Amruthadhaare Serial: ಭೂಮಿಕಾ ಪುತ್ರಿ ಈ ಬಾಲಕಿನಾ? ಹಾಗಿದ್ರೆ ಮಿಂಚು? DNA ಪರೀಕ್ಷೆ ಮಾಡಿಸಲು ಫ್ಯಾನ್ಸ್​ ಒತ್ತಾಯ

Published : Jan 19, 2026, 01:09 PM IST

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ತಮ್ಮ ಕಳೆದುಹೋದ ಮಗಳಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ. ಹಲವು ಮಕ್ಕಳ ಡಿಎನ್​ಎ ಪರೀಕ್ಷೆ ವಿಫಲವಾದ ನಂತರ, ಪೊಲೀಸರು ಇದೀಗ ಮತ್ತೊಬ್ಬ ಬಾಲಕಿಯನ್ನು ತೋರಿಸಿದ್ದು, ಆಕೆಯೇ ನಿಜವಾದ ಮಗಳೇ ಎಂಬ ಕುತೂಹಲ ಮೂಡಿದೆ.

PREV
15
ಸಿಗಲಿಲ್ಲ ಪುತ್ರಿ

ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲದ ಹಂತ ತಲುಪಿದೆ. ಮಗಳ ಹುಡುಕಾಟಕ್ಕಾಗಿ ಭೂಮಿಕಾ ಮತ್ತು ಗೌತಮ್​ ಒಂದಾಗಿದ್ದಾರೆ. ಆದರೆ ಮಗಳು ಮಾತ್ರ ಇದುವರೆಗೂ ಸಿಗಲಿಲ್ಲ.

25
ಅನಾಥ ಮಕ್ಕಳ ಹುಡುಕಾಟ

ಇದಾಗಲೇ ಗೌತಮ್​ ಎಷ್ಟೋ ಅನಾಥ ಮಕ್ಕಳನ್ನು ದತ್ತು ಪಡೆದವರ ಮನೆಗೆ ಹೋಗಿ ಬಂದಾಗಿದೆ. ಡಿಎನ್​ಎ ಪರೀಕ್ಷೆ ಮಾಡಲಾಗಿದೆ. ಆದರೂ ಯಾರದ್ದೂ ಮ್ಯಾಚ್​ ಆಗಿರಲಿಲ್ಲ. ಈಗ ಅವನ ಜೊತೆ ಭೂಮಿಕಾ ಸಾಥ್​ ಕೊಟ್ಟಿದ್ದಾಳೆ.

35
ಇನ್ನೊಬ್ಬ ಬಾಲಕಿ

ಇದೀಗ, ಇನ್ನೊಬ್ಬರ ಮನೆಗೆ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇವಳೇ ಆ ಬಾಲಕಿ ಎಂದು ಹುಡುಗಿಯನ್ನು ತೋರಿಸಿದ್ದಾರೆ. ಹಾಗಿದ್ದರೆ ಈಕೆನೇ ಗೌತಮ್​ ಮತ್ತು ಭೂಮಿಕಾ ರಿಯಲ್​ ಮಗಳಾ ಎನ್ನುವ ಕುತೂಹಲ ಸದ್ಯಕ್ಕಿದೆ.

45
ಡಿಎನ್​ಎ ಪರೀಕ್ಷೆ

ಅದು ಡಿಎನ್​ಎ ಪರೀಕ್ಷೆಯಿಂದ ಸಾಬೀತಾಗಬೇಕಿದೆ ಅಷ್ಟೇ. ಈ ಬಗ್ಗೆ ನೊಂದುಕೊಂಡಿರುವ ಭೂಮಿಕಾಗೆ ಗೌತಮ್​ ಸಮಾಧಾನ ಮಾಡಿದ್ದಾನೆ. ತಾಳ್ಮೆಯಿಂದ ಇರಬೇಕು. ಇಂಥ ಅದೆಷ್ಟೋ ಘಟನೆ ನಾನು ಕಂಡಿದ್ದೇನೆ ಎಂದಿದ್ದಾನೆ.

55
ಯಾರೀಕೆ?

ಈಗ ಗೌತಮ್​ ಮನೆಯಲ್ಲಿ ಇರುವ ಮಿಂಚುನೇ ಇವರ ಮಗಳು ಎಂದೇ ಸೀರಿಯಲ್​ ಪ್ರೇಮಿಗಳು ಹೇಳ್ತಿದ್ದಾರೆ. ಆದರೆ ವಿಚಿತ್ರ ಎಂದರೆ ಆಕೆಯ ಡಿಎನ್​ಎ ಟೆಸ್ಟ್​ ಯಾಕೆ ಮಾಡಿಸಿಲ್ಲ ಎಂದು ಕೇಳುತ್ತಿದ್ದಾರೆ. ಒಂದು ವೇಳೆ ಈಗ ನೋಡಿರೋ ಬಾಲಕಿನೇ ಮಗಳಾಗಿರಬಹುದು ಎಂದೂ ಕೆಲವರು ಹೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories