದುವೆ ಫಿಕ್ಸ್ ಆಗಿದೆ ಎಂದು ಶ್ವೇತಾ ಹೇಳಿದ್ದಾರೆ.
55
ಓದುವ ಆಸೆ
ಶ್ವೇತಾ ಗೌಡ ಅವರಿಗೆ ಈಗ ಮದುವೆ ಆಗೋ ಆಸೆ ಇರಲಿಲ್ಲ. ಇನ್ನೂ ಓದಬೇಕು ಎನ್ನುವ ಆಸೆ ಇತ್ತು. ಆದರೆ ಸುನೀಲ್ ಅವರನ್ನು ನೋಡಿದ ಮೇಲೆ ರಿಜೆಕ್ಟ್ ಮಾಡಲು ಯಾವುದೇ ನೆಪಗಳೇ ಇರಲಿಲ್ಲವಂತೆ. ಈಗ ಶ್ವೇತಾ ಗೌಡ ಅವರು ಮದುವೆ ಆದ್ಮೇಲೆ ಕೂಡ ಓದುವ ಯೋಚನೆಯಲ್ಲಿದ್ದಾರೆ ಎಂದು ದಿಯಾ ಹೇಳಿದ್ದರು. ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಪಾತ್ರ ಮುಗಿಸಿ ಹೋದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.