BBK 12: ಕಾವ್ಯ ಶೈವ ಜೊತೆ ಕೊನೆಗೂ ಮನಸ್ತಾಪ ಬಗೆಹರಿಯಲಿಲ್ಲ ಯಾಕೆ? ಸತ್ಯ ಬಿಚ್ಚಿಟ್ಟ ರಕ್ಷಿತಾ ಶೆಟ್ಟಿ Interview

Published : Jan 19, 2026, 12:41 PM IST

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಭಾಗವಹಿಸಿ, ರನ್ನರ್‌ ಅಪ್‌ ಆಗಿದ್ದಾರೆ. ಕಾವ್ಯ ಶೈವ ಅವರು ಫಿನಾಲೆಯಲ್ಲಿ ಇರೋಕೆ ಅರ್ಹರಿಲ್ಲ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು. ಈ ಬಗ್ಗೆ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. 

PREV
15
ತಪ್ಪು ಮಾಡಿದೀನಿ

“ರನ್ನರ್‌ ಅಪ್‌ ಆಗಿದ್ದಕ್ಕೆ ಖುಷಿಯಿದೆ. ನಮಗೆ ಮನೆಯಲ್ಲಿ ಏನು ಕಾಣಿಸುತ್ತದೆಯೋ, ಅದು ಜನರಿಗೆ ಗೊತ್ತಾಗಿದೆ. ನನ್ನ ಮೇಲೆ ವಿಶ್ವಾಸ ಇತ್ತು, ನಾನು ತಪ್ಪು ಮಾಡಿದ್ದೀನಿ, ತಪ್ಪು ಮಾಡಿಲ್ಲ ಅಂತ ಹೇಳೋದಿಲ್ಲ. ಆದರೆ ತಪ್ಪು ತಿದ್ದಿಕೊಂಡು ಹೋಗಿದೀನಿ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

25
ಅಶ್ವಿನಿ ಗೌಡ ಕ್ಷಮೆ ಕೇಳಿದ್ರು

ಅಶ್ವಿನಿ ಗೌಡ ಅವರು ಒಂದಿಷ್ಟು ಮಾತುಗಳನ್ನು ಆಡಿದ್ದರು. ಫಿನಾಲೆ ವೇದಿಕೆಯಲ್ಲಿ ಕೂಡ ಮತ್ತೆ ಕ್ಷಮೆ ಕೇಳಿದ್ದಾರೆ. ಇದರ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ರಕ್ಷಿತಾ ಶೆಟ್ಟಿ ಅವರು, “ನಾನು ಮೊದಲೇ ಅವರನ್ನು ಕ್ಷಮಿಸಿದ್ದೇನೆ. ನನ್ನ ತಾಯಿ ಕೂಡ ಯಾಕೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದೀಯಾ ಎಂದು ಬೈಯುತ್ತಾರೆ. ಅವರಿಗೆ ನನ್ನ ಮೇಲೆ ಕೋಪ ಬಂದರೂ ಕೂಡ ಪ್ರೀತಿ ಇದ್ದೇ ಇರುತ್ತದೆ.

35
ಕಾವ್ಯ, ರಕ್ಷಿತಾ ಮನಸ್ತಾಪ

ಕಾವ್ಯ ಶೈವ ಹಾಗೂ ರಕ್ಷಿತಾ ಶೆಟ್ಟಿ ಅವರಿಗೆ ಆಗುತ್ತಿರಲಿಲ್ಲ. ನಾಮಿನೇಶನ್‌ ವೇಳೆಯೋ ಅಥವಾ ಇನ್ಯಾವುದೋ ವಿಷಯದಲ್ಲಿ ಇವರಿಬ್ಬರು ಪರಸ್ಪರ ಆರೋಪ ಮಾಡಿಕೊಳ್ಳುತ್ತಲಿದ್ದರು. ಈ ಬಗ್ಗೆ ಕೂಡ ರಕ್ಷಿತಾ ಶೆಟ್ಟಿ ಮಾತನಾಡಿದ್ದಾರೆ.

45
ಕಾವ್ಯ ಜೊತೆ ಸ್ನೇಹ ಆಗಲೇ ಇಲ್ಲ

“ಕಾವ್ಯ ಅವರ ಬಗ್ಗೆ ತಿಳಿದುಕೊಳ್ಳೋಕೆ ಆಸಕ್ತಿಯೇ ಇರಲಿಲ್ಲ. ನನ್ನ ವೈಬ್‌ ಹಾಗೂ ಅವರ ವೈಬ್‌ ಮ್ಯಾಚ್‌ ಆಗಲಿಲ್ಲ. ಜಾಲಿಯಾಗಿದ್ದವರ ಜೊತೆ ಜಾಲಿಯಾಗಿ ಇರೋಕೆ ಇಷ್ಟಪಡ್ತೀನಿ. ನಾನು ಕಾವ್ಯ ಅವರ ಟೈಪ್‌ ಅಲ್ಲ, ಹೀಗಾಗಿ ಅವರ ಸರ್ಕಲ್‌ಗೆ ಹೋಗಲಿಲ್ಲ. ನಾನು ಅವರ ಜೊತೆ ಕೂತರೆ ಕಂಫರ್ಟೇಬಲ್‌ ಇಲ್ಲ ಅಂದರೆ ನಾನು ಯಾಕೆ ಹೋಗಬೇಕು?” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

55
ಗಿಲ್ಲಿ ಜೊತೆ ಸ್ನೇಹ

“ಕಾವ್ಯ ಅವರೇ ನನ್ನ ಜೊತೆ ಇರಲು ಬಯಸಿದ್ರೂ ಕೂಡ ಆಗೋದಿಲ್ಲ. ಒಂದು ಸಂಬಂಧ ಇರಬೇಕು ಎಂದರೆ ಎರಡೂ ಕಡೆಯಿಂದ ಪ್ರಯತ್ನ ಇರಬೇಕು. ನಾನು ಬೇಕು ಅಂತ ಗಿಲ್ಲಿ ನಟನ ಜೊತೆ ಇರುತ್ತಿರಲಿಲ್ಲ, ಅದು ಹಾಗೆ ಫ್ಲೋನಲ್ಲಿ ಆಯಿತು” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories