Amruthadhaare: ಗೌತಮ್​-ಭೂಮಿನಾ ಅಜ್ಜಿ ಒಂದು​ ಮಾಡ್ತಾಳೆ ಅಂದ್ಕೊಂಡ್ರೆ ಆಗಿದ್ದೇ ಬೇರೆ! ಜೈದೇವ್ ಕೈಗೆ ಬಂತು ಆಸ್ತಿ

Published : Dec 09, 2025, 09:14 PM IST

'ಅಮೃತಧಾರೆ' ಧಾರಾವಾಹಿಯಲ್ಲಿ ಜೈದೇವ್ ಆಸ್ತಿ ಕಬಳಿಸಲು ಹೊಸ ಪ್ಲ್ಯಾನ್ ಮಾಡಿದ್ದಾನೆ. ಗೌತಮ್-ಭೂಮಿಕಾರನ್ನು ಒಂದು ಮಾಡಲು ಬಂದ ಲವ್ ಅಜ್ಜಿಗೆ ನಿದ್ದೆ ಮಾತ್ರೆ ನೀಡಿ, ಆಕೆಯ ಸಂಪೂರ್ಣ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಇದು ಅಜ್ಜಿಯ ನಾಟಕವೇ ಅಥವಾ ಜೈದೇವನ ಕುತಂತ್ರವೆ?  

PREV
17
ಜೈದೇವ್​ ಪ್ಲ್ಯಾನ್​

ಇದೀಗ ಅಮೃತಧಾರೆ (Amruthadhaare)ಯಲ್ಲಿ, ಜೈದೇವ ಹೇಗಾದರೂ ಮಾಡಿ ಸಂಪೂರ್ಣ ಆಸ್ತಿಯನ್ನು ಹೊಡೆಯುವ ಪ್ಲ್ಯಾನ್​ ಹಾಕುತ್ತಿದ್ದಾನೆ. ಮಲ್ಲಿಯಿಂದ ಆಸ್ತಿ ಕಬಳಿಸುವ ಆತನ ಪ್ರಯತ್ನವೆಲ್ಲವೂ ಠುಸ್​ ಆಗಿದೆ.

27
ಲವ್​ ಅಜ್ಜಿಗೆ ಆಗಿದ್ದೇ ಬೇರೆ!

ಅದೇ ವೇಳೆ ಅಜ್ಜಿಯ ಎಂಟ್ರಿಯಾಗಿದೆ. ಲವ್​ ಅಜ್ಜಿ ಎಂದೇ ಫೇಮಸ್​ ಆಗಿರೋ ಈ ಅಜ್ಜಿ ಈ ಹಿಂದೆ ಹಾವು-ಮುಂಗುಸಿಯಂತಿದ್ದ ಭೂಮಿಕಾ ಮತ್ತು ಗೌತಮ್​ ನಡುವೆ ಲವ್​ ಶುರುವಾಗುವ ಹಾಗೆ ಮಾಡಿದ್ದಳು. ಈಗಲೂ ಹಾಗೆಯೇ ಮಾಡ್ತಾಳೆ ಎಂದೇ ಅಂದುಕೊಂಡಾಗಿತ್ತು.

37
ಒಂದು ಮಾಡೇ ಇಲ್ಲ!

ಏನಾದ್ರೂ ಸರಿ, ದೂರ ದೂರ ಆಗಿರೋ ಗೌತಮ್​ ಮತ್ತು ಭೂಮಿಕಾನ ಒಂದು ಮಾಡ್ತೇನೆ ಎಂದಾಗಿ ಅಮೃತಧಾರೆ ಫ್ಯಾನ್ಸ್​ ಖುಷಿ ಪಟ್ಟಿದ್ದೇ ಪಟ್ಟಿದ್ದು.

47
ಜೈದೇವ್​ಗೆ ಆಸ್ತಿ

ಆದರೆ ಇಲ್ಲಿ ಆಗಿದ್ದೇ ಬೇರೆ. ಭೂಮಿಕಾ ಮತ್ತು ಗೌತಮ್​ನ ಒಂದು ಮಾಡೋದು ಬಿಟ್ಟು ಇದ್ದ ಬಿದ್ದ ಆಸ್ತಿಯನ್ನೆಲ್ಲಾ ಜೈದೇವನಿಗೆ ಬರೆದುಕೊಟ್ಟಿದ್ದಾಳೆ ಈ ಅಜ್ಜಿ!

57
ನಿದ್ದೆ ಮಾತ್ರೆ

ಹಾಗೆಂದು ಅವಳೇನು ಸುಮ್ಮನೇ ಬರೆದು ಕೊಡಲಿಲ್ಲ. ಆದರೆ ಕುತಂತ್ರಿ ಜೈದೇವ, ಅಜ್ಜಿಯ ಜ್ಯೂಸ್​ನಲ್ಲಿ ನಿದ್ದೆ ಬರುವ ಮಾತ್ರೆ ಕೊಡಿಸಿ ಆಕೆ ಮಲಗಿದ ಮೇಲೆ ಎಲ್ಲಾ ಆಸ್ತಿಯ ಪೇಪರ್​ಗೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಂಡಿದ್ದಾನೆ!

67
ನಾಟಕನಾ, ನಿಜನಾ?

ಅಜ್ಜಿ ನಿಜಕ್ಕೂ ಮಲಗಿದ್ದಾಳಾ ಅಥವಾ ನಾಟಕವಾಡ್ತಿದ್ದಾಳಾ ಎನ್ನೋದು ಮುಖ್ಯವಾಗಿದ್ರೂ, ಈ ಪೇಪರ್​ಗೆ ಅಜ್ಜಿಯ ಸಹಿಯಂತೂ ಬಿದ್ದಾಗಿದೆ. ಅಜ್ಜಿ ನಾಟಕ ಮಾಡಿ ಜೈದೇವನ ಕುತಂತ್ರ ಬಯಲು ಮಾಡಿದ್ರೆ ಸಾಕಪ್ಪಾ ಅಂತಿದ್ದಾರೆ ವೀಕ್ಷಕರು.

77
ಮುಂದೇನಾಗತ್ತೆ?

ಹಾಗಿದ್ರೆ ಮುಂದೇನಾಗುತ್ತೆ? ಅಜ್ಜಿಯ ಆಸ್ತಿಯ ಜೊತೆ ಜೈದೇವ್​ ಪರಾರಿಯಾಗ್ತಾನಾ ಅಥ್ವಾ ಅಜ್ಜಿ ಕೈಯಲ್ಲಿ ಸಿಕ್ಕಿ ಬೀಳ್ತಾನಾ ಎನ್ನುವುದನ್ನು ಕಾದು ನೋಡಬೇಕಿದೆ.

Read more Photos on
click me!

Recommended Stories