Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಹಾಗೂ ಭೂಮಿಕಾ ಸದಾಶಿವ ಅವರಿಗೆ ಹುಟ್ಟಿದ ಮಗುವನ್ನು ಜಯದೇವ್ ಕಿಡ್ನ್ಯಾಪ್ ಮಾಡಿ ಕಾಡಿನಲ್ಲಿ ಎಸೆದಿದ್ದನು. ಈಗ ಆ ಮಗು ಸಿಕ್ಕಿದೆಯಂತೆ. ಹೌದು, ಹೊಸ ಪ್ರೋಮೋ ರಿಲೀಸ್ ಆಗಿದೆ.
ಈ ಹಿಂದೆ ಗೌತಮ್ ಹಾಗೂ ಭೂಮಿಕಾಗೆ ಹೆಣ್ಣು ಮಗು ಹುಟ್ಟಿತ್ತು. ಆ ಮಗು ಹುಟ್ಟಿದ ತಕ್ಷಣ ಜಯದೇವ್ ಆ ಮಗುವನ್ನು ಕಿಡ್ನ್ಯಾಪ್ ಮಾಡಿ ಕಾಡಿನಲ್ಲಿ ಎಸೆದಿದ್ದನು. ಈ ಮಗುವಿಗೋಸ್ಕರ ಗೌತಮ್ ತುಂಬ ಕಷ್ಟಪಟ್ಟರೂ ಪ್ರಯೋಜನವೇ ಆಗಿಲ್ಲ. ಎಷ್ಟು ಹುಡುಕಿದರೂ ಆ ಮಗು ಸಿಕ್ಕಿಲ್ಲ.
24
ಗೌತಮ್ ಮಗಳು ಸಿಕ್ಕಿದಳು
ಡ್ರೈವರ್ ಆಗಿದ್ದಾಗ ಗೌತಮ್‌ಗೆ ಒಂದು ಮಗು ಸಿಕ್ಕಿತ್ತು. ಆ ಮಗುವನ್ನು ತನ್ನ ಮಗಳು ಎಂದು ಗೌತಮ್ ಸಾಕುತ್ತಿದ್ದಾನೆ. ಅಖಿಲಾಂಡೇಶ್ವರಿ ಸಹಾಯದಿಂದ ಈಗ ಗೌತಮ್ ಮಗಳು ಯಾರೆಂದು ಸಿಕ್ಕಿದ್ದಾಳೆ. ಇನ್ನು ಗೌತಮ್‌ಗೆ ಈ ವಿಷಯ ಸಿಗಬೇಕು ಅಷ್ಟೇ.
34
ಗೌತಮ್ ಮಗಳ ವಿಷಯ ಗೊತ್ತಾಯ್ತು!
ಅಖಿಲಾಂಡೇಶ್ವರಿ, ಗೌತಮ್ ಆಫೀಸ್‌ಗೆ ಫೋನ್ ಮಾಡಿದಾಗ ಅವನು ರಿಸೀವ್ ಮಾಡಿಲ್ಲ. ಅದರ ಬದಲಿಗೆ ಲಕ್ಷ್ಮೀಕಾಂತ್ ಮಾವ ಫೋನ್ ರಿಸೀವ್ ಮಾಡಿದ್ದಾನೆ, ಅವನಿಗೆ ಗೌತಮ್ ಮಗಳ ವಿಷಯ ಗೊತ್ತಾಗಿದೆ. ಈಗ ಈ ವಿಷಯ ಗೌತಮ್ ಕಿವಿವರೆಗೂ ತಲುಪುತ್ತಾ ಎಂಬ ಪ್ರಶ್ನೆ ಕಾಡಿದೆ.
ಒಂದು ಕಡೆ ಜಯದೇವ್, ದಿಯಾ ಮನೆಯಲ್ಲಿ ಕಷ್ಟಪಡ್ತಿದ್ದಾನೆ ಎಂದು ಮಾವ ಬೇಸರ ಮಾಡಿಕೊಂಡಿದ್ದಾನೆ. ಅವನ ಜೀವನಕ್ಕೆ ಏನಾದರೂ ಸಹಾಯ ಮಾಡಬೇಕು ಎಂದು ಲಕ್ಷ್ಮೀಕಾಂತ್ ಅಂದುಕೊಂಡಿದ್ದಾನೆ. ಈಗ ಮಗುವಿನ ವಿಷಯ ಗೊತ್ತಾಗಿದೆ. ಈಗ ಮಗುವಿನ ಹುಡುಕಾಟದ ವಿಷಯ ಜಯದೇವ್‌ಗೆ ಗೊತ್ತಾಗಿ, ಅವನು ಏನಾದರೂ ತೊಂದರೆ ಕೊಟ್ಟರೂ ಕೊಡಬಹುದು. ಆ ಮಗುವನ್ನು ಕಾಪಾಡಲು ಹೋಗಿ ಗೌತಮ್‌ಗೆ ಏನಾದರೂ ಆದರೂ ಆಗಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.