ಬ್ಲಡಿ ಮದರ್ ಸೆಂಟಿಮೆಂಟ್ ಕ್ಲೋಸ್ ಮಾಡಿದ್ದ ಜೈದೇವ್‌ಗೆ ಆಘಾತ; ಕೆಡಿ ನೋಡಿ ಪೊಲೀಸರೇ ಕಂಗಾಲು

Published : May 08, 2026, 08:03 PM IST

ದಿಯಾ ಮನೆ ಮುಂದೆ ಗಲಾಟೆ ಮಾಡಿ ಜೈಲು ಸೇರಿದ ಜೈದೇವ್, ಸಹಾಯಕ್ಕಾಗಿ ತಾಯಿ ಶಕುಂತಲಾಗೆ ಕರೆ ಮಾಡುತ್ತಾನೆ. ಆದರೆ, ಶಕುಂತಲಾ ಅವನನ್ನು ಗುರುತಿಸಲು ನಿರಾಕರಿಸಿ ಕೈಬಿಡುತ್ತಾಳೆ, ಇದರಿಂದಾಗಿ ಪೊಲೀಸರು ಜೈದೇವ್‌ಗೆ ಹಿಗ್ಗಾಮುಗ್ಗಾ ಥಳಿಸುತ್ತಾರೆ.

PREV
15
ದಿಯಾ ಬೇಬಿ ಜೊತೆ ಕಿರಿಕ್

ದಿಯಾ ಬೇಬಿ ಮನೆ ಮುಂದೆ ಕಿರಿಕ್ ಮಾಡಿಕೊಂಡ ಜೈದೇವ್, ಜೈಲು ಸೇರಿದ್ದಾನೆ. ಪೊಲೀಸ್ ಸ್ಟೇಶನ್‌ಗೆ ಬರುತ್ತಿದ್ದಂತೆ ನಾನು ಯಾರು ಅಂತ ನಿಮಗೆ ಗೊತ್ತಿಲ್ಲ. ಗೌತಮ್ ದಿವಾನ್ ಹೆಸರು ಕೇಳಿದ್ದಿರಲ್ಲಾ? ಅವನ ತಮ್ಮನೇ ಈ ಜೈದೇವ್. ದಿಯಾ ಕೊತೆ ಏಳೆಂಟು ವರ್ಷ ಸಂಸಾರ ಮಾಡಿದ್ದೇನೆ. ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ಪೊಲೀಸರ ಮುಂದೆ ಕೂಗಾಡಿದ್ದಾನೆ.

25
ಫೋನ್ ರಿಸೀವ್ ಮಾಡಿದ ಶಕುಂತಲಾ

ಜೈಲಿನಿಂದ ಹೊರಗಡೆ ಬರಲು ದಿವಾನ್ ಮನೆಗೆ ಪೊಲೀಸರಿಂದ ಜೈದೇವ್ ಕಾಲ್ ಮಾಡಿಸಿದ್ದಾನೆ. ಪೊಲೀಸರ ಕರೆಯನ್ನು ಶಕುಂತಲಾ ರಿಸೀವ್ ಮಾಡಿದ್ದಾಳೆ. ಪೊಲೀಸರು ಶಕುಂತಲಾ ಅಂತ ಹೇಳುತ್ತಿದ್ದಂತೆ ಜೈದೇವ್, ಕೂಡಲೇ ಮಾಮ್ ಮಾಮ್ ಅಂತ ಮಾತನಾಡಿಸಿ ಫೋನ್‌ನಲ್ಲಿ ಜೈದೇವ್, ತನ್ನ ಸ್ಥಿತಿಯನ್ನು ವಿವರಿಸಿದ್ದಾನೆ.

35
ಮಗನ ಸಹಾಯಕ್ಕೆ ಬರಲಿಲ್ಲ ಶಕುಂತಲಾ

ಜೈದೇವ್ ಧ್ವನಿ ಕೇಳುತ್ತಿದ್ದಂತೆ ಶಕುಂತಲಾ ಮುಂದೆ ಹಿಂದಿನ ಘಟನೆಯೆಲ್ಲವೂ ಕಣ್ಮುಂದೆ ಬಂದಿದೆ. ನಂತರ ಅವನು ಯಾರು ಅಂತ ನಮಗೆ ಗೊತ್ತಿಲ್ಲ. ನನ್ನ ಹೆಸರು ಬಳಸಿಕೊಂಡು ಜೈಲಿನಿಂದ ಹೊರಗೆ ಬರಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿ ಶಕುಂತಲಾ ಕೈ ತೊಳೆದುಕೊಂಡಿದ್ದಾಳೆ. ಶಕುಂತಲಾ ಮಾತು ಕೇಳುತ್ತಿದ್ದಂತೆ ಜೈದೇವ್‌ ಕೆನ್ನೆಗೆ ಪೊಲೀಸರು ಏಟು ನೀಡಿದ್ದಾರೆ.

45
ಲಾಠಿ ಏಟು

ಪೊಲೀಸರು ಹೊಡೆಯುತ್ತಿದ್ದಂತೆ ಕೋಪಗೊಂಡ ಜೈದೇವ್, ನೀವು ಲಂಚ ತೆಗೆದುಕೊಂಡು ಈ ರೀತಿ ಮಾಡ್ತಿದ್ದೀರಿ. ಮಾಮ್ ಹಾಗೆ ಹೇಳಲು ಸಾಧ್ಯವೇ ಇಲ್ಲ. ನಾನು ಆಕೆಯ ಪ್ರೀತಿಯ ಮಗ. ನಿಮ್ಮನ್ನು ನೀರು-ನೆರಳಿಲ್ಲದ ಸ್ಥಳಕ್ಕೆ ಟ್ರಾನ್ಸಫರ್ ಮಾಡಸ್ತೀನಿ ಅಂತ ಜೈದೇವ್ ಹೇಳುತ್ತಿದ್ದಂತೆ ಪೊಲೀಸರು ಒಳಗೆ ಹೋಗಿ ಲಾಠಿ ಏಟು ನೀಡಲು ಆರಂಭಿಸುತ್ತಾರೆ.

55
ಬ್ಲಡಿ ಮದರ್ ಸೆಂಟಿಮೆಂಟ್‌

ದಿಯಾ ಜೊತೆ ಸೇರಿಕೊಂಡು ಬ್ಲಡಿ ಮದರ್ ಸೆಂಟಿಮೆಂಟ್‌ ಕ್ಲೋಸ್ ಮಾಡಿದ್ದ ಜೈದೇವ್‌ಗೆ ತಾಯಿ ಶಕುಂತಲಾ ಶಾಕ್ ನೀಡಿದ್ದಾಳೆ. ಮತ್ತೊಂದೆಡೆ ಪೊಲೀಸರು ಜೈದೇವ್‌ನ ಬಟ್ಟೆ ಕಳಚಿ ಥಳಿಸಿದ್ದಾರೆ. ಸೆಲ್‌ನಿಂದ ಹೊರಬಂದ ಪೊಲೀಸರು, ಎಷ್ಟೇ ಹೊಡೆದ್ರೂ ಒಂದು ಹನಿ ಕಣ್ಣೀರು ಬರಲಿಲ್ಲವಾ ಎಂದು ಶಾಕ್ ಆಗಿದ್ದಾರೆ. ಅಂತಿಮವಾಗಿ ಜೈಲಿನಲ್ಲಿ ಕುಳಿತು ವಿಕೃತವಾಗಿ ನಗುತ್ತಿರೋ ಜೈದೇವ್‌ನನ್ನು ಇಂದಿನ ಸಂಚಿಕೆಯಲ್ಲಿ ತೋರಿಸಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories