ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯ ಮೂರು ತಿಂಗಳ ನಂತರ, ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಹಿಂದೆ ಆರ್ಯನ್ ಆಗಿ ಕ್ರಿಕೆಟ್ ಆಡುತ್ತಿದ್ದ ಅವರು, ಈಗ ಅನಯಾ ಆಗಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.
ಶಸ್ತ್ರಚಿಕಿತ್ಸೆಯ 3 ತಿಂಗಳ ನಂತರ ಅನಯಾ ಬಂಗಾರ್ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಅನಾಯಾ ನಿರ್ಧಾರ ಮಾಡಿದ್ದೇನು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ.
27
ಹುಡುಗನಾಗಿದ್ದ ಅನಾಯಾ ಬಂಗಾರ್ ಹುಡುಗಿಯಾಗಿ ಬದಲಾಗುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಅಂದಿನಿಂದಲೂ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಕೂಡ ಅವರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಈಗ ಅನಯಾ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರದ ಬಗ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
37
ಅನಯಾ ಬಂಗಾರ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹಳೆಯ ದಿನಗಳಿಗೆ ಮರಳುವ ಬಗ್ಗೆ ಮಾತನಾಡಿದ್ದಾರೆ. ಆದರೆ, ಹಳೆಯ ದಿನಗಳಿಗೆ ಮರಳುವ ಅರ್ಥವೇನು ಎಂದು ಹೆಚ್ಚಿನವರು ಅಚ್ಚರಿ ಪಟ್ಟಿದ್ದಾರೆ.
ವೀಡಿಯೊದಲ್ಲಿ, ಅನಯಾ ಬಂಗಾರ್ ಇತ್ತೀಚೆಗೆ 'ರೈಸ್ ಅಂಡ್ ಫಾಲ್' ರಿಯಾಲಿಟಿ ಶೋನಲ್ಲಿ ಪಡೆದ ಪ್ರೀತಿಗಾಗಿ ತಮ್ಮ ಅಭಿಮಾನಿಗಳಿಗೆ ಮೊದಲು ಧನ್ಯವಾದ ಅರ್ಪಿಸಿದರು. ನಂತರ ಅವರು 3 ತಿಂಗಳ ಹಿಂದೆ ಮಾಡಿದ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಗಿ ಬಹಿರಂಗಪಡಿಸಿದರು.
57
ನಂತರ ವೀಡಿಯೊದಲ್ಲಿ, ಅನಯಾ ಮತ್ತೊಮ್ಮೆ ಕ್ರಿಕೆಟ್ ಮೈದಾನಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಆದರೆ ಈ ಬಾರಿ, ಅವರು ಆರ್ಯನ್ ಆಗಿ ಅಲ್ಲ, ಅನಯಾ ಆಗಿ ಕ್ರಿಕೆಟ್‌ಗೆ ಮರಳುವುದಾಗಿ ಹೇಳಿದ್ದಾರೆ.
67
ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಅವರು ಮೊದಲು ಆರ್ಯನ್ ಬಂಗಾರ್ ಆಗಿದ್ದರು. ಅವರು ಎಡಗೈ ಸ್ಪಿನ್ನರ್ ಆಲ್‌ರೌಂಡರ್ ಆಗಿದ್ದರು. ಆ ಸಮಯದಲ್ಲಿ ಅವರು ವಿರಾಟ್ ಕೊಹ್ಲಿಯಿಂದ ಕ್ರಿಕೆಟ್ ಸಲಹೆಗಳನ್ನು ಸಹ ಪಡೆದರು.
77
ಅನಯಾ ಈಗ ಭಾರತದಲ್ಲಿ ಮಹಿಳಾ ಕ್ರಿಕೆಟ್ ಆಡುತ್ತಾರಾ? ಅಭಿಮಾನಿಗಳಿಗೆ ಶೀಘ್ರದಲ್ಲೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.